ವ್ಯಕ್ತಿ ಅಥವಾ ಅಭಿವೃದ್ಧಿ ಮುಖ್ಯನಾ ಎಂದು ಕಾಂಗ್ರೆಸ್‌ ನಾಯಕರಿಗೆ ಈಗ ಅರಿವಾಗಿರಬೇಕು: ಡಾ. ಕೆ. ಸುಧಾಕರ್

ಡಾ. ಕೆ. ಸುಧಾಕರ್

ಬೆಂಗಳೂರು, ಡಿ ೯-ಕಾಂಗ್ರೆಸ್ ನಾಯಕರು ಬಡಾಯಿ‌ ಕೊಚ್ಚಿಕೊಳ್ಳುತ್ತಿದ್ದರು. ಆದರೆ, ಅವರಿಗೆ ಈಗ ಗೊತ್ತಾಗಿದೆ ವ್ಯಕ್ತಿ‌ ಮುಖ್ಯನಾ ಅಥವಾ ಅಭಿವೃದ್ದಿ ಮುಖ್ಯನಾ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ‌ ಪರ ನಿಂತು ಚೊಚ್ಚಲ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ಅವರು, " ಮೊದಲನೆಯದಾಗಿ ಮತದಾರರಿಗೆ ನಮನ‌ ಸಲ್ಲಿಸಲು ಇಚ್ಚಿಸುತ್ತೇನೆ. ಹಿಂದಿನ‌ ಸಭಾಧ್ಯಕ್ಷ  ನನ್ನನ್ನ ಅನರ್ಹರನ್ನಾಗಿ ಮಾಡಿದ್ದರು. ಆದರೆ, ಜನ ನನ್ನ ಕೈ ಬಿಡಲಿಲ್ಲ. 35 ಸಾವಿರ  ಅಂತರದಿಂದ ಗೆಲ್ಲಿಸಿದ್ದಾರೆ," ಎಂದು ಬೀಗಿದರು.

"ಅಂತಃಕರಣದಿಂದ‌ ರಾಜೀನಾಮೆ ಕೊಟ್ಟ ಮೇಲೆ ನನ್ನನ್ನು ಅನರ್ಹ ಮಾಡಿದ್ದರು.

 ಕಾಂಗ್ರೆಸ್ ನವರ  ಮಾತು‌ ಕೇಳಿ‌ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ನನ್ನನ್ನು ಅನರ್ಹ ಮಾಡಿದ್ದರು. ಆದರೆ, ಈ ಬಾರಿ ಚುನಾವಣೆನಲ್ಲಿ ನಮ್ಮ ಮತದಾರರು 35 ಸಾವಿರಕ್ಕೂ ಹೆಚ್ಚು ಮತ ಹಾಕಿ ಗೆಲ್ಲಿಸಿದ್ದಾರೆ," ಎಂದು ಸಂಭ್ರಮಿಸಿದರು.

"ಈ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಸ್ಥಿರ‌ ಸರ್ಕಾರ ಇರಬೇಕು .

ಸುಭದ್ರ‌ ಸರ್ಕಾರ ಇರಬೇಕು. ಯಡಿಯೂರಪ್ಪ‌ನವರ ಅಧಿಕಾರದಲ್ಲಿ ಅಭಿವೃದ್ದಿ ಆಗಬೇಕು ಹಾಗೂ ಶುದ್ದ ಆಡಳಿತ ನೀಡಬೇಕು. ಈ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಬಗ್ಗೆ ಗಮನ ಹರಿಸುತ್ತೇನೆ, ಎಂದು ಸುಧಾಕರ್‌ ಭರವಸೆ ನೀಡಿದರು.