ಆತ್ಮವಿಶ್ವಾಸ ಯಶಸ್ಸಿನ ಮೂಲಮಂತ್ರ: ಜಮಾದಾರ

ಲೋಕದರ್ಶನವರದಿ

ಹುನಗುಂದ: ಕೊರತೆಗಳ ಮಧ್ಯೆಯೂ ಸತತ ಪ್ರಯತ್ನ ಮತ್ತು ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಮಾತ್ರ ಸಾಧಕರೆನ್ನಿಸಿಕೊಳ್ಳಬಲ್ಲರು. ಬದ್ಧತೆಯ ಬದುಕು ನಮ್ಮ ಆದ್ಯತೆಯಾದಾಗ ಮಾತ್ರ ನಾವು ಮಾಡುವ ಕಾರ್ಯದಲ್ಲಿ ಯಶಸ್ಸು ನಮ್ಮದಾಗುತ್ತದೆ ಎಂದು  ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಚಾರ್ಯ ಎಸ್.ಕೆ.ಜಮಾದಾರ ಹೇಳಿದರು. ಇಲ್ಲಿನ ಸಕರ್ಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ  ದ್ವಿತೀಯ ಪಿಯುಸಿ ವಿದ್ಯಾಥರ್ಿಗಳ ಬೀಳ್ಕೊಡುಗೆ ಮತ್ತು ಕಾಲೇಜು ಒಕ್ಕೂಟದ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಪ್ರತಿ ಅಂಕಕ್ಕೂ ಪ್ರಾಧಾನ್ಯತೆಯಿದ್ದು ಸಾಧಕರ ಬದುಕನ್ನು ಮಾದರಿಯಾಗಿಟ್ಟುಕೊಂಡು ಮುನ್ನಡೆಯಬೇಕು. ಎಂದರು.  ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶರಣಗೌಡ ಅಮರಣ್ಣವರ ಅವರು ವಿದ್ಯಾಥರ್ಿ ಜೀವನದ ಪ್ರತಿ ಕ್ಷಣವೂ ಅಮೂಲ್ಯವಾಗಿದ್ದು ಸಕರ್ಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಸ್ಪಷ್ಟ ಗುರಿ, ಸತತ ಅಧ್ಯಯನಶೀಲತೆ ಮೈಗೂಡಿಸಿಕೊಂಡು ಉತ್ತಮ ಫಲಿತಾಂಶ ಪಡೆಯುವದರ ಮೂಲಕ ಕಲಿತ ಕಾಲೇಜು, ತಂದೆ ತಾಯಿಗೆ ಕೀತರ್ಿ ತರುವಂತವರಾಗಬೇಕೆಂದರು. ವಿದ್ಯಾಥರ್ಿಗಳ ಪರವಾಗಿ ಸವಿತಾ ಕೋಲಾರ, ದುರಗಪ್ಪ ಆದಾಪೂರ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕ ಶರಣಪ್ಪ ಹೂಲಗೇರಿ ಉಪನ್ಯಾಸಕರ ಪರವಾಗಿ ಹಿತನುಡಿ ಹೇಳಿದರು.  ಆದರ್ಶ ವಿದ್ಯಾಥರ್ಿ ಮುತ್ತಪ್ಪ ಮಾದರ, ವಿದ್ಯಾಥರ್ಿನಿ ಈಶ್ವರಿ ಜುಟ್ಟಲ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶರಣಗೌಡ ಅಮರಣ್ಣವರ ಅವರನ್ನು ಕಾಲೇಜಿನ ಪರವಾಗಿ ಸತ್ಕರಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಸ್.ಎನ್.ಹಾದಿಮನಿ, ಸುಭಾಸ ಮುಕ್ಕಣ್ಣವರ, ಯಲ್ಲಪ್ಪ ಕೆರಿಗೌಡರ, ಮಹಾಂತೇಶ ರೇವಡಿ, ಮಹಾಂತೇಶ ಗೌಡರ ಉಪಸ್ಥಿತರಿದ್ದರು.   ಕಾವೇರಿ ಹಾಗೂ ಸಂಗಡಿಗರು ಪ್ರಾಥರ್ಿಸಿದರು. ಪ್ರಾಚಾರ್ಯ ಎ.ಎಚ್.ಮೋಮಿನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಎಚ್.ಟಿ.ಅಗಸಿಮುಂದಿನ ವರದಿ ವಾಚಿಸಿದರು. ನಥಿಯಾ ಡಿ ವಂದಿಸಿದರು. ಡಾ. ಎನ್. ವಾಯ್ ನದಾಫ ನಿರೂಪಿಸಿದರು.