ಲಖನೌ, ಆಗಸ್ಟ್ 11 ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅವರನ್ನು ನೇಮಕ ಮಾಡಿರುವುದನ್ನು ಸ್ವಾಗತಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಪ್ರಮೋದ್ ತಿವಾರಿ, ಪಕ್ಷಕ್ಕೆ ಇದು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇಲ್ಲಿ ಅವರು, ಸೋನಿಯಾ ಗಾಂಧಿ ಅವರು ಮಾರ್ಚ್ 14,1998 ರಂದು ಪಕ್ಷದ ಉಸ್ತುವಾರಿ ವಹಿಸಿಕೊಂಡರು. ಪಕ್ಷವು ಇಂದಿನಂತೆ ಸಂಕಷ್ಟದಲ್ಲಿತ್ತು. ನಂತರ, ಕಾಂಗ್ರೆಸ್ ಹಲವಾರು ರಾಜ್ಯಗಳಲ್ಲಿ ಮತ್ತೆ ಅಧಿಕಾರಕ್ಕೆ ಮರಳಿತು. 2004ರಲ್ಲಿ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದು, 10 ವರ್ಷಗಳ ಕಾಲ ಮುಂದುವರೆಯಿತು ಎಂದರು. ಸೋನಿಯಾ ಗಾಂಧಿಯನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಿದ ನಂತರ, ಕಾಂಗ್ರೆಸ್ ಸುವರ್ಣ ಯುಗಕ್ಕೆ ಮರಳಲು ಸಜ್ಜಾಗಿದೆ ಮತ್ತು ಸುಳ್ಳು ಭರವಸೆ ಆಧಾರದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿದವರ ಅಂತ್ಯವನ್ನು ದೇಶವು ನೋಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್, ಖಂಡಿತವಾಗಿಯೂ ಬಿಜೆಪಿಯನ್ನು ಸೋಲಿಸುದೆ ಮತ್ತು ಉತ್ತರ ಪ್ರದೇಶದಲ್ಲೂ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿವಾರಿ ಹೇಳಿದರು.