ಲೋಕದರ್ಶನ ವರದಿ
ಕಾಂಗ್ರೇಸ ಮುಖಂಡರಿಂದ ಸಚಿವ ಜಾರಕಿಹೊಳಿಯವರಿಗೆ ಗೌರವ ಸನ್ಮಾನ
ಶಿಗ್ಗಾವಿ 21: ಹಾವೇರಿ ಜಿಲ್ಲೆಯ ಕೆ.ಎಂ.ಎಫ್ ನಾಮ ನಿರ್ದೇಶಕ ಸದಸ್ಯರಾಗಿ ಶಿಗ್ಗಾಂವ ಸವಣೂರ ಮತಕ್ಷೇತ್ರದ ಶಂಕರಗೌಡ ಭಾಪೂಜಿಗೌಡ ಪಾಟೀಲರವರನ್ನು ಸರ್ಕಾರದಿಂದ ನಾಮ್ ನಿರ್ದೆಶಕರಾಗಲು ಅವಕಾಶ ಕಲ್ಪಿಸಿ ಕೊಟ್ಟ ಘನ ಸರಕಾರದ ಲೋಕೊಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಹಾಗೂ ಶಿಗ್ಗಾಂವ ಸವಣೂರ ಕ್ಷೇತ್ರದ ಜನಪ್ರಿಯ ಶಾಸಕ ಯಾಸೀರ್ ಅಹ್ಮದ್‌ಖಾನ್ ಪಠಾಣರವರನ್ನು ಸಚಿವರ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಾಬರ ಬೊವಾಜಿ ಪಿ.ಐ.ಡಿ ಬ್ಯಾಂಕಿನ ನಿರ್ದೇಶಕ ಶಂಕ್ರ್ಪ ಮಡಿವಾಳರ, ಮನೋಹರ ಹಾದಿಮನಿ ಉಪಸ್ಥಿತರಿದ್ದರು.