ಉತ್ತಮ ಕರ್ತವ್ಯ ನಿರ್ವಹಿಸಿರುವ ಪೊಲೀಸ್ ಸಿಬ್ಬಂದಿಗೆ ಸನ್ಮಾನ

ಶಿಗ್ಗಾವಿ19 : ತಾಲೂಕಿನ ಬಂಕಾಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿರುವ ಪೊಲೀಸ್ ಸಿಬ್ಬಂದಿಗಳನ್ನು ಇತ್ತೀಚೆಗೆ ಸಿ.ಪಿ.ಐ. ಬಸವರಾಜ ಹಳಬಣ್ಣವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

    ಕೇಂದ್ರ ಗೃಹಸಚಿವಾಲಯದ ನಿದರ್ೇಶನದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದನ್ವಯ ಉತ್ತಮ ಕರ್ತವ್ಯ ನಿರ್ವಹಣೆಗೆ, ಎ.ಎಸ್.ಐ, ಎಸ್.ಎಂ.ವನಹಳ್ಳಿ, ಬಿ.ಆರ್.ಲಮಾಣಿ, ಎ.ಎಚ್.ನದಾಫ್, ಯುವತಿಯರ ಅಪಹರಣ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಪರಿಣಿತಿ ಪಡೆದ ಮಂಜುನಾಥ ಲಮಾಣಿ, 2019 ನೇ ಸಾಲಿಗೆ ಬಂಕಾಪುರ ಪೊಲೀಸ್ ಠಾಣೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ಅತ್ಯುತ್ತಮ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಶಂಭು ಯಲಿವಾಳ ರವರನ್ನು ಗುರುತಿಸಿ ಸನ್ಮಾನಿಸಲಾಯಿತು.

     ಪಿ.ಎಸ್.ಐ. ಸಂತೋಷಗೌಡ ಪಾಟೀಲ, ಕೆ.ಎನ್.ಹಳ್ಳಿಯವರ ಸೇರಿದಂತೆ ಮತ್ತಿತರ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.