ಕೆಇಬಿ ಸಿಬ್ಬಂದಿ ಕಾರ್ಯಕ್ಕೆ ಅಭಿನಂದನಾ ಸಮಾರಂಭ

ಲೋಕದರ್ಶನವರದಿ

ಹುನಗುಂದ14: ತಮ್ಮ ಜೀವನ್ನು ಕೈಯಲ್ಲಿ ಹಿಡಿದುಕೊಂಡು ಸಾರ್ವಜನಿಕ ಸೇವೆ ಮಾಡುತ್ತಿರುವ ಕೆಇಬಿ ಲೈನ್ಮನ್ ಸಿಬ್ಬಂದಿಯ ಕೆಲಸ ದೇವರ ಕೆಲಸ ಎಂದು ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಶ್ರೀಧರ ನಿರಂಜನ್ ಹೇಳಿದರು. ಇಲ್ಲಿನ ಕೆಇಬಿ ಕಚೇರಿಯಲ್ಲಿ ಸೂಳಿಬೆಲೆ ಚಕ್ರವತರ್ಿ ನೇತ್ರತ್ವದ ಯುವ ಬಿಗ್ರೇಡ್ ಹಮ್ಮಿಕೊಂಡ ಕೆಇಬಿ ಸಿಬ್ಬಂದಿ ಕಾರ್ಯಕ್ಕೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತ ನಮ್ಮ ಯುವ ಬ್ರಿಗೇಡ್ದಿಂದ ಪ್ರತಿವರ್ಷ ಸಮಾಜಕ್ಕೆ ಮುಕ್ತ ಸೇವೆ ನೀಡುವ ಇಲಾಖೆ ಸಿಬ್ಬಂದಿಗೆ ಅಭಿನಂದನೆ ತಿಳಿಸುವದು ಮಾನವೀಯ ಕೆಲಸವಾಗಿದೆ. ನಮಗೆ ಸಹನೆ ಮತ್ತು ತಾಳ್ಮೆ ಇದ್ದರೆ ಕೆಇಬಿ ಸಿಬ್ಬಂದಿಯಿಂದ ನಾವು ಬೆಳಕು ಕಾಣಲು ಸಾಧ್ಯ. ಅವರ ಜೊತೆ ಸಹನೆಯಿಂದ ವತರ್ಿಸಬೇಕೆಂದು ಅವರು ತಿಳಿಸಿದರು. ಎಇಇ ಬಾಲಾಜಿ ಸಿಂಗ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಾರ್ವಜನಿಕ ರಂಗದಲ್ಲಿ ನಮ್ಮ ಇಲಾಖೆಯಿಂದ ಪ್ರತಿಯೊಬ್ಬರಿಗೂ ನಮ್ಮ ಸೇವೆ ಅತ್ಯಗತ್ಯ ಎಂದರು. ಎಲ್ಲ ಲೈನ್ಮನ್ ಸಿಬ್ಬಂದಿಗೆ ಅಭಿನಂದನಾ ಪ್ರಮಾಣ ಪತ್ರ ವಿತರಿಸಲಾಯಿತು. ಯುವ ಬ್ರಿಗೇಡ್ ಕಾರ್ಯಕರ್ತರಾದ ವಿನಾಯಕ ಸಂಗಮ, ನಾಗೇಶ ಗಂಜೀಹಾಳ, ಕೆಇಬಿ ಸಿಬ್ಬಂದಿ ಬಿ.ಟಿ.ಹಿರೇಮಠ, ಮಹಾಂತೇಶ ಬಾಣಕದಿನ್ನಿ, ಬಸವರಾಜ ವಾಲೀಕಾರ, ಸುಶೀಲಕುಮಾರ ಮಲಗಿಹಾಳ ಇತರರು ಇದ್ದರು.