ನಿವೃತ್ತಾ ಪ.ಪಂ.ಪೌರ ಸೇವಾಧಿಕಾರಿ ನೂರುಲ್ಲಾಖಾನ್ ಅವರಿಗೆ ಅಭಿನಂದನಾ ಸಮಾರಂಭ
ಕೊಟ್ಟೂರು 09: ಕೊಟ್ಟೂರಿನ ಮೂರ‌್ಕಲ್ ಮಠದ ಹತ್ತಿರವಿರುವ ಮುಸ್ಲಿಂ ಶಾದಿ ಮಹಲ್‌ನಲ್ಲಿ ಪ.ಪಂ. ಪೌರಸೇವಾಧಿಕಾರಿ ನೂರುಲ್ಲಾಖಾನ್ ಇವರಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು ,ಮೂಲತ: ಕೊಟ್ಟೂರು ನಗರದವರಾಗಿದ್ದು ಕೊನೆ ಅವಧಿಯಲ್ಲಿ ಹೊಸಪೇಟೆ ಪಟ್ಟಣದಲ್ಲಿ ಪ.ಪಂ.ಪೌರ ಸೇವಾಧಿಕಾರಿಯಾಗಿ ಕರ್ತವ್ಯ ನಿಭಾಯಿಸಿದ್ದರು, ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಹೊಸಪೇಟೆ ನಗರ ಶಾಸಕ ಗವಿಸಿದ್ದಪ್ಪ ಮಾತನಾಡಿ ಕೊಟ್ಟೂರು ನಗರಕ್ಕೆ ಪ್ರಥಮ ಬಾರಿ ನೂರುಲ್ಲಾಖಾನ್ ಅಭಿಮಾನಕ್ಕೆ ಬಂದಿದು, ನಿವೃತ್ತಿ ಜೀವನ ನೆಮ್ಮದಿಯಿಂದ ಕೂಡಿರಲಿಯೆಂದು ನಿವೃತ್ತಿ ಜೀವನಕ್ಕೆ ಶುಭಕೋರಿದರು.
ನೂರುಲ್ಲಾಖಾನ್ ಸರಳ ಹಾಗೂ ಸಜ್ಜನಿಕೆ ಹಾಗೂ ದಕ್ಷ ಆಡಳಿತಕ್ಕೆ ಹೆಸರುವಾಸಿಯಾಗಿ ಕರ್ತವ್ಯ ನಿಭಾಯಿಸಿದ್ದರು. ಸರ್ವ ಜನಾಂಗದವರನ್ನು ಅಣ್ಣ ತಮ್ಮಂದಿರಂತೆ ಕಂಡು ಎಲ್ಲಾ ಜನಾಂಗಕ್ಕೂ ಸಹಾಯ ಹಸ್ತ ಮಾಡಿರುವ ನೂರುಲ್ಲಾಖಾನ್ ಅಂಥ ಒಬ್ಬ ಧೀಮಂತ ಅಧಿಕಾರಿ ಸಿಗುವುದು ಅಪರೂಪವೆಂದು ಹೊಸಪೇಟೆ ಶಾಸಕ ಗವಿಸಿದ್ದಪ್ಪ ಹೇಳಿದ್ದಾರೆ. ಅವರ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡಿರುವ ನಾನು ಅವರ ಹುಟ್ಟೂರಿನಲ್ಲೇ ಅಭಿನಂದಿಸಿದರೇ ಅವರ ಜೀವನ ಸಾರ್ಥಕವಾಗುತ್ತೆದೆಂದು ಮನಗಂಡು ಕೊಟ್ಟೂರಿನಲ್ಲೇ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿರುವುದಾಗಿ ತಿಳಿಸಿದರು, ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆಯೆಂಬುದು ಇತ್ತೀಚೆಗೆ ತಿಳಿಯಿತೆಂದರು. ಪುಸ್ತಕ ಓದುವ ಕಲಾಸಕ್ತಿ ಅಸಕ್ತಿ ಕೂಡ ಅವರಿಗೆ ತುಂಬಾ ಇದೆಯೆಂದು ಅವರ ಅಭಿಮಾನಿಗಳು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಪ.