ಕಾಂಗ್ರೆಸ್ ಶಾಸಕ ಬನ್ವಾರಿ ಲಾಲ್ ಶರ್ಮಾ ವಿಧಿವಶ

ಭೋಪಾಲ್, ಡಿ 21 ಮೊರೆನಾ ಜಿಲ್ಲೆಯ ಕಾಂಗ್ರೆಸ್ ಶಾಸಕ ಬನ್ವಾರಿ ಲಾಲ್ ಶರ್ಮಾ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಶನಿವಾರ ಮುಂಜಾನೆ ನಿಧನರಾಗಿದ್ದಾರೆ   ಅವರಿಗೆ 61 ವರ್ಷ ವಯಸ್ಸಾಗಿತ್ತು. ಶರ್ಮಾ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಪತ್ನಿ, ಮಗ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಮೊರೆನಾ ಜಿಲ್ಲೆಯ ಅವರ ಸ್ವಗ್ರಾಮ ಜಲ್ತಾಪ್ ನಲ್ಲಿ ಅವರ ಅಂತಿಮ ವಿಧಿಗಳನ್ನು ನೆರವೇರಿಸಲಾಗುವುದು.  2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಯನ್ನು ಸೋಲಿಸಿದ ನಂತರ ಶರ್ಮಾ ಮೊರೆನಾ ಜಿಲ್ಲೆಯ ಜೌರಾ ಅಸೆಂಬ್ಲಿ ಸ್ಥಾನದಿಂದ ಶಾಸಕರಾದರು.  ಕಾಂಗ್ರೆಸ್ ಹಿರಿಯ ಮುಖಂಡ ಜ್ಯೋತಿರಡಿತ್ಯ ಸಿಂಧಿಯಾ ಅವರು ಶರ್ಮಾ ಅವರ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದರು.  "ಜೌರಾ-ಮೊರೆನಾದ ಕಾಂಗ್ರೆಸ್ ಶಾಸಕ ಬನ್ವಾರಿ ಲಾಲ್ ಶರ್ಮಾ ಅವರ ದುಃಖದ ನಿಧನಕ್ಕೆ ನನ್ನ ಆಳವಾದ ಸಂತಾಪ. ಅಗಲಿದ ಆತ್ಮಕ್ಕೆ ಶಾಂತಿ ಮತ್ತು ಈ ನಷ್ಟವನ್ನು ಭರಿಸಬೇಕಾದ ಕುಟುಂಬಕ್ಕೆ ಧೈರ್ಯವನ್ನು ನೀಡಬೇಕೆಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ" ಎಂದು ಸಿಂಧಿಯಾ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.