ಭಯವನ್ನು ಗೆಲ್ಲುವುದು ಜೀವನದಲ್ಲಿ ಮೊದಲ ವಿಜಯ: ಬೊಮ್ಮಕ್ಕನವರ
Conquering fear is the first victory in life: Bommakkanavara
ಲೋಕದರ್ಶನ ವರದಿ
ಧಾರವಾಡ 31: ಭಯವನ್ನು ಗೆಲ್ಲುವುದು ಜೀವನದಲ್ಲಿ ಮೊದಲ ವಿಜಯ. ಆದರೆ, ಧೈರ್ಯದಿಂದ ನಡೆದು ಆತ್ಮ ಶಕ್ತಿಯನ್ನು ಅರಿತು ಮುಂದುವರೆಯುವುದು ಶ್ರೇಷ್ಠ ವಿಜಯ. ಪರೀಕ್ಷೆ ಎಂಬ ಭಯ ಬೇಡ. ಧೈರ್ಯದಿಂದ ಪರೀಕ್ಷೆಗೆ ಹಾಜರಾಗಿ ಉತ್ತಮ ಫಲಿತಾಂಶ ಪಡೆಯಿರಿ ಎಂದು ಹುಬ್ಬಳ್ಳಿಯ ಬಿ.ಇ.ಓ ಗ್ರಾಮೀಣ ವಿಭಾಗದ ಉಮೇಶ ಬೊಮ್ಮಕ್ಕನವರ ಹೇಳಿದರು.
ಅವರು ಧಾರವಾಡದ ವಿದ್ಯಾಗಿರಿಯ ಜೆ,ಎಸ್.ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ 2025-26 ನೇ ಸಾಲಿನ ಶಾಲಾ ವಾರ್ಷಿಕೋತ್ಸವಕ್ಕೆ ಮುಕ್ಯ ಅತಿಥಿಗಳಾಗಿ ಆಗಮಿಸಿ ಕಾರ‌್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಜೆ.ಎಸ್.ಎಸ್ ಸಂಸ್ಥೆ ಒಂದು ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡ ಸಂಸ್ಥೆಯಾಗಿದ್ದು ಇಲ್ಲಿರುವ ಮಣ್ಣಿನ ಪ್ರತಿ ಕಣವು ಸಂಸ್ಕಾರದಿಂದ ಕೂಡಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ನೋಡು ಎಂಬಂತೆ ಇಲ್ಲಿನ ಮಕ್ಕಳು ಸಹ ಅಷ್ಟೆ ಶಿಸ್ತು, ಸಂಯಮ ರೂಢಿಸಿಕೊಂಡಿದ್ದು, ಉತ್ತಮ ಶಿಕ್ಷಕರ ಭೋದನೆಯಿಂದ ಒಳ್ಳೆಯ ಜ್ಞಾನ ಪಡೆದುಕೊಂಡಿದ್ದಾರೆ. ಈ ಬಾರಿ ಎಸ್.ಎಸ್.ಎಲ್.ಸಿ ಮಕ್ಕಳು ನೂರಕ್ಕೆ ನೂರು ಪ್ರತಿಶತ ಫಲಿತಾಂಶವನ್ನು ಪಡೆಯಲಿದ್ದಾರೆ ಎಂದು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಜನತಾ ಶಿಕ್ಷಣ ಸಮಿತಿಯ ಆಡಳಿತ ಅಧಿಕಾರಿಗಳಾದ ಪ್ರಸಾದ ಅವರು ಮಾತನಾಡಿ ನಮ್ಮ ಸಂಸ್ಥೆಯು ಬೆಳೆದು ಬಂದ ರೀತಿ, ವಿಜಯದ ಶಿಖರವನ್ನೆರಿದ ಸಾಧಕರಲ್ಲಿ ಕನ್ನಡ ಮಾಧ್ಯಮದಲ್ಲೇ ಕಲಿತು ಸಾಧಕರಾದವರೇ ಹೆಚ್ಚು. ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ, ವಾರ್ಷಿಕ ಪರೀಕ್ಷೆಗಳು ಸನಿಹದಲ್ಲಿದ್ದು, ವಿದ್ಯಾರ್ಜನೆಯ ಕಡೆ ಗಮನ ಕೊಡಿ, ತಿಳಿಯದೇ ಇರುವ ವಿಷಯಗಳನ್ನು ಶಿಕ್ಷಕರ ಹತ್ತಿರ ಕೇಳಿ ಪರಿಹರಿಸಿಕೊಂಡು ಪರೀಕ್ಷೆಗೆ ತಯಾರಾಗಿ. ಮಕ್ಕಳು ಧೃಡ ಮನಸ್ಸನ್ನು, ಏಕಾಗ್ರತೆಯಿಂದ ವಿದ್ಯೆಯನ್ನು ಪಡೆಯಬೇಕೆಂದು ಮಹಾಭಾರತದ ಒಂದು ಸುಂದರ ಕಥೆಯ ಮೂಲಕ ಮಕ್ಕಳಿಗೆ ತಿಳಿಸಿ ಅಧ್ಯಕ್ಷೀಯ ಪರ ನುಡಿಗಳನ್ನಾಡಿದರು.
ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆ, ಶಾಲೆಯ ಪ್ರಾಂಶುಪಾಲರಾದ ಮೈನಾವತಿ ದಿವಟೆ, ತ್ರಿವೇಣಿ. ಆರ್. ಸುಧಾಮಣಿ ರಾವ್, ಜ್ಯೋತಿ ಕಟಗಿ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಮಹಾಂತೇಶ ಕಬನೂರ ಸ್ವಾಗತಿದರು. ಮಂಜುನಾಥ ದಾಸನಕೊಪ್ಪ ವಾರ್ಷಿಕ ವರದಿ ವಾಚನ ಮಾಡಿದರು. ಶ್ಯಾಮಲಾ ಹೆಗಡೆ ಅವರು ವಂದಿಸಿದರು ಹಾಗೂ ಶೀತಲ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಎಲ್ಲ ಶಿಕ್ಷಕ ವೃಂದದವರು ಮುದ್ದು ಮಕ್ಕಳು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 