ರಬಕವಿ-ಬನಹಟ್ಟಿ03 : ಪ್ರತಿಯೊಂದು ಮಗುವಿನಲ್ಲಿ ಅಪಾರ ಜ್ಞಾನ ಬಂಡಾರ ಇದೆ. ಮಗು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಂಡು ಬೆಳೆಯಬೇಕು. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ಆತ್ಮವಿಶ್ವಾಸ ತುಂಬಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಕುಡಚಿ ಮತಕ್ಷೇತ್ರದ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಹೇಳಿದರು.
ಬನಹಟ್ಟಿ ಸಮೀಪದ ಆಸಂಗಿಯ ರಂಗಮಂದಿರದಲ್ಲಿ ನಡೆದ ಶ್ರೀ ಸ.ಸ. ಬಾಹುಬಲೇಶ್ವರ ಶೈಕ್ಷಣಿಕ ಹಾಗೂ ವಿವಿದೋದ್ದೇಶಗಳ ಸಂಘ (ರಿ) ಬನಹಟ್ಟಿ ಇದರ ಹಂಸವೇಣಿ ಪೂರ್ವ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ಶಾಲೆಯ 6ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾಮಾಜಿಕ, ಧಾರ್ಮಿಕ , ಸಾಂಸ್ಕೃತಿಕ, ಕನ್ನಡ ನಾಡುನುಡಿಗೆ ಸೇವೆ ಸಲ್ಲಿಸಿದ್ದಕ್ಕಾಗಿ "ಕಾಯಕಯೋಗಿ ಪ್ರಶಸ್ತಿ" ಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಪಾಲಕರು ಮತ್ತು ಶಿಕ್ಷಕರು ಮೂರು ಮಾತುಗಳನ್ನು ಸದಾ ಹೇಳಬೇಕು ಎಂದರು ಮೊದಲನೆಯ ಮಾತು ತಂದೆ ತಾಯಿ ಹಾಗೂ ಗುರುಹಿರಿಯರನ್ನು ಸದಾ ಗೌರವದಿಂದ ಕಾಣಬೇಕು ಮಗುವಿನ ಹತ್ತಿರ ದುಷ್ಟಟ ಕಲಿಯೋದಿಲ್ಲ ಎಂಬ ಮಾತು ತೆಗೆದುಕೊಳ್ಳಬೇಕು ನಂತರ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಯನ್ನು ಗಿಡ, ಮರ, ಬಳ್ಳಿ ಹಾಗೂ ಸಮಾಜದ ಎಲ್ಲ ವರ್ಗದವರನ್ನು ಪ್ರೀತಿಸುವುದನ್ನು ಕಲಿಯಬೇಕು ಎಂದು ಪಾಲಕರು ಹಾಗೂ ಶಿಕ್ಷಕರು ಪದೇ ಪದೇ ಹೇಳಬೇಕು ಎಂದು ರಾಜೀವ್ ಹೇಳಿದರು.
ಮೂಡಲಗಿಯ ಎಂ.ಈ.ಎಸ್.ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಸಹಾಪ್ರಾಧ್ಯಾಪಕರಾದ ಎಸ್.ಬಿ. ಕೋತ ಮಾತನಾಡಿ ಮಗುವಿಗೆ ಕಷ್ಟ ಬಂದಾಗ ಅದನ್ನು ಹೇಗೆ ಎದುರಿಸಬೇಕು ಎನ್ನುವ ಮನಸ್ಟ್ರೈರ್ಯ ತುಂಬಬೇಕು ಎಂದು ಹೇಳಿದರು
ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿದ ಸೋಮಯ್ಯ ಮಠದ ಮಾತನಾಡಿ ಹಂಸವೇಣಿ ಶಾಲೆಯ ಮಕ್ಕಳು ಭವ್ಯ ಭಾರತವನ್ನು ರೂಪಿಸುವ ಶಿಲ್ಪಿಗಳಾಗಲಿ ಎಂದು ಹಾರೈಸಿದರು. ಅಧ್ಯಕ್ಷತೆ ಪ್ರಕಾಶ ದೇಸಾಯಿ ವಹಿಸಿದ್ದರು
ರಬಕವಿಯ ಎಂ.ವಿ. ಪಟ್ಟಣ ಕಾಲೇಜಿನ ಪ್ರಾಚಾರ್ಯರಾದ ಎಸ್.ಟಿ.ಗೋಠೆ ಅವರಿಗೆ ಅವರ ಕಾಯಕ ನಿಷ್ಠೆ ಪರಿಗಣಿಸಿ "ದಕ್ಷ ಅಧಿಕಾರಿ ಪ್ರಶಸ್ತಿ" ನೀಡಲಾಯಿತು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅಘನ್ಯ ಸೇವೆಸಲ್ಲಿಸುತ್ತಿರುವ ಬಹುಮುಖ ಪ್ರತಿಭೆ ಶಿಕ್ಷಕಿ ಸಂತೋಷಿ ರಾಮದುರ್ಗ ಅವರಿಗೆ "ಅಕ್ಷರ ದಾಸೋಹಿ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಹಿಸಿದ್ದರು
ನಾಮದೇವ ಉಪ್ಪಾರ, ಮಹಾದೇವ ಚೋಳಿ, ರಾಮಣ್ಣ ತಮದಡ್ಡಿ, ಶ್ರೀಶೈಲ ಶಿಂಧೆ, ಅಜಿತ ಚೌಗಲಾ, ಸಂಜಯ ಭದ್ರಣ್ಣವರ, ರಾಜು ಕಡಕಬಾವಿ, ಮುತ್ತುರಾಜ ಶಿರಹಟ್ಟಿ ಮತ್ತಿತರರು ಉಪಸ್ಥಿತರಿದ್ದರು
ಎಸ್.ಎಚ್.ಬಾಗೇವಾಡಿ ಸ್ವಾಗತಿಸಿದರು. ಕನ್ಯಾಕುಮಾರಿ ಹುಗಾರ ನಿರೂಪಿಸಿದರು. ಪ್ರಾಸ್ತಾವಿಕವಾಗಿ ಸಂಸ್ಥೆಯ ಅಧ್ಯಕ್ಷರಾದ ಸಂಗಮೇಶ ಗುಟ್ಲಿ ಮಾತನಾಡಿದರು. ಉಷಾ ಗುಟ್ಲಿ ವಂದಿಸಿದರು.