ಅಂಬೇಡ್ಕರ್ ವೃತ್ತದ ನಿರ್ಲಕ್ಷ್ಯಕ್ಕೆ ಖಂಡನೆ

ಲೋಕದರ್ಶನ ವರದಿ

ಗಂಗಾವತಿ 19: ಗಂಗಾವತಿ ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತವು ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದು, ಅಭಿವೃದ್ಧಿ ಕಾಣದೇ ನಿರ್ಲಕ್ಷಕ್ಕೆ ಒಳಗಾಗಿದೆ. ಈ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಹಲವಾರು ಸಂಘ ಸಂಸ್ಥೆಗಳು, ದಲಿತ ಸಮಿತಿಗಳು ನಗರಸಭೆಗೆ, ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿವೆ. ಆದರೆ ಜಿಲ್ಲಾಡಳಿತದಿಂದ ಯಾವುದೇ ಅನುದಾನ ಬಿಡುಗಡೆಗೊಳ್ಳದೆ ಈ ವೃತ್ತವು ಅಭಿವೃದ್ಧಿಯಲ್ಲಿ ತೀವ್ರ ನಿರ್ಲಕ್ಷಕ್ಕೆ ಒಳಗಾಗಿದೆ. ಗಂಗಾವತಿ ನಗರದ ಪ್ರಮುಖ ಸ್ಥಳದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ರವರ ಹೆಸರಿನಲ್ಲಿ ವೃತ್ತವನ್ನು ನಿಮರ್ಿಸಲಾಗಿದೆ. 

ಈ ವೃತ್ತದ ಹತ್ತಿರ ನ್ಯಾಯಾಲಯ, ಪೊಲೀಸ್ ಠಾಣೆ, ಪ್ರವಾಸಿ ಮಂದಿರ, ಸಕರ್ಾರಿ ಆಸ್ಪತ್ರೆ ಹೀಗೆ ಪ್ರಮುಖ ಜನದಟ್ಟಣೆಯನ್ನು ಹೊಂದಿದ ವೃತ್ತ ಇದಾಗಿದೆ. ಕಾರಣ ಈಗಲಾದರೂ ಸ್ಥಳೀಯ ಶಾಸಕರು, ನಗರಸಭೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ವೃತ್ತವನ್ನು ಮುಂಬರುವ  ಏಪ್ರಿಲ್-14 ರಂದು ನಡೆಯುವ ಡಾ. ಬಿ.ಆರ್ ಅಂಬೇಡ್ಕರ್ ದಿನಾಚರಣೆಗಿಂತಲೂ ಮುಂಚಿತವಾಗಿ ಸರ್ಕಲ್ನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ನಮ್ಮ ಸಂಘಟನೆಯಿಂದ ಸ್ಥಳೀಯ ಶಾಸಕರ ವಿರುದ್ಧ, ನಗರಸಭೆಯ ವಿರುದ್ಧ ಹಾಗೂ ಜಿಲ್ಲಾಡಳಿತದ ವಿರುದ್ಧ ಕಪ್ಪುಬಾವುಟ ಪ್ರದಶರ್ಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಕನರ್ಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಸಂಘಟನೆಯ ಗಂಗಾವತಿ ತಾಲೂಕು ಪ್ರಧಾನ ಸಂಚಾಲಕರಾದ ಹನುಮಂತಪ್ಪ ಮೂಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕರಾದ ಡಿ. ಭೋಜಪ್ಪ, ತಾಲೂಕ ಸಂಘಟನಾ ಸಂಚಾಲಕರಾದ ರಾಜಾಸಾಬ್, ವಿಷ್ಣುಕುಮಾರ ಶ್ರೀರಾಮನಗರ, ವೆಂಕಟೇಶ ಆಟೋ, ಹುಲಿಗೇಶ ಇನ್ನಿತರರು ಉಪಸ್ಥಿತರಿದ್ದರು.