ಮುಸ್ಲಿಂ ಮಹಿಳಾ ಆಯು ವೈದ್ಯರ ಒಬ್ಬರ ಹಿಜಾಬ್ ಅನ್ನು ಎಳೆದುತೆಗೆದ ಘಟನೆ ಖಂಡಿಸಿ
Condemning the incident of a Muslim female ayu doctor pulling her hijab
ಹೊಸಪೇಟೆ 19: ಇಂದು ಹೊಸಪೇಟೆ ವಿಜಯನಗರ ಜಿಲ್ಲಾಧಿಕಾರಿಗಳ ಕಾರ್ಯಲಯದಲ್ಲಿ ಆವರಣದಲ್ಲಿ ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ (ರಿ) ಕಮಿಟಿಯ ವತಿಯಿಂದ ಬಿಹಾರ ರಾಜ್ಯದ ಮುಖ್ಯಮಂತ್ರಿಯಾಗಿರುವ ನೀತೀಶ್ ಕುಮಾರ್ ಅವರು ಸರ್ಕಾರದ ನೇಮಕಾತಿ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳಾ ಆಯು ವೈದ್ಯರ ಒಬ್ಬರ ಹಿಜಾಬ್ ಅನ್ನು ಎಳೆದುತೆಗೆದ ಘಟನೆಯನ್ನು ಖಂಡಿಸಿ ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಹೊಸಪೇಟೆ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಅಧ್ಯಕ್ಷರಾದ ಹೆಚ್. ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಅವರು ಮಾತನಾಡಿ ಸಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯ ಕೃತ್ಯವು ಕಾನೂನಿನ ಸ್ಪಷ್ಟ ಉಲ್ಲಂಘನೆ ಮತ್ತು ಸಂವಿಧಾನಕ್ಕೆ ಅವಮಾನ ಮಾಡಿದಂತಾಗಿದೆ. ಬಿಹಾರ ರಾಜ್ಯದ ಮುಖ್ಯಮಂತ್ರಿಯಾಗಿರುವ ನೀತೀಶ್ ಕುಮಾರ್ ಅವರು ಉದ್ದೇಶಪೂರ್ವಕವಾಗಿ ಮಹಿಳೆಯ ಒಪ್ಪಿಗೆ ಇಲ್ಲದೆ ಬಟ್ಟೆಯನ್ನು ಮುಟ್ಟುವ ಮೂಲಕ ಅಪರಾಧ ಮಾಡಿರುತ್ತಾರೆ. ಇದು ಇತರೆ ಮಹಿಳೆಯರ ಭಾವನೆಗಳಿಗೆ ನೋವುಂಟು ಆಗಿರುತ್ತದೆ.
ಬಿಹಾರ ರಾಜ್ಯದ ಮುಖ್ಯಮಂತ್ರಿಯಾಗಿರುವ ನೀತೀಶ್ ಕುಮಾರ್ ಅವರು ಸಂವಿಧಾನದ ಗೌರವಾನ್ವಿತ ಸ್ಥಾನದಲ್ಲಿದ್ದು ಈ ರೀತಿ ಮಾಡಿರುವುದು ಅತೀವ ನೋವುಂಟಾಗಿರುತ್ತದೆ. ನೀತೀಶ್ ಕುಮಾರ್ ಅವರ ವಿರುದ್ಧ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಒಂದು ಶಾಂತಿಯುತ ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ಗೌರವಾನ್ವಿತ ರಾಷ್ಟ್ರಪತಿಗಳು ಭಾರತ ಸರ್ಕಾರ ಇವರಲ್ಲಿ ಮನವಿ ಮಾಡುತ್ತಿದ್ದೇವೆ.
ಇದೇ ಸಂಧರ್ಭದಲ್ಲಿ ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಅನ್ಸರ್ ಬಾಷ. ಅಬೂಬಕ್ಕರ್ ಅಶ್ರಫಿ. ಫೈರೋಜ್ ಖಾನ್. ಡಾ ದುವೇಶ್ ಮುಯೂದ್ದೀನ್ ಅವರು ಹಾಗೂ ಸದ್ಯಸರಾದ ಮೊಹಮ್ಮದ್ ಮೋಸಿನ್ ಸದ್ದಮ್ ಹುಸೇನ್ ಡಾ ಹಬೀಬುಲ್ಲಾ, ಡಾ ಫಜಲುಲ್ಲಾ, ರೆಹೆಮಾನ್ ಸಾಬ್, ಜಾಫರ್, ಅವರು ಹಾಗೂ ಇನ್ನು ಅನೇಕ ಸಮಾಜದ ಮುಖಂಡರು ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 