ಶಿಗ್ಗಾವಿ 11 : ಪಟ್ಟಣದ ಸಂತೆ ಮೈದಾನದಲ್ಲಿ ಕೇಂದ್ರ ಸರ್ಕಾರದ ದಿನಬಳಕೆ ವಸ್ತುಗಳ ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ದರಗಳನ್ನು 15 ವರ್ಷಗಳಿಂದಲೂ ಏರಿಸುತ್ತದೆ ಬಂದಿರುವ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ಇದರಿಂದ ಸಂಪೂರ್ಣ ವ್ಯವಸ್ಥೆಗೆ ದೊಡ್ಡ ನಷ್ಟವಾಗಿದೆ ರಾಜ್ಯದ ಸಂಸದರು ಸಹ ಈ ಬಗ್ಗೆ ಚಕಾರ ಎತ್ತುವುದಿಲ್ಲ ಕನ್ನಡಿಗರಿಗೆ ಅನ್ಯಾಯವಾದರೆ ಕೇಂದ್ರ ಸರ್ಕಾರಕ್ಕೆ ಆಗ್ರಹ ಇರಲಿ.
ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ದರವಿರೋಧ ರೀತಿ ಅಂತ ಪ್ರತಿಭಟನೆ ಮಾಡುತ್ತಿದ್ದು ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆ ನೀತಿಗೆ ಖಂಡಿಸುವ ಧೈರ್ಯವನ್ನಾದರೂ ಮಾಡಲಿ ಜನಸಾಮಾನ್ಯರ ಹೊಟ್ಟೆ ಮೇಲೆ ಬರೆಯುತ್ತಿರುವ ಕೇಂದ್ರ ಸರ್ಕಾರದ ನೀತಿಯಿಂದ ಜನ ಆಕ್ರೋಶ ಗೊಳ್ಳುವದರಲ್ಲಿ ಯಾವುದೇ ಸಂದೇಹವಿಲ್ಲ ರಾಜ್ಯ ಬಿಜೆಪಿ ಮುಖಂಡರು ಜನಾಕ್ರೋಶ ಅಂತ ಜನರನ್ನು ದಿಕ್ಕು ತಪ್ಪಿಸುವುದನ್ನು ಬಿಟ್ಟು ಜನರ ಸಂಕಷ್ಟಕ್ಕೆ ನೆರವಾಗಲಿ ಎಂದು ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆ ನೀತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರುಗಳಾದ ಸುಲೇಮಾನ್ ತರ್ಲಘಟ್ಟ, ಮುಸ್ತಾಕ ಅಹ್ಮದ ತಹಸೀಲ್ದಾರ, ಪರ್ವಿಜ್ ಮುಲ್ಲಾ, ಮಂಜುನಾಥ ಮಣ್ಣಣ್ಣವರ, ಮುಕ್ತಿಯಾರ ತಿಮ್ಮಾಪುರ, ರಶೀದ ಗೊಟಗೋಡಿ,ಚಂದ್ರು ಕೊಡ್ಲಿವಾಡ, ಮಹೋಲ್ ಸಾಧಿಕ್ ಮೊಗಲಲ್ಲಿ, ನೀರಲಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.