ಲೋಕದರ್ಶನ ವರದಿ
ಬೆಳಗಾವಿ 18 : ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ನೂತನ ಕುಲಪತಿಗಳಾದ ಪ್ರೊ .ಎಂ.ರಾಮಚಂದ್ರಗೌಡ ಅವರನ್ನು ರಾ.ಚ.ವಿಶ್ವ ವಿದ್ಯಾಲಯ ಹೋರಾಟ ಸಮಿತಿಯು ಅಭಿನಂದನೆ ಸಲ್ಲಿಸಿತು.
ನಂತರ ನಡೆದ ವಿ.ವಿಯ ಅಭಿವೃದ್ಧಿ ಪರವಾದ ಚಚರ್ೆಯಲ್ಲಿ ಮಾತನಾಡಿದ ರಾ.ಚ.ವಿ.ವಿ ಹೋರಾಟ ಸಮಿತಿಯ ಸಂಚಾಲಕ ಮಂಜುನಾಥ ವಸ್ತ್ರದ ಹಾಗೂ ಸಮಿತಿಯ ಗೌರವ ಸದಸ್ಯ ಸಿದ್ದಾರೂಢ ಹೊನ್ನನ್ನವರ ಈ ಹಿಂದೆ ಕನರ್ಾಟಕ ವಿಶ್ವ ವಿದ್ಯಾಲಯದ ಆಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿಯ ಸ್ನಾತ್ತಕೋತ್ತರ ಕೇಂದ್ರವನ್ನು ಸ್ವತಂತ್ರ ವಿಶ್ವ ವಿದ್ಯಾಲಯವನ್ನಾಗಿಸಬೇಕೆಂಬ ಹಕ್ಕೋತ್ತಾಯದ ಮಂಡನೆ ಹಾಗೂ ಅದಕ್ಕಾಗಿ ವಿ.ವಿ ಹೋರಾಟ ಸಮಿತಿಯ ದಶಕದ ಹೋರಾಟದ ಹೆಜ್ಜೆಗಳನ್ನು ದಾಖಲೆ ಸಮೇತವಾಗಿ ವಿವರಿಸಿದರು.
ಆದರೆ ಶೈಕ್ಷಣಿಕ ಚಿಂತಕರು, ವಿದ್ಯಾಥರ್ಿಗಳು ಹಾಗೂ ಹೋರಾಟಗಾರರ ನಿರಂತರ ಒತ್ತಡದ ಪರಿಣಾಮವಾಗಿ ಅಸ್ತಿತ್ವಕ್ಕೆ ಬಂದಿರುವ ರಾ.ಚ.ವಿ.ವಿ ಕಾಯರ್ಾರಂಭಮಾಡಿ ದಶಕದ ಸಮೀಪವಿದ್ದರೂ ಸಹ ಇದುವರೆಗೂ ನಿರೀಕ್ಷಿತ ಬೆಳವಣಿಗೆಯಾಗಿಲ್ಲ. ಇದು ಈ ಭಾಗದ ಉನ್ನತ ಶಿಕ್ಷಣ ಪ್ರೇಮಿಗಳಲ್ಲಿ ನಿರಾಶೆಯನ್ನು ಮೂಡಿಸಿದೆ ಎಂದು ತಮ್ಮಯ ಕಳವಳ ವ್ಯಕ್ತಪಡಿಸಿದರು. ಈ ಹಿಂದಿನ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ ಪ್ರೋ ಆರ್.ಅನಂತನ್ ಹಾಗೂ ಪ್ರೋ ಶಿವಾನಂದ ಹೊಸಮನಿ ಆರ್.ಸಿ.ಯು ನ ಪ್ರಗತಿಗೆ ಪೂರಕವಾದ ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸುವಲ್ಲಿ ಶ್ರಮಿಸಿದ್ದಾರೆ. ಆದರೆ ಸ್ವಂತ ಜಾಗದ ಕೊರತೆಯ ಹಿನ್ನಲೆಯಲ್ಲಿ ನಿರೀಕ್ಷಿತ ಪ್ರಗತಿಗೆ ಹಿನ್ನಡೆಯಾಗಿದೆ. ಆದ್ದರಿಂದ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಯ ಆಧೀನದಲ್ಲಿರುವ ಭೂಮಿಯ ಹಸ್ತಾಂತರ ಪ್ರಕ್ರಿಯೆಗೆ ಶೀಘ್ರ ಚಾಲನೆ ಸಿಗಬೇಕಿದೆ. ಜಾಗತಿಕ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ರಾ.ಚ.ವಿ.ವಿಯಲ್ಲಿ ರೂಪಿಸುವ ಆಶೆಯವನ್ನು ಹೊಂದಿರುವ ನೂತನ ಕುಲಪತಿಗಳು ಭೂಮಿ ಹಸ್ತಾಂತರ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಲಿ ಎಂದರು. ಈ ಬಗ್ಗೆ ಪ್ರತಿಕ್ತಿಯೆಯಿಸಿದ ಕುಲಪತಿ ಪ್ರೋ ರಾಮಚಂದ್ರಗೌಡ ಈ ಬಗ್ಗೆ ಈ ಭಾಗದ ರಾಜಕಾರಣಿಗಳು ಹಾಗೂ ಶೀಕ್ಷಣ ಪ್ರೇಮಿಗಳು ಮತ್ತು ವಿ.ವಿ ಹೋರಾಟ ಸಮಿತಿಯು ಸೇರಿದಂತೆ ಎಲ್ಲರ ಸಹಕಾರ ಪಡೆದು ಕಾರ್ಯಸಾಧನೆ ಮಾಡುವುದಾಗಿ ತಿಳಿಸಿದರು.