ಅನರ್ಹರೆಲ್ಲ ಬಹುತೇಕ ಸೋತಿದ್ದು, ಕಾಂಗ್ರೆಸ್ 12 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ: ದಿನೇಶ್ ಗುಂಡೂರಾವ್

ಹುಣಸೂರು, ನ 24 :  ಮತದಾನಕ್ಕೂ ಮುನ್ನವೇ ಅನರ್ಹ ಶಾಸಕರೆಲ್ಲರೂ ಬಹುತೇಕ ಸೋತಿದ್ದು, ಕಾಂಗ್ರೆಸ್ ಕನಿಷ್ಠ 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭವಿಷ್ಯ ನುಡಿದಿದ್ದಾರೆ.  

ಕಾಂಗ್ರೆಸ್ ಅಭ್ಯಥರ್ಿ ಮಂಜುನಾಥ್ ಪರ ಪ್ರಚಾರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಗುಜರಾತ್, ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯದಲ್ಲಿ ಅನರ್ಹರು ಸೋತಿದ್ದಾರೆ. ಕನರ್ಾಟಕದಲ್ಲೂ ಅನರ್ಹರು ಪರಾಭವಗೊಳ್ಳುವುದು ಖಚಿತ. ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು  ಗೆಲ್ಲಲಿದೆ. ಉಪ ಚುನಾವಣೆ ಫಲಿತಾಂಶ ಯಡಿಯೂರಪ್ಪ ಸಕರ್ಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂದಿದ್ದಾರೆ.  

ಬೇರೆ ರಾಜ್ಯಗಳಲ್ಲಿ ರಾಜೀನಾಮೆ ನೀಡಿ ಪಕ್ಷಾಂತರ ಮಾಡಿದವರಿಗೆ ಮತದಾರರು ಬುದ್ದಿ ಕಲಿಸಿದ್ದಾರೆ. ರಾಜ್ಯದಲ್ಲಿಯೂ ಇದೆ ಪರಿಸ್ಥಿತಿ ನಿಮರ್ಾಣವಾಗಲಿದೆ. ಡಿಸೆಂಬರ್ 9ರ ನಂತರ ಬಿಜೆಪಿ ಸಕರ್ಾರ ಅಸ್ತಿತ್ವದಲ್ಲಿ ಇರುವುದಿಲ್ಲ. ಆಗ ಬೇರೆಯದೇ ಬೆಳವಣಿಗೆ ಆಗಲಿದೆ. ಬರುವ ದಿನಗಳಲ್ಲಿ ಆ ಬಗ್ಗೆ ಮಾತನಾಡುತ್ತೇವೆ ಎಂದರು.  

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ವಿಶ್ವನಾಥ್ ಮೆಚ್ಚುಗೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅಭ್ಯಥರ್ಿ ಹೆಚ್.ವಿಶ್ವನಾಥ್ ಓರ್ವ ಬೆಲೆ ಇಲ್ಲದ ಮನುಷ್ಯ. ಹೀಗಾಗಿ ಅವರ ಯಾವ ಹೇಳಿಕೆಗೂ ಮೌಲ್ಯವಿಲ್ಲ ಎಂದು ವ್ಯಂಗ್ಯವಾಡಿದರು.  

ವಿಶ್ವನಾಥ್ ಅವರು ಸೋಲಿನ ಭೀತಿಯಿಂದ ಹಾಗೇ ಹೇಳುತ್ತಿದ್ದಾರೆ. ಅವರ ಮಾತುಗಳಿಗೆ ಏನು ಬೆಲೆ ಇದೆ ಹೇಳಿ ಎಂದು ಪ್ರಶ್ನಿಸಿದ ಅವರು,  

ತಮಗೆ ಬೇಕಾದಾಗ ಹೊಗಳಿ ಅಗತ್ಯವಿಲ್ಲದಿದ್ದಾಗ ಟೀಕಿಸುತ್ತಾರೆ ಎಂದರು.  

ಎಲ್ಲ ಸಿದ್ಧಾಂತಗಳನ್ನು ಬಿಟ್ಟು ಜೀವಮಾನದಿಂದ ಟೀಕಿಸಿದ್ದ ಬಿಜೆಪಿಗೆ ಅವರು ಸೇರಿದ್ದಾರೆ. ಇವರೆಂತಹ ನಾಯಕರು?. ವಿಶ್ವನಾಥ್ ಕಾಂಗ್ರೆಸ್ನಲ್ಲಿ ಸಚಿವರಾಗಿರಲಿಲ್ಲವೆ?. ಅವರು ಮಂತ್ರಿ ಆಗುವುದೆ  ದೊಡ್ಡದು ಎಂದು ಕೊಂಡಿದ್ದಾರೆ. ಅವರಿಗೆ ಮತದಾರರು ಪಾಠ ಕಲಿಸಲಿದ್ದಾರೆ ಎಂದರು.  

