ರಾಣೇಬೆನ್ನೂರು 22: ರೈತರಿಗೆ ಬೆಳೆ ವಿಮೆ ಪರಿಹಾರ ಹಣ ಇದುವರೆಗೂ ಪರಿಪೂರ್ಣವಾಗಿ ಸಿಕ್ಕಿಲ್ಲ ಅದಕ್ಕಾಗಿ, ಪರಿಹಾರ ಹಣ ಬಿಡುಗಡೆಗಾಗಿ ಈಗಾಗಲೇ ಸಾಕಷ್ಟು ಬಾರಿ ಮೌಕಿಕ ಮತ್ತು ಮನವಿ ಮೂಲಕ ಸರ್ಕಾರಕ್ಕೆ ಎಚ್ಚರಿಸಿದ್ದೇವೆ. ಸರ್ಕಾರ ಕೂಡಲೇ ಬರಬೇಕಾದ ಶೇ. 75 49.70 ಕೋಟಿ ಹಣ ಬಿಡುಗಡೆಗೊಳಿಸಬೇಕು ಎಂದು ಬಿಜೆಪಿ ಯುವ ಮುಖಂಡ ಸಂತೋಷ ಕುಮಾರ ಪಾಟೀಲ್ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಅವರ ನವಬಿರೇಶ್ವರ ನಗರದ ಗ್ರಹ ಸಭಾದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಈ ಹಿಂದೆಯೇ ತಾಲೂಕು ಬರಗಾಲ ಪೀಡಿತ ಪ್ರದೇಶವೆಂದು ಪೋಷಿಸಿ ಬೆಳೆ ಪರಿಹಾರ ವಿಮೆ ಶೇ, 25ರಷ್ಟು ವಿತರಿಸಿದೆ ಆದರೆ ಇನ್ನೂ ಬರಬೇಕಾದ ಬಾಕಿ 50 ಕೋಟಿಯಷ್ಟಿದೆ.ಸರ್ಕಾರ ಇತ್ತ ಕಡೆ ಗಮನಹರಿಸಿಲ್ಲ ಬರಿ ಗ್ಯಾರಂಟಿಗಳಲ್ಲಿ ಮುಳಿಗೆ ಹೋಗಿದೆ. ರೈತರು ಆಕ್ರೋಶಗೊಂಡಿದ್ದಾರೆ. ಇನ್ನು ಮೇಲೆ ವಿಳಂಬ ಧೋರಣೆ ಅನುಸರಿಸದೇ ಕೂಡಲೇ ಹಣ ಬಿಡುಗಡೆ ಮಾಡಿ ರೈತರಿಗೆ ಚೈತನ್ಯ ತುಂಬಬೇಕು ಇಲ್ಲದೆ ಹೋದರೆ ನಿತ್ಯವೋ ಆತ್ಮಹತ್ಯೆ ಎಂತಹ ಅಹಿತರ ಘಟನೆಗಳು ನಡೆಯುತ್ತದೆ ಸಾಗುತ್ತದೆ ಎಂದರು. ಬೆಳೆ ವಿಮೆ ಪರಿಹಾರ ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇರುತ್ತದೆ ಅದನ್ನು ಕಾಲಕಾಲಕ್ಕೆ ಬಿಡುಗಡೆಗೊಳಿಸುವ ಮನಸ್ಸು ಅವರು ಮಾಡಬೇಕು ಎಂದು ವಿವರಿಸಿದ ಸಂತೋಷ ಕುಮಾರ ಅವರು, ಏಪ್ರಿಲ್ ತಿಂಗಳು ಅಂತ್ಯದ ಒಳಗಾಗಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಕುಳಿತು ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಮಾಧ್ಯಮಗೋಷ್ಠಿಯಲ್ಲಿ ಪಕ್ಷದ ಅನೇಕ ಯುವ ನಾಯಕರು, ನವಯುಗದ ಅಭಿಮಾನಿಗಳು ಉಪಸ್ಥಿತರಿದ್ದರು.