ಪಹೇಲ್ಗಾಂ ಭಯೋತ್ಪಾದಕರ ಕೃತ್ಯಕ್ಕೆ ಖಂಡನೆ: ಮಡಿದವರಿಗೆ ಶ್ರದ್ಧಾಂಜಲಿ ಅರೆ್ಣ
ಕೊಪ್ಪಳ 27: ಕಾಶ್ಮೀರದ ಪಹೆ ಲ್ ಗಾಮ್ ನಲ್ಲಿ ಜರುಗಿದ ಭಯೋತ್ಪಾದಕರ ಕೃತ್ಯ ವನ್ನು ತೀವ್ರವಾಗಿ ಖಂಡಿಸಿ, ಈ ಕೃತ್ಯದಲ್ಲಿ ಮಡಿದವರ ಬಗ್ಗೆ ಮೇಣಬತ್ತಿ ಹಚ್ಚಿ ದೀಪ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿ ಅವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಯಿತು, ರವಿವಾರ ನಗರದ ಶ್ರೀ ಗೌರಿಶಂಕರ ದೇವಸ್ಥಾನದ ಬಳಿ ಶ್ರೀ ಗೌರಿಶಂಕರ ಮಹಿಳಾ ಸಂಘದ ವತಿಯಿಂದ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿ ದರು,ಕೂಡಲೆ ಭಯೋತ್ಪಾದನೆಯನ್ನು ಹತ್ತಿಕ್ಕಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಇಂತಹ ಕೃತ್ಯ ವೆಸಗಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶ್ರೀ ಗೌರಿಶಂಕರ ಮಹಿಳಾ ಸಂಘದ ಪದಾಧಿಕಾರಿಗಳು ಸರಕಾರಕ್ಕೆ ಆಗ್ರಹ ಪಡಿಸಿದರು, ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗೌರಿ ಹಿತ್ತಲಮನಿ, ಉಪಾಧ್ಯಕ್ಷರಾದ ಶೋಭಾ ಸೊಪ್ಪಿಮಠ ,ಕಾರ್ಯದರ್ಶಿಯಾದ ಕಾವ್ಯ ಸಜ್ಜನ್, ಸಹ ಕಾರ್ಯದರ್ಶಿಯಾದ ದೀಪ ಬಳ್ಳಾಬಳ್ಳಿ ,ಖಜಾಂಚಿಯಾದ ಪೂಜಾ ಕುರುಗೋಡು ಸೇರಿದಂತೆ ರತ್ನ ಪಾಟೀಲ್ ಇಂದಿರಾ ಗಂಗಾವತಿ ಅಲ್ಲದೆ ಸಂಘದ ಪದಾಧಿಕಾರಿಗಳು ಮಹಿಳೆಯರು ,ಸದಸ್ಯರು ಪಾಲ್ಗೊಂಡು ಹುತಾತ್ಮರ ಬಗ್ಗೆ ಶ್ರದ್ಧಾಂಜಲಿ ಸಲ್ಲಿಸಿದರು.