ಪಂ. ಹಾಲೀ ಅಧ್ಯಕ್ಷೇ ಬಿ.ರೇಖಾ, ಬಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಗುಂಡುಮಣುಗು ತಿಪ್ಪೇಸ್ವಾಮಿ, ರಾಜ್ಯ ಬೀಜ ನಿಗಮದ ಅಧ್ಯಕ್ಷ ಸಾವಜ್ಜಿ ರಾಜೇಂದ್ರ್ರಸಾದ್, ಪಿ.ಹೆಚ್.ದೊಡ್ಡರಾಮಣ್ಣ, ಹೊಸಪೇಟೆಯ ಮಿಮಿಕ್ರಿ ಕಲಾವಿದ ಹಾಗೂ ನಿವೃತ್ತ ಪಶುಸಂಗೋಪನೆ ಇಲಾಖೆಯ ಸಹಾಯಕ ಅಯುಕ್ತ ಬೆಣ್ಣಿ ಬಸವರಾಜ, ಗಾಯಕಿ ಭೂಮಿಕ, ವರ್ತಕ ಬಿ.ಯಸ್. ಕೊಟ್ರೇಶಿ, ಮುಂಡರಿಗಿಯ ಪ.ಪಂ. ಸದಸ್ಯ ರಾಜಸಾಬ್ ಬೆಟಗೇರಿ, ಅಧ್ಯಕ್ಷರು ಹಾಗೂ ಮುಖಂಡರಾದ ಅಂದಾನಪ್ಪ ಉಳ್ಳಾಗಡ್ಡಿ, ಮುಖಂಡರಾದ ದೊಡ್ಡರಾಮಣ್ಣ, ದ.ಸಂ.ಸ. ಮುಖಂಡ ಮರಿಸ್ವಾಮಿ ಭಾವಸಾರ ಕ್ಷತ್ರೀಯ ಸಮಾಜದ ಮುಖಂಡರಾದ ವಕೀಲ ಪೀಸೇ ಪ್ರಭುದೇವ, ನಿವೃತ್ತಿ ಶಿಕ್ಷಕ ಪೀಸೇ ಶ್ಯಾಂಪ್ರಸಾದ್, ಉಪಸ್ಥಿತರಿದ್ದರು, ಕಾರ್ಯಕ್ರಮದ ನಿರೂಪಣೆ ಯನ್ನು ಸತೀಶ್ ಪಾಟೀಲ್ ವಹಿಸಿದ್ದರು, ಕಾರ್ಯಕ್ರಮದಲ್ಲಿ ಹಾಸ್ಯಕಲಾವಿದ ಬೆಣ್ಣಿ ಬಸವರಾಜರಿಂದ ಹಾಸ್ಯ ಹಾಗೂ ಗಾಯಕಿ ಭೂಮಿಕ ರವರಿಂದ ಸಂಗೀತಾ ಕಾರ್ಯಕ್ರಮ ಅಯೋಜಿಸಲಾಗಿತ್ತು, ಅಚ್ಚುಕಟ್ಟಾಗಿ ನೆರವೇರಿದ ಕಾರ್ಯಕ್ರಮದಲ್ಲಿ ಮುಸ್ಲೀಂ ಸಮಾಜದ ಸಲಾಂಸಾಬ್ ಸೇರಿದಂತೆ ಧರ್ಮ ಗುರುಗಳು ಹಾಗೂ ಸಮಾಜದ ಗಣ್ಯಾತೀ ಗಣ್ಯರು ಭಾಗವಹಿಸಿದ್ದರು, ನಂತರ ಊಟದ ವ್ಯವಸ್ಥೆಯನ್ನು ಸಹ ಹಮ್ಮಿಕೊಳ್ಳಲಾಗಿತ್ತು. ನಿವೃತ್ತಾ ಪ.ಪಂ.ಪೌರಸೇವಾಧಿಕಾರಿ ನೂರುಲ್ಲಾಖಾನ್ ನೆರದಿದ್ದ ಸರ್ವರಿಗೂ ಅಭಿಮಾನಿಗಳಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.