ಸಿಎಎ ವಿಷಯದಲ್ಲಿ ಕಾಂಗ್ರೆಸ್ನಿಂದ ಮತಬ್ಯಾಂಕ್ ರಾಜಕಾರಣ: ಬೈರಪ್ಪ ಟೀಕೆ

ಮೈಸೂರು, ಜ.10           ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಮತ-ಬ್ಯಾಂಕ್ ರಾಜಕೀಯವನ್ನು ಅನುಸರಿಸುತ್ತಿವೆ. ಈ ವಿಷಯದಲ್ಲಿ ದೇಶವನ್ನು ದಾರಿ ತಪ್ಪಿಸುತ್ತಿವೆ ಎಂದು  ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್. ಎಲ್ . ಭೈರಪ್ಪ ಆರೋಪಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ದೇಶದ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕಂದಕ ಸೃಷ್ಟಿಸಿದ್ದ ಬ್ರಿಟಿಷರು ಅನುಸರಿಸಿದ್ದ ಒಡೆದ ಆಳುವ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ ಎಂದು ಆರೋಪಿಸಿದರು. 

ಸ್ವಾತಂತ್ರ್ಯದ ನಂತರವೂ ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಅನ್ನು ವಿಸ್ತರಿಸಲು ಮತ್ತು ಕ್ರೋಢೀಕರಿಸಲು ಪ್ರಯತ್ನಿಸುತ್ತಲೇ ಬಂದಿದೆ. ಆದ್ದರಿಂದ ಅಂದಿನ ಪೂರ್ವ ಪಾಕಿಸ್ತಾನದಿಂದ ಅಸ್ಸಾಂಗೆ ಮುಸ್ಲಿಮರನ್ನು ಅಕ್ರಮವಾಗಿ ವಲಸೆ ಬರುವಂತೆ ಪ್ರೋತ್ಸಾಹಿಸಿತು. ಬಾಂಗ್ಲಾದೇಶದ ರಚನೆಯ ನಂತರವೂ ಇದು ನಿಲ್ಲಲಿಲ್ಲ ಎಂದು ಹೇಳಿದ ಅವರು, ಪಶ್ಚಿಮ ಬಂಗಾಳವನ್ನು 23 ವರ್ಷಗಳ ಕಾಲ ಆಳಿದ ಎಡಪಕ್ಷಗಳು ಸಹ ರಾಜ್ಯಕ್ಕೆ ಅಕ್ರಮ ವಲಸೆಗೆ ಅವಕಾಶ ಮಾಡಿಕೊಟ್ಟವು, ಅಲ್ಲಿಂದ ವಲಸಿಗರು ಭಾರತದ ಉಳಿದ ಭಾಗಗಳಿಗೆ ಚದುರಿಹೋಗಿದ್ದಾರೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಿಎಎ ಜಾರಿಗೊಳಿಸಿದ್ದು, ಇದರಿಂದ ದೇಶದ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಭಯಗೊಂಡಿವೆ. ಆದ್ದರಿಂದ ಅವರು ಈಗ ಒಗ್ಗಟ್ಟಾಗಿದ್ದಾರೆ ಮತ್ತು ರಾಷ್ಟ್ರದಾದ್ಯಂತ ಪ್ರಸ್ತುತ ಕೋಲಾಹಲ ಸೃಷ್ಟಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಹಿಂದೂ ಸಮಾಜವನ್ನು ಜಾತಿ ಆಧಾರದಲ್ಲಿ ವಿಭಜಿಸುವ ಬ್ರಿಟಿಷರ ನೀತಿಯನ್ನು ದೇಶದ ಪ್ರಥಮ ಪ್ರಧಾನಮಂತ್ರಿ ಜವಾಹರ ಲಾಲ್ ನೆಹರೂ ಅನುಸರಿಸಿ, ಈ ಮೂಲಕ ಮುಸ್ಲಿಮ್ ಮತಗಳನ್ನು ಧ್ರುವೀಕರಣಗೊಳಿಸಿದರು ಎಂದು ಆರೋಪಿಸಿದರು. 

