ಆರಕ್ಷಕ ಸಿಬ್ಬಂದಿಗೆ ಅಭಿನಂದನಾ ಕಾರ್ಯಕ್ರಮ

ಮೂಡಲಗಿ : ಮನೆಯ ಹೆಣ್ಣು ಮಕ್ಕಳ ಪ್ರಾಣ ಮತ್ತು ಮಾನ ರಕ್ಷಣೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೆವೆ ಅದರಂತೆ ಇಂದಿನಿಂದ ನಾವು ನಮ್ಮ ಊರಿನ ನಾಡಿ ಮಹಿಳೆಯ ಮಾನ ಪ್ರಾಣಕ್ಕೆ ರಕ್ಷಣೆ ನೀಡುತ್ತೆವೆ ಎಂದು ಪ್ರತಿಜ್ಞೇ  ಮಾಡಿಕೊಳ್ಳಬೇಕು ಎಂದು ಮೂಡಲಗಿ ಪಿ.ಎಸ್.ಐ ಮಲ್ಲಿಕಾರ್ಜುನ ಸಿಂಧೋರ ಹೇಳಿದರು 

          ಮೂಡಲಗಿಯ ಕಲ್ಮೇಶ್ವರ ವೃತ್ತದಲ್ಲಿ ಶುಕ್ರವಾರ ಸಂಜೆ ಕರುನಾಡ ಸೈನಿಕ ಕೇಂದ್ರ ,ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಮತ್ತು ಮಾಧ್ಯಮ್ ಮಿತ್ರ ಇವರ ಸಹಯೋಗದಲ್ಲಿ ಮುಂಜಾನೆ ತೆಲಗಾಂಣದದಲ್ಲಿ ನಡೆದ ಅತ್ಯಾಚಾರಿಗಳಿಗೆ ಎನ್ ಕೌಂಟರ ಮಾಡಿದ ದೇಶದ ಹೆಮ್ಮೆಯ ಪೋಲಿಸ ಇಲಾಖೆಯ ಅಧಿಕಾರಿಗೆ  "ನಾಡಿನ ಆರಕ್ಷಕ ಸಿಬ್ಬಂದಿಗೆ ಅಭಿನಂದನಾ" ಕಾರ್ಯಕ್ರಮದಲ್ಲಿ  ಇಲಾಖೆಯ ಪರವಾಗಿ ಸತ್ಕಾರ ಸ್ವೀಕರಿಸಿ ಮಾತನಾಡಿದರು,

         ಇಲಾಖೆಯು ಮಹಿಳಾ ರಕ್ಷಣೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಇಂದು ಮಹಿಳೆಯರು ನಿರ್ಬಯವಾಗಿ ತೀರುಗಾಡುವಂತೆ ಮಾಡಿದರು ಇತಂಹ ಕಾಮ ಪಿಸಾಚಿಗಳಿಂದ ಈತರಹದ ಘಟನೆಗಳು ಜರುಗುತ್ತವೆ ಇಲಾಖೆಯ ಜೊತೆಗೆ ಸಾರ್ವಜನಿಕರು ಮಹಿಳಾ ರಕ್ಷಣೆಯಲ್ಲಿ ತೋಡಬೇಕು, ಕೇವಲ ರಾಖಿ ಹಬ್ಬದಂದು ರಾಖಿ ಕಟ್ಟಿದ ನಮ್ಮ ತಂಗಿಯರು ಸಹೋದರಿಯರಲ್ಲಾ ವರ್ಷ ಪೂರ್ತಿ ಎಲ್ಲಾ ಮಹಿಳೆಯರನ್ನು ನಮ್ಮ ಮನೆಯ ಅಕ್ಕ ತಂಗಿ ಎಂದು ಭಾವಿಸಬೇಕು ಎಂದರು 

ಪತ್ರಕರ್ತ ಶಿವಾನಂದ ಮುಧೋಳ ಪೋಲಿಸ ಇಲಾಖೆಯ ಎಲ್ಲಾ ಸಿಬ್ಬಂದಿಯವರನ್ನು ಶ್ಲಾಘಿಸಿ  ಮಾತನಾಡಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಪೋಲಿಸ ಇಲಾಖೆಯ ಅಧಿಕಾರಿಗಳನ್ನು ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಿಸಲು ರಾಜಕಾರಣಿಗಳು ಬಿಟ್ಟಾಗ ಅವರು ಕಾನೂನುನನ್ನು ಸಮರ್ಥವಾಗಿ ನಿರ್ವಹಿಸಲು ಅನುಕೂಲವಾಗುತ್ತದೆ ,ಅವರ ಕಾರ್ಯದಲ್ಲಿ ರಾಜಕೀಯ ಹಸ್ತಕ್ಷೇಪವಾದರೆ ಅಪರಾದಿಗಳು ಬಚಾವಾಗುತ್ತಾರೆ ಎಂದರು,  

