ಗುರಿ ಸಾಧನೆಗೆ ಸತತ ಪ್ರಯತ್ನ, ದೃಢ ವಿಶ್ವಾಸ ಮುಖ್ಯ

ವಿಜಯಪುರ, 11 : ನಾವು ಮಾಡುವ ಕಾರ್ಯದಲ್ಲಿ ದೃಢ ವಿಶ್ವಾಸ, ನಂಬಿಕೆ ಇರಬೇಕು. ಜೊತೆಗೆ  ಸತತ ಪ್ರಯತ್ನ ಮಾಡಬೇಕು ಅಂದಾಗ ಮಾತ್ರ ನಾವು ಗುರಿ ಮುಟ್ಟಲು ಸಾಧ್ಯ ಎಂದು ಅಂತರಾಷ್ಟ್ರೀಯ ಖ್ಯಾತ ಉದ್ಯಮಿ ಮತ್ತು ಕಲ್ಪನಾ ಫೌಂಡೇಶನ್ನ ಅಧ್ಯಕ್ಷೆ ಪದ್ಮಶ್ರೀ ಪುರಸ್ಕೃತೆ ಕಲ್ಪನಾ ಸರೋಜಾ ಹೇಳಿದರು.

ನಗರದ ಕನರ್ಾಟಕ ರಾಜ್ಯ ಅಕ್ಕಮಾಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕ ಮತ್ತು ಡಾ. ಬಿ.ಆರ್. ಅಂಬೇಡ್ಕರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ವಿವಿಯ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆದ "ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2020" ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

       ಹಕ್ಕುಗಳನ್ನು ಯಾರು ಕೊಡುವುದಿಲ್ಲ. ಹಕ್ಕುಗಳು ಕೇಳುವುದರಿಂದ ಸಿಗುವುದಿಲ್ಲ. ಕಸಿದುಕೊಳ್ಳಬೇಕು ಎಂದು ಡಾ. ಬಿ.ಆರ್. ಅಂಬೆಡ್ಕರ್ ಅವರ ಮಾತಿನಂತೆ ನಾನು ನನ್ನ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಿ ಮುಂದೆ ನಡೆದೆ. ನಂತರದ ದಿನಗಳಲ್ಲಿ ಸಕ್ಕರೆ ಕಾಖರ್ಾನೆಯ ನಿದರ್ೇಶಕಿಯಾದೆ. ಇದರ ಜೊತೆಗೆ ಬೇರೆ ಎರಡು ಕಂಪನಿಗಳ ನಿದರ್ೇಶಕಿಯಾಗಿ ಕೆಲಸಮಾಡಿದೆ. ನಾನು ಸಹ ಸಾಕಷ್ಟು ಕಷ್ಟಪಟ್ಟು ಇಂದು ಈ ದಿನ ಇಷ್ಟು ಎತ್ತರಕ್ಕೆ ಬಂದು ನಿಂತಿದ್ದೇನೆ ಯಾರಿಗೂ ಸಹ ಕಷ್ಟಗಳು ಬಿಟ್ಟಿದ್ದಲ್ಲ ಆದರೆ ಅಂತಹ ಕಷ್ಟಗಳಿಗೆ ನಾವು ಹೆದರಿ ಹಿಂಜೆರಿಯಬಾರದು ಎಂದು ಹೇಳಿದರು.

ಸಮಾಜದಲ್ಲಿ ಬದುಕಲು ಅನೇಕ ಸಂಘರ್ಷಗಳನ್ನು ಮಾಡಬೇಕಾಗುತ್ತದೆ. ಆತ್ಮವಿಶ್ವಾಸ ನಂಬಿಕೆ ನಿಮ್ಮ ಜೊತೆಗಿದ್ದರೆ ಆ ದೇವರು ನಿಮ್ಮ ಜೊತೆಗೆ ನಿಲ್ಲುತ್ತಾನೆ. ಹೆಣ್ಣು ಮಕ್ಕಳು ಕೇವಲ ಹೆಣ್ಣು ಮಾತ್ರ ಅಲ್ಲ. ನಮ್ಮಲ್ಲಿ ಒಂದು ಶಕ್ತಿಯಿದೆ. ಪ್ರತಿಯೊಬ್ಬರಲ್ಲಿಯೂ ಸರಸ್ವತಿ, ದುಗರ್ೆ, ಕಾಳಿ, ಲಕ್ಷ್ಮಿ, ಹೀಗೆ ನವದುಗರ್ೆಯರ ಶಕ್ತಿ ಇದೆ. ನೀವೆಲ್ಲರೂ ನಿಮ್ಮ ಶಕ್ತಿಗಳನ್ನು ಗುರುತಿಸಿಕೊಂಡು ಮುನ್ನಡೆಯಿರಿ ಎಂದು ವಿದ್ಯಾಥರ್ಿನಿಯರಲ್ಲಿ ಕಿವಿ ಮಾತು ಹೇಳಿದರು.