ಮೋದಿಯವರು ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಮೂಲಕ ತಕ್ಕ ಪಾಠ ಕಲಿಸಿದರು. ಇದಕ್ಕೆ ಸಾರ್ವಜನಿಕರಿಂದ ಬೆಂಬಲ ಕೂಡ ದೊರೆಯಿತು. ಇದರಿಂದ ಕಾಂಗ್ರೆಸ್ ಹೆದರಿದ್ದು, ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯವರು ಗೆಲ್ಲುತ್ತಾರೆ ಎಂಬ ಭಯ ಅವರಲ್ಲಿ ಆವರಿಸಿದೆ. ಆದ್ದರಿಂದ ಸಿಎಎಯನ್ನು ಒಂದು ನೆಪವಾಗಿ ಬಳಸುತ್ತಿದ್ದಾರೆ ಎಂದು ಅವರು ಹೇಳಿದರು.

ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದು ಕೂಡ ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಕಾಂಗ್ರೆಸ್ ಇದರಿಂದ ಬೆದರಿದೆ ಎಂದು ಆರೋಪಿಸಿದರು.

ಸಿಎಎ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆದಿಲ್ಲ ಎಂಬ ಆರೋಪವನ್ನು ನಿರಾಕರಿಸಿದ ಅವರು, ಇದು ಸಂಸತ್ತಿನಲ್ಲಿ ಚಚರ್ೆಯಾಗಿದೆ.  ನಿಮಗೆ ಇನ್ನೇನು ಬೇಕು?  ಎಂದು ಪ್ರಶ್ನಿಸಿದರು.    

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಭೈರಪ್ಪ, ಎಡ ಪಕ್ಷಗಳು ಇಲ್ಲಿ ನಿರಂತರ ಪ್ರತಿಭಟನೆ, ಮುಷ್ಕರ ನಡೆಸಿದ ಇತಿಹಾಸ ಇದೆ.  ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಎಡ ಸಿದ್ಧಾಂತವನ್ನು ಬೆಂಬಲಿಸುವ ವಿದ್ಯಾರ್ಥಿಗಳ ಒಂದು ಗುಂಪು ಅಸ್ತಿತ್ವದಲ್ಲಿದೆ. ಅವರಿಗೆ ಮುಷ್ಕರ ನಡೆಸುವುದೇ ಕೆಲಸ ಎಂದು ಅವರು ಆರೋಪಿಸಿದರು. 

ವಿದ್ಯಾಥರ್ಿಗಳು ಉತ್ತಮ ಗ್ರಂಥಾಲಯ ಸೌಲಭ್ಯಗಳು, ಪ್ರಯೋಗಾಲಯದ ಉನ್ನತೀಕರಣ ಇತ್ಯಾದಿಗಳಿಗೆ ಬೇಡಿಕೆ ಇಡಬೇಕು. ತರಗತಿ ಕೋಣೆಗಳಲ್ಲಿ ಪ್ರಾಧ್ಯಾಪಕರನ್ನು ಪ್ರಶ್ನಿಸಬೇಕು. ಅದನ್ನು ಬಿಟ್ಟು ತೆರಿಗೆ ಪಾವತಿದಾರರ ಹಣದಿಂದ ವಿಶ್ವವಿದ್ಯಾಲಯಕ್ಕೆ ಧನಸಹಾಯ ನೀಡುತ್ತಿರುವುದರಿಂದ ಮುಷ್ಕರಗಳಲ್ಲಿ ಪಾಲ್ಗೊಳ್ಳಬಾರದು ಎಂದು ಅವರು ಹೇಳಿದರು.

ಭಾರತೀಯ ವಿಶ್ವವಿದ್ಯಾನಿಲಯವು ವಿಶ್ವದ ಅಗ್ರ 200 ವಿಶ್ವವಿದ್ಯಾಲಯಗಳಲ್ಲಿ ಒಂದೂ ಇಲ್ಲ ಎಂಬುದರ ಬಗ್ಗೆ ವಿದ್ಯಾರ್ಥಿಗಳು ಚಿಂತಿಸಬೇಕು" ಎಂದು ಅವರು ಹೇಳಿದರು.