ಮದ್ಲೂರ ಗ್ರಾಮ ಪಂಚಾಯತಿ ಕಾಂಗ್ರೆಸ್ ತೆಕ್ಕೆಗೆ

Congress has won Madlur Gram Panchayat under

ಯರಗಟ್ಟಿ   2 : ತಾಲ್ಲೂಕಿನ ಮದ್ಲೂರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ 13 ಸದಸ್ಯರನ್ನೊಳಗೊಂಡು ಅದ್ಯಕ್ಷರಾಗಿ ಲಕ್ಷ್ಮಣ ಚನ್ನಪ್ಪ ಹೊಟ್ಟಿನವರ ಆಯ್ಕೆಯರಗಟ್ಟಿ ಪಟ್ಟಣದಲ್ಲಿ ಶಾಸಕರಾದ ವಿಶ್ವಾಸ ವೈದ್ಯ ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದ್ದಬಸನ್ನವರ, ನಿಖಿಲ ಪಾಟೀಲ, ಪ್ರಕಾಶ ವಾಲಿ ಕೆಎಂಎಫ್ ನಿರ್ದೇಶಕರಾದ ಶಂಕರ ಇಟ್ನಾಳ, ಆರ್‌. ಕೆ. ಪಟಾತ್, ಹೊನ್ನಪ್ಪ ಖಂಡ್ರಿ, ಮಲಿಕಸಾಬ ಬಾಗವಾನ, ಪಡೆಪ್ಪ ನರಿ, ಯಲ್ಲಪ್ಪ ನರಿ, ಗೋಪಾಲ ದಳವಾಯಿ ಗಿಡ್ಡಪ್ಪ ಖಂಡ್ರಿ, ನಾಗರಾಜ್ಯ ದೇಸಾಯಿ ಮದ್ಲೂರ ಗ್ರಾ. ಪಂ. ಸದಸ್ಯರಾದ ಸೋಮಪ್ಪ ಕಲ್ಲೋಳಿ ಕರಿಯಪ್ಪ ಪೂಜಾರ ಅಶೋಕ ಯರಝರ್ವಿ ಸಂಗವ್ವ ಕುರಿ, ಶಿವಮ್ಮಾ ಸೊಪ್ಪಡ್ಲ  ಅನಿತಾ ಸುಣಗಾರ, ದೊಡ್ಡವ್ವ ನಾಗನೂರ ಲಕ್ಷ್ಮೀ ಹೊಟ್ಟಿನವರ ಫಕೀರವ್ವ ಹೂಲಿ  ಮಹಾದೇವಿ ಬಾರ್ಕಿ  ನಾಗವ್ವ ಲಕ್ಕಪ್ಪನವರ, ಕಸ್ತೂರಿ ಬೆಣಕಟ್ಟಿ, ಮತ್ತಿತರರು ಉಪಸ್ಥಿತರಿದ್ದರು.ಹೇಳಿಕೆ  ಮದ್ಲೂರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ತೆಕ್ಕೆಗೆ ಬಂದಿರುವುದು ತುಂಬಾ ಸಂತೋಷ. ನೂತನ ಅಧ್ಯಕ್ಷರಾಗಿ ಲಕ್ಷ್ಮಣ ಚನ್ನಪ್ಪ ಹೊಟ್ಟಿನವರ ಸತತ ಆರು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಪಂಚಾಯತಿ ಮಟ್ಟದಲ್ಲಿ ಅನುಭವ ಇದೆ. ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಎಲ್ಲರೂ ಪ್ರಯತ್ನಿಸಬೇಕೆಂದರು. ಸರ್ಕಾರದ ಯೋಜನೆಗಳು ನಿಗದಿತ ಅವಧಿಯಲ್ಲಿ ಜನತೆಗೆ ಮುಟ್ಟಿಸಬೇಕೆಂದು ಹೇಳಿದರು. ವಿಶ್ವಾಸ್ ವೈದ್ಯಜನಪ್ರಿಯ ಶಾಸಕರು ಸವದತ್ತಿ