ಪಣಜಿಯಲ್ಲಿ ನಾಳೆ ಉದ್ಯಮಶೀಲತೆ, ನಾವೀನ್ಯತೆ ಕುರಿತ ಸಮಾವೇಶ

ಪಣಜಿ , ಫೆಬ್ರವರಿ 5, ಭಾರತೀಯ  ಕೈಗಾರಿಕಾ ಮಹಾಮಂಡಲ (ಸಿಐಐ)   ಪಣಜಿಯಲ್ಲಿ  ಉದ್ಯಮಶೀಲತೆ ಮತ್ತು ನಾವೀನ್ಯತೆ ಕುರಿತ  ಸಮಾವೇಶವನ್ನು ನಾಳೆ ಆಯೋಜಿಸಿದೆ . ಗೋವಾ ಸರ್ಕಾರದ ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯ ಇಲಾಖೆಯ ಸಹಯೋಗದೊಂದಿಗೆ ಸಮಾವೇಶ  ಆಯೋಜಿಸಲಾಗುತ್ತಿದೆ. ಸಿಐಐ ಗೋವಾ, ಗೋವಾ ಸರ್ಕಾರದ ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯ ಇಲಾಖೆಯ ಸಹಯೋಗದೊಂದಿಗೆ ಒಂದೇ ಸೂರಿನ ಉದ್ಯಮಿಗಳು, ರಾಜ್ಯ ಸರ್ಕಾರದ ಪ್ರಮುಖ ಸದಸ್ಯರು, ಅನುಭವಿ ಹೂಡಿಕೆದಾರರು ಮತ್ತು ದೇಶದಾದ್ಯಂತದ ಉದ್ಯಮ ತಜ್ಞರನ್ನು ಒಗ್ಗೂಡಿಸಿ ಮುಕ್ತ ಸಂವಾದ ಏರ್ಪಡಿಸಲಾಗಿದೆ. ರಾಜ್ಯಕ್ಕೆ ಅಗತ್ಯವಾದ ಉದ್ಯಮಶೀಲತೆ ಮತ್ತು ನಾವೀನ್ಯತೆ ನೀತಿ ರೂಪಿಸುಲು   ಉದ್ಯಮ ರಂಗದ ಪ್ರಮುಖರು  ಅಲೋಚನೆ , ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಗೋವಾ ಕೈಗಾರಿಕಾ, ವ್ಯಾಪಾರ ಮತ್ತು ವಾಣಿಜ್ಯ ಸಚಿವ ವಿಶ್ವಜಿತ್ ರಾಣೆ, ಸಿಐಐ ಪಶ್ಚಿಮ ವಲಯದ ಉಪಾಧ್ಯಕ್ಷ ಮತ್ತು ಸೀಮೆನ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಮಾಥುರ್, ಸಿಐಐ ಪಶ್ಚಿಮ ವಲಯದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಬಜಾಜ್ ಫಿನ್‌ಸರ್ವ್ ಲಿಮಿಟೆಡ್, ಸಿಐಐ ವೆಸ್ಟರ್ನ್ ರೀಜನ್‌ನ ಹಿಂದಿನ ಅಧ್ಯಕ್ಷ ಮತ್ತು ಶ್ರೀನಿವಾಸ್ ವಿ ಡೆಂಪೊ ಮತ್ತು ಡೆಂಪೊ ಶಿಪ್‌ಬಿಲ್ಡಿಂಗ್ ಮತ್ತು ಎಂಜಿ ಪ್ರೈ. ಲಿಮಿಟೆಡ್, ಸಿಐಐ ವೆಸ್ಟರ್ನ್ ರೀಜನ್ ನ ಹಿಂದಿನ ಅಧ್ಯಕ್ಷ ಮತ್ತು ಟಾಟಾ ಕೆಮಿಕಲ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ, ಮಂತ್ರ ಕ್ಯಾಪಿಟಲ್ ಯುಎಸ್ ನ ಪಾಲುದಾರ ಜೇ ಕೃಶನ್ ಮತ್ತು ಲೆಟ್ಸ್ ವೆಂಚರ್ ಸಹ-ಸ್ಥಾಪಕ ಮತ್ತು ಸಿಇಒ ಶಾಂತಿ ಮೋಹನ್ ಸಮಾವೇಶದಲ್ಲಿ ಮಾತನಾಡಲಿದ್ದಾರೆ.