ಮುದ್ದೇಬಿಹಾಳ 28: ಮಾಜಿ ಪ್ರಧಾನಿ ಆರ್ಥಿಕ ಸುಧಾರಣೆ ಹರಿಕಾರ ಮನಮೋಹನ ಸಿಂಗ್ ಅವರ ನಿಧನ ನಿಜಕ್ಕೂ ರಾಜಕೀಯದ ಕಾಂಗ್ರೇಸ್ ಪಕ್ಷದ ಕೊಂಡಿ ಕಳಚಿದಂತಾಗಿದೆ, ಭಗವಂತ ಆವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಹೇಳಿದರು.
ಪಟ್ಟಣದ ಅಂಬೇಡ್ಕರ ವೃತ್ತದಲ್ಲಿರುವ ಕಾಂಗ್ರೇಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನ ಕುರಿತು ಭಾವಪೂರ್ಣ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ರುದ್ರುಗೌಡ ಅಂಗಡಗೇರಿ, ರಾಜೇಂದ್ರಗೌಡ ರಾಯಗೊಂಡ, ವಾಯ್ ಎಚ್ ವಿಜಯಕರ, ಶ್ರೀಕಾಂತ ಚಲವಾದಿ, ಸಿಕಂದರ ಜಾನ್ವೇಕರ, ಸೇರಿದಂತೆ ಅನೇಕರು ಇದ್ದರು.