ಕಾಂಗ್ರೆಸ್, ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡಬೇಕಿದೆ : ಎಸ್ ಎಮ್ ಕೃಷ್ಣ

SM Krishna

ಬೆಂಗಳೂರು, ನ 28-ಕೆಲವು ತಿಂಗಳ ಹಿಂದೆ ಆರಂಭವಾದ ಕಾಂಗ್ರೆಸ್ ಪತನ ಈ ಬಾರಿಯ ಉಪಚುನಾವಣೆಯಲ್ಲೂ ಮುಂದುವರಿಯಲಿದ್ದು ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣ ಹೇಳಿದ್ದಾರೆ.

  ಉಪಚುನಾವಣೆ ನಂತರ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಹೇಳುತ್ತಿರುವ ಈ ಪಕ್ಷಗಳು ಜನರಿಂದ ಸಂಪೂರ್ಣವಾಗಿ ದೂರವಾಗಿವೆ . ಜನರು ರಾಜಕೀಯದ ಸ್ಥಿರತೆ ಬಯಸಿ ಬಿಜೆಪಿಗೆ ಮತ ಚಲಾಯಿಸಲು ಮನಸ್ಸು ಮಾಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಚಾರ ಮಾಡುತ್ತಾ ಅನರ್ಹ ಶಾಸಕರು ಸಾರ್ವಜನಿಕ ಸೇವೆಗೆ ಅನರ್ಹರು ಎಂದು ಹೇಳುತ್ತಿದ್ದಾರೆ. ಸಂವಿಧಾನದ 10 ನೇ ಪರಿಚ್ಛೇದ ಕೇವಲ ತಾಂತ್ರಿಕ ಮತ್ತು ಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಎಸ್.ಎಮ್.ಕೃಷ್ಣ ದೂರಿದ್ದಾರೆ.

  ಉಪಚುನಾವಣೆ ನಂತರ ಕೆಲವು ಕಾಂಗ್ರೆಸ್ ನಾಯಕರು ಮರಳಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದರೆ, ಜೆ ಡಿ ಎಸ್ ನ ನಾಯಕರು ಧ್ರುವೀಕರಣದ ಸಾಧ್ಯತೆ ಬಗ್ಗೆ ಹೇಳುತ್ತಿದ್ದು ಅವರಿಗೆ ಶುಭ ಕೋರುವುದಾಗಿ ಕೃಷ್ಣ ಹೇಳಿದ್ದಾರೆ.

  ಚುನಾವಣೆ ನಂತರ ಚುನಾವಣೆಯಲ್ಲಿ ಜೆಡಿಎಸ್ ಸೋಲು ಕಾಣುತ್ತಿದ್ದರೂ ಜೆಡಿಎಸ್ ಧ್ರುವೀಕರಣದ ಬಗ್ಗೆ ಮಾತನಾಡುತ್ತಿದೆ. ಆದರೆ ಇದೂ ಒಂದು ರೀತಿ ನಿಜವೇ. ಕಾಂಗ್ರೆಸ್ ಮತ್ತು ಜೆ ಡಿ ಎಸ್ ನಾಯಕರು ಬಿಜೆಪಿ ಸೇರುವ ಮೂಲಕ ಧ್ರುವೀಕರಣವಾಗಲಿದೆ ಎಂದರು.