ಶಾಸಕ ಸೋಮಶೇಖರ ರೆಡ್ಡಿ ಬಂಧಿಸಲು ಕಾಂಗ್ರೆಸ್ ಒತ್ತಾಯ

ಲೋಕದರ್ಶನ ವರದಿ ಸಿರುಗುಪ್ಪ 7: ಬಳ್ಳಾರಿ ನಗರದ ಸಾರ್ವಜನಿಕ ಸ್ಥಳದಲ್ಲಿ ಕೋಮು ಗಲಭೆಯ ಪ್ರಚೋದನಾಕಾರಿ ಹೇಳಿಕೆ ನೀಡಿದ ಶಾಸಕ ಜಿ ಸೋಮಶೇಖರ ರೆಡ್ಡಿ ವಿರುದ್ಧ ಐಸಿಪಿ ಕಲಂ 153ಎ,295ಎ, ಹಾಗೂ 499ಅಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಳ್ಳಾರಿ ಕಾಂಗ್ರೆಸ್ ಮುಖಂಡರು ಒತ್ತಾಯಿಸಿ ಸೋಮವಾರ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಹಾಗೂ ಐಜಿಪಿ ನಂಜುಂಡಸ್ವಾಮಿ ಅವರಿಗೆ ದೂರನ್ನು ಸಲ್ಲಿಸಿ ಸೋಮಶೇಖರ ರೆಡ್ಡಿಗೆ ತಕ್ಷಣವೇ ಬಂಧಿಸಿ ಕಠಿಣ ಕಾನೂನು ಜರುಗಿಸಿ ಎಂದು ಒತ್ತಾಯಿಸಿದರು ರೆಡ್ಡಿ ಸಾರ್ವಜನಿಕ ಸ್ಥಳದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದು ಗಲಭೆಗೆ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ ರೆಡ್ಡಿ ವಿರುದ್ಧ ಕಠಿಣ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಬಳ್ಳಾರಿ ಜಿಲ್ಲೆಯಲ್ಲಿ ಜನತೆಗೆ ಶಾಂತಿ ನೆಮ್ಮದಿಗೆ ಧಕ್ಕೆ ಉಂಟಾಗುತ್ತದೆ. ಮೇಲಾಧಿಕಾರಿಗಳು ಸಹ ರೆಡ್ಡಿ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳಬೇಕು ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಮರು ಶಾಂತಿ ಸಹೋದರರಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ಸೋಮಶೇಖರ ರೆಡ್ಡಿ ವಿಷ ಬಿತ್ತಿ ಗಲಭೆಗೆ ಕಾರಣವಾಗುವಂತಹ ಮಾತನಾಡಿದ್ದು ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಕನರ್ಾಟಕ ವಿಧಾನ ಪರಿಷತ್ ಸದಸ್ಯ ಲೋಕಸಭಾ ಮಾಜಿ ಸದಸ್ಯ ಕೆ.ಸಿ ಕೊಂಡಯ್ಯ, ರಾಜ್ಯಸಭಾ ಸದಸ್ಯ ಡಾ ಸಯ್ಯದ್ ನಾಸಿರ್ ಹುಸೈನ್,ಕನರ್ಾಟಕ ವಿಧಾನ ಪರಿಷತ್ ಸದಸ್ಯ ಮಾಜಿ ವಾತರ್ಾ ಮಂತ್ರಿಗಳು ಕನರ್ಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಮಾಜಿ ಅಧ್ಯಕ್ಷರು ಅಲ್ಲಂವೀರಭದ್ರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್ ಆಂಜಿನೇಯಲು, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಕೆ ವೆಂಕಟೇಶ ಹೆಗಡೆ,ಬುಡಾ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್,ಜಿಲ್ಲಾ ಪಂಚಾಯತ್ ಸದಸ್ಯ ಅಲ್ಲಂ ಪ್ರಶಾಂತ್, ಬಳ್ಳಾರಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷ ಸೆ?ಯದ್ ಮೊಯಿನುದ್ದಿನ್ ಖಾದ್ರಿ,ಮುಂಡರಗಿ ನಾಗರಾಜ್, ಗಿರಿಮಲ್ಲಪ್ಪ, ವಿಷ್ಣುವರ್ಧನ, ಬೋಯಪಾಟಿ, ಮಹಿಳೆಯರು ನೂರಾರು ಕಾರ್ಯಕರ್ತರಿದ್ದರು. ಧರ್ಮದ ಆಧಾರದಲ್ಲಿ ಮುಸ್ಲಿಮೇತರ ವಲಸಿಗರಿಗೆ ಮಾತ್ರ ಪೌರತ್ವ ನೀಡುವ ನಡೆಯ, ಜನಾಂಗ, ಧರ್ಮ, ಮತ್ತು ಜಾತಿಯ ಆಧಾರದಲ್ಲಿ ನಾಗರಿಕರಿಗೆ ಹಕ್ಕುಗಳನ್ನು ನಿರಾಕರಿಸುವುದನ್ನು ನಮ್ಮ ಸಂವಿಧಾನವು ನಿಷೇಧಿಸುತ್ತದೆ. ಸಂವಿಧಾನದಲ್ಲಿ ಸಮಾನತೆಗೆ ಮಹತ್ವ ಸ್ಥಾನ ನೀಡಲಾಗಿದೆ. ಸಮಾನತೆಯನ್ನು ಎತ್ತಿ ಹಿಡಿಯುವ ಭಾರತ ದೇಶದ ಬದ್ಧತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಎಲ್ಲರಿಗೂ ಧಕ್ಕೆ ತರುವುದು ನಿಜ. ಈ ಪೌರತ್ವ ತಿದ್ದುಪಡಿ ಕಾಯಿದೆಯ ಮೂಲದಲ್ಲೇ ತಾರತಮ್ಯವಿದೆ ವಿಶ್ವಸಂಸ್ಥೆ ತಾಕೀತು ಮಾಡಿದೆ ಎಂದು ಕನರ್ಾಟಕ ವಕ್ಫ್ ಮಂಡಳಿ ಬಳ್ಳಾರಿ ಜಿಲ್ಲಾ ಮಾಜಿ ಸದಸ್ಯ ಜನಾಭಿಪ್ರಾಯ ಮುಖಂಡ ಹಾಜಿ ಎ.ಅಬ್ದುಲ್ ನಬಿ ಚಿಸ್ತಿ ನಿಜಾಮಿ ತಿಳಿಸಿದರು. ದೇಶದಲ್ಲಿ ಸರ್ವಧಮರ್ಿಯರಿಗೂ ಶಾಂತಿ- ಸೌಹಾರ್ದದಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಕೇಂದ್ರ ಸಕರ್ಾರ ಸಾರ್ವಜನಿಕರ ಅಭಿಪ್ರಾಯ ಭಿನ್ನಾಭಿಪ್ರಾಯ ಕೇಳುವ ಸ್ಥಿತಿಯಲ್ಲಿಲ್ಲ ಇದು ಪ್ರಜಾಪ್ರಭುತ್ವಕ್ಕೆ ಮಾರಕ ಮತ್ತು ಪ್ರಕ್ರಿಯೆಯಲ್ಲಿ ತೊಂದರೆ ಗೀಡಾಗಬೇಕಾಗುತ್ತದೆ ಎಂದರು ತಾಲ್ಲೂಕು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಹಾಜಿ ಹಂಡಿ ಹುಸೇನ್ ಬಾಷಾ ಇತರರು ಇದ್ದರು.