           ಪತ್ರಕರ್ತ ಸುಧೀರ ನಾಯರ ಮಾತನಾಡಿ, ರಾಮರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧಿಜಿಯ ಕನಸು ಇಂದು ನಿಜವಾಗಿದೆ ಅತ್ಯಾಚಾರಿಗಳಿಗೆ ಗುಂಡಿನಿಂದ ಉತ್ತರ ನೀಡಿದ ಪೋಲಿಸ ಕ್ರಮ ಸ್ವಾಗತಾರ್ಹ.ಮಹಿಳಾ ರಕ್ಷಣೆಗೆ ನಾವುಗಳು ಪ್ರತಿ ದಿನ ಪ್ರತಿ ಕ್ಷಣ ಕಾರ್ಯೋಮ್ನುಕರಾಗಬೇಕು, 

          ಹಿರಿಯ ಪತ್ರಕರ್ತ ವಾಯ್ ವಾಯ್ ಸುಲ್ತಾನಪೂರ ಮತ್ತು ಎಬಿವ್ಹಿಪಿಯ ಬಸವರಾಜ ಜೋಡಟ್ಟಿ  ಮಾತನಾಡಿ, ಪ್ರತಿದಿನವು ಪೋಲಿಸ ಇಲಾಖೆಯವರನ್ನು ಹಾಡಿ ಹೋಗಳುವಂತ ಕೇಲಸಗಳನ್ನು ಪೋಲಿಸ ಇಲಾಖೆ ಮಾಡಬೇಕು ಅಂದರೆ ಎಲ್ಲಾ ಅತ್ಯಾಚಾರಿಗಳನ್ನು ಗುಂಡಿಟ್ಟು ಸಾಯಿಸಿದಾಗ ಮಾತ್ರ ಇತಂಹ ಹೇಯಕೃತ್ತಗಳು ನಿಲ್ಲುತ್ತವೆ ಎಂದರು ಕರುನಾಡ ಸೈನಿಕ ತರಬೇತಿ ಕೇಂದ್ರದ ಸಂಸ್ಥಾಪಕ ಶಂಕರ ತುಕ್ಕನ್ನವರ ಮಾತನಾಡಿ ದೇಶದ ಹೆಮ್ಮೆ ಸೈನಿಕರ ಸ್ಥಾನದಲ್ಲಿ ಇಂದು ಪೋಲಿಸರನ್ನು ಕಾಣುವಂತೆ ಮಾಡಿದ ಪೋಲಿಸ ಆಯುಕ್ತ ವಿಶ್ವನಾಥ ಸಜ್ಜನರ ಕಾರ್ಯ ಅಂತತ್ಯ ಪ್ರಶಂಸನೀಯ ಎಂದರು 

ಪತ್ರಕರ್ತ ಸುಭಾಸ ಗೊಡ್ಯಾಗೋಳ ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಮಲ್ಲಪ್ಪ ಮುಕುಂದ, ಚನ್ನಬಸು ಸುಳ್ಳನ್ನವರ,ಮಹೇಶ ಮುಗಳಖೋಡ, ಶಿವಾನಂದ ಮಾಂಗ್, ಮಹೇಶ ಮುಗಳಖೋಡ, ಮುತ್ತು ಸುಳ್ಳವನ್ನವರ, ಪ್ರವಿಣ ಮುಗಳಖೋಡ, ಮಲ್ಲು ಡವಳೇಶ್ವರ,ಕಲ್ಲಪ್ಪ ಮೀಸಿ, ಸದಾಶಿವ ಚಿಪ್ಪಲಕಟ್ಟಿ,ಮಲ್ಲಪ್ಪ ಹೆಬ್ಬಾಳ, ಅಶೋಕ ಸುಣಧೋಳಿ ಅಸ್ಗರ ಇನಾಮದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.