ಡಾ.ಸುಧಾಕರ್ ಕೆಟ್ಟವರ ಕ್ಯಾಪ್ಟನ್ ಆಗಿದ್ದು, 17 ಅನರ್ಹರಲ್ಲಿ ಅತಿ ಹೆಚ್ಚು ಸುಳ್ಳು ಹೇಳುತ್ತಾರೆ. ಕೊನೆಯ ದಿನದವೆರೆಗೂ ನಿಮ್ಮ ಜೊತೆ ಇರುತ್ತೇನೆ ಎಂದು ತಮಗೆ ಸಂದೇಶ ಕಳುಹಿಸಿದ್ದರು. ಅವರನ್ನು ಬೆಳೆಸಿದ ಸಿದ್ದರಾಮಯ್ಯ ಅವರಿಗೂ  ಮೋಸ ಮಾಡಿದರು.  ಅವರಂತಹ ಸುಳ್ಳುಗಾರ ಮತ್ತೊಬ್ಬರಿಲ್ಲ ಎಂದು ಟೀಕಿಸಿದರು.  

ಸುಧಾಕರ್ ನನ್ನ ಬಗ್ಗೆ ಮಾತನಾಡುವುದು ಬೇಡ. ಚುನಾವಣೆ ಎದುರಿಸುತ್ತಿರುವುದು ಅವರು. ನನ್ನ ಬಗ್ಗೆ ಯಾಕೆ ವೈಯುಕ್ತಿಕ ಟೀಕೆ ಮಾಡಬೇಕು?. ವಸೂಲಿ ಯಾರು ಮಾಡುತ್ತಾರೆ ಅವರ ಕ್ಷೇತ್ರದಲ್ಲಿ ಹೋಗಿ ನೋಡಿ ಗೊತ್ತಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಎಂಟಿಬಿ ನಾಗರಾಜ್ ಅವರಿಗೆ  ದುಡ್ಡಿನ ಮದವಿದ್ದು, ಅವರು ಸಾವಿರಾರು ಕೋಟಿಯ ಶ್ರೀಮಂತ ವ್ಯಕ್ತಿ.  ಆದ್ದರಿಂದ ಅವರಿಗೆ ಅಹಂಕಾರ ತಲೆಗೆ ಏರಿದೆ ಎಂದು ವಾಗ್ದಾಳಿ ನಡೆಸಿದರು.  

ದುಡ್ಡು ಜಾಸ್ತಿಯಾಗಿ ಎಲ್ಲವೂ ನಾನೇ ಮಾಡಿದೆ. ಎಲ್ಲವೂ ನನ್ನಿಂದ ಆಯಿತು ಎನ್ನುತ್ತಿದ್ದಾರೆ. ಇದು ಅವರಿಗೆ ಒಳ್ಳೆಯದಲ್ಲ. ಚುನಾವಣೆಯಲ್ಲಿ ಈಗಲೇ ಮೂರನೆ ಸ್ಥಾನದಲ್ಲಿದ್ದಾರೆ. ಇದೇ ರೀತಿ ದುರಹಂಕಾರದ ಹೇಳಿಕೆ ಕೊಟ್ಟರೆ. ಅದು ಅವರ ಅದಃಪತನಕ್ಕೆ ಕಾರಣವಾಗುತ್ತದೆ ಎಂದರು.  

ಅವರ ಸಾಲದ ಹೇಳಿಕೆ ಬಗ್ಗೆ ಆಯೋಗಕ್ಕೆ ದೂರು ಕೊಟ್ಟಿದ್ದೇನೆ. ಪಕ್ಷಕ್ಕೆ ಸಾಲ ನೀಡಿದರೆ, ಮಾಹಿತಿಯನ್ನು ಪ್ರಮಾಣಪತ್ರದಲ್ಲಿ ಏಕೆ ಉಲ್ಲೇಖಿಸಿಲ್ಲ ಎಂದು ಅವರು ಪ್ರಶ್ನಿಸಿದರು.  

ಉಪಚುನಾವಣೆಯಲ್ಲಿ  ಕಾಂಗ್ರೆಸ್ ಪ್ರಮುಖ ನಾಯಕರ ಗೈರು ವಿಚಾರ ಕುರಿತು ಮಾತನಾಡಿದ ಅವರು,  

ಎಲ್ಲರೂ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ದೂರಲು ವಿಚಾರಗಳಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಒಂಟಿ ಎಂದು  ಹೇಳುತ್ತಿದ್ದಾರೆ ಎಂದರು.  

ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ ಅನಾಆರೋಗ್ಯದ ಕಾರಣ ಪ್ರಚಾರಕ್ಕೆ ಬಂದಿರಲಿಲ್ಲ. ಡಿಕೆ ಶಿವಕುಮಾರ್ ಅವರು  ನಾಳೆಯಿಂದ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. 

ಮಲ್ಲಿಕಾಜರ್ುನ ಖಗರ್ೆಯವರು ಮಹಾರಾಷ್ಟ್ರದ ಉಸ್ತುವಾರಿವಿರುವ ಕಾರಣ, ಅಲ್ಲಿನ ರಾಜಕೀಯ ಸಮಸ್ಯೆ ಬಗೆಹರಿದ ನಂತರ ಹಿಂದಿರುಗುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಎಲ್ಲಾ ನಾಯಕರು ಪ್ರಚಾರ ನಡೆಸುತ್ತಿದ್ದೇವೆ. ಈ ಬಾರಿ ನಾವು ಹೆಚ್ಚು ಸ್ಥಾನ ಗೆಲ್ಲುವ ಮೂಲಕ  ಬಿಜೆಪಿಗೆ ಮುಖಭಂಗ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.