      ಅತಿಥಿ ಕಮಾನಿ ಗ್ರೂಫ್ ಆಫ್ ಬಾಂಬೆ ವ್ಯವಸ್ಥಾಪಕ ನಿದರ್ೇಶಕ ಮನ್ನನ್ ಗೋರೆ ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ ಹಣದ ಬಲ ಮುಖ್ಯವಾಗಿದೆ. ಅತ್ಯಂತ ಕಡಿಮೆ ಬಂಡವಾಳದಿಂದ ವಿಶ್ವದ ಉನ್ನತ ಹಂತದ ಉದ್ಯಮಿಯಾಗಬಹುದು. ಇದಕ್ಕೆ ಉತ್ತಮ ಮಾದರಿ ಎಂಬತೆ ಪದ್ಮಶ್ರೀ ಪುರಸ್ಕೃತೆ ಕಲ್ಪನಾ ಸರೋಜಾ ಅವರಿದ್ದಾರೆ. ಇಂತಹ ಮಹಿಳೆ ನಿಮಗೆ ಸ್ಪೂತರ್ಿಯಾಗಲಿ. ಯಾವುದೇ ಕಷ್ಟಕ್ಕೂ ಹೆದರದೆ ಮುನ್ನುಗ್ಗಿ ನಿಮ್ಮ ಗುರಿಯ ಮೇಲೆ ನಿಮ್ಮ ಲಕ್ಷ್ಯವಿದ್ದರೆ ಯಾರಿಂದಲೂ ಅದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.

     ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವಿಯ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮಾತನಾಡಿ, ಓದಿ ಮಾತನಾಡುವ ವಿಚಾರಗಳಿಂಗಿಂತ ಅನುಭವದಿಂದ ಮಾತನಾಡುವುದು ತುಂಬಾ ಪರಿಣಾಮ ಬೀರುತ್ತದೆ. ನಾವು ನಮ್ಮಲ್ಲಿನ ಆತ್ಮವಿಶ್ವಾಸ, ನಂಬಿಕೆ, ಧೈರ್ಯವನ್ನು ಗುರುತಿಸಬೇಕು. ಜೀವನದಲ್ಲಿ ಹೆಜ್ಜೆ-ಹೆಜ್ಜೆಗೂ ಸವಾಲುಗಳು ಎದುರಾಗುತ್ತವೆ. ಎದುರಾಗುವ ಸವಾಲುಗಲನ್ನು ಮೆಟ್ಟಿ ನಿಲ್ಲಲ್ಲು ಪ್ರತ್ಯೆಕವಾದ ವ್ಯಾಕ್ಯಾನಗಳು ಇಲ್ಲ. ಪ್ರತಿಯೊಬ್ಬರಿಗೂ ತಮಗಿರುವ ಸಹಾಯ ಸಹಕಾರಗಳಿಂದ ಹಾಗೂ ಧೈರ್ಯದಿಂದ ತಮಗೆ ಎದುರಾಗುವ ಸವಾಲುಗಳಿಗೆ ಉತ್ತರ ಕಂಡುಕೊಳ್ಳಬೇಕು. ನಮ್ಮ ಜೀವನದಲ್ಲಿ ಯಾರೂ ಯಾರಿಗೂ ಸಹ ದಾರಿ ತೋರಿಸಿಕೊಡಲು ಸಾಧ್ಯವಿಲ್ಲ ಬೇರೆಯವರು ಬರೀ ಪ್ರೇರಣೆಯನ್ನು ಮಾತ್ರ ನೀಡಬಲ್ಲರು ನಮ್ಮ ದಾರಿಯನ್ನು ನಾವು ಕಂಡುಕೊಂಡು ಯಶಸ್ಸು ಸಾಧಿಸಬೇಕು ಎಂದು ಹೇಳಿದರು.

      ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಸಚಿವೆ ಪ್ರೊ. ಆರ್ ಸುನಮದಮ್ಮ, ಕಮಾನಿ ಗ್ರೂಪ ಆಫ್ ಬಾಂಬೆ ವ್ಯವಸ್ಥಾಪಕ ಗೋರೆ, ಪ್ರೊ. ಕಣ್ಣನ್, ಪ್ರೊ. ಚಿಂತಾಮಣಿ, ಡಾ. ಶ್ರೀನಿವಾಸ, ಡಾ. ಶಿಂದೆ, ಡಾ. ಕಲಾವತಿ ಕಾಂಬಳೆ, ಭಾರತಿ ಗಾಣಿಗೇರ್, ಡಾ. ಜ್ಯೋತಿ ಉಪಾಧ್ಯಯ, ಡಾ. ಅನಿತಾ, ಡಾ.ರಾಜಕುಮಾರ ಮಾಲಿ ಪಾಟೀಲ್, ಡಾ.ರಮೇಶ್ ಸೋನ ಕಾಂಬಳೆ, ಪ್ರೊ. ಕಾಮಶೆಟ್ಟಿ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು.

     ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾಥರ್ಿನಿಯರು ಮಹಿಳಾ ಗೀತೆ ಹಾಡಿದರು. ಸಂಶೋಧನಾ ವಿದ್ಯಾಥರ್ಿನಿ ರಷ್ಮೀ ರಾಠೋಡ ಪರಿಚಯಿಸಿದರು. ಡಾ.ಬಿ.ಆರ್. ಅಂಬೇಡ್ಕ್ರ ಅಧ್ಯಯನ ಕೇಂದ್ರದ ನಿದರ್ೇಶಕ ಪ್ರೊ. ಡಿ.ಎಂ.ಜ್ಯೋತಿ ಸ್ವಾಗತಿಸಿದರು. ಡಾ. ಹನುಮಂತಯ್ಯಾ ಪೂಜಾರಿ ನಿರೂಪಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕ ನಿದರ್ೇಶಕ ಡಾ. ಸಕ್ಪಾಲ ಹೂವಣ್ಣ ವಂದಿಸಿದರು.