ವಂಶಪಾರಂಪರಿಕ ಆಡಳಿತ ಕೈಬಿಡದಿದ್ದರೆ ಕಾಂಗ್ರೆಸ್ ಉಳಿಯಲ್ಲ; ಶಿವರಾಜ್ ಚೌಹಾಣ್

ಭುವನೇಶ್ವರ್, ಆ 11   ಕಾಂಗ್ರೆಸ್ ಪಕ್ಷ ವಂಶ ಪಾರಂಪರಿಕ ಆಡಳಿತವನ್ನು ಕೈಬಿಟ್ಟು, ಚುನಾವಣೆ ಮೂಲಕ ನಾಯಕರನ್ನು ಆಯ್ಕೆ ಮಾಡದಿದ್ದಲ್ಲಿ, ಪಕ್ಷವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ್ ಸಿಂಗ್ ಚೌಹಾಣ್ ಭಾನುವಾರ ಅಭಿಪ್ರಾಯಪಟ್ಟಿದ್ದಾರೆ.  

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಹಂಗಾಮಿ ನಾಯಕಿಯಾಗಿ ಸೋನಿಯಾ ಗಾಂಧಿ ಅವರನ್ನು ಆಯ್ಕೆ ಮಾಡಿದ ಪಕ್ಷದ ಕಾರ್ಯಕಾರಿ ಸಮಿತಿಯ ನಿರ್ಧಾರದ  ಕುರಿತು ಪ್ರತಿಕ್ರಿಯಿಸಿದ ಅವರು, ಜನರು ಕುಟುಂಬ ರಾಜಕಾರಣ ಹಾಗೂ ವಂಶಪಾರಂಪರಿಕ ಆಡಳಿತವನ್ನು ತಿರಸ್ಕರಿಸಿದ್ದರಿಂದ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತು ಎಂದರು.  

ಆದರೆ, ಕಾಂಗ್ರೆಸ್ ಈ ಸೋಲಿನಿಂದಲೂ ಪಾಠ ಕಲಿತಿಲ್ಲ. ಪಕ್ಷದ ನಾಯಕಿಯನ್ನಾಗಿ ಸೋನಿಯಾ ಗಾಂಧಿ ಅವರನ್ನು ಆಯ್ಕೆ ಮಾಡಿರುವ ನಿರ್ಧಾರ ತಮಗೆ ಅಚ್ಚರಿ ತಂದಿದೆ. ಪಕ್ಷಕ್ಕೆ ವಂಶ ಪಾರಂಪರಿಕ ಆಡಳಿತದಿಂದ ಹೊರಬರುವ ಧೈರ್ಯವಿಲ್ಲ ಎಂದು ಲೇವಡಿ ಮಾಡಿದರು.