ಲೋಕದರ್ಶನ ವರದಿ
ಕನಕಗಿರಿ 19:
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ
ಸಮಿತಿ (ಎಪಿಎಂಸಿ) ಪ್ರದೇಶದಲ್ಲಿ ಉದ್ದೇಶಿತ ಅಂಗಡಿಗಳಿಗೆ ಉಪಯೋಗಿಸದೆ ಇತರ ವ್ಯವಹಾರಗಳನ್ನು ಮಾಡುವವರನ್ನು
ತೆರವುಗೊಳಿಸಬೇಕು ಎಂದು ಸೋಮವಾರ ಇಲ್ಲಿನ
ಎಂಪಿಎಂಸಿ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ನಿರ್ಣಯ
ಕೈಕೊಂಡರು.
ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ
ವಿಚಾರವನ್ನು ನಿದರ್ೇಶಕ ಶಿವರಾಜಗೌಡ ಮಂಡಿಸಿದರು. ಕನಕಗಿರಿ ಎಪಿಎಂಸಿ ಒಡೆತನದ ಪ್ರದೇಶದಲ್ಲಿ ಇರುವ ಮಳಿಗೆಗಳಲ್ಲಿ ದಲಾಲಿ
ಮತ್ತು ಖರೀದಿ ಅಂಗಡಿಗಳನ್ನು
ಮಾಡಬೇಕು. ಆದರೆ ಈ ಸ್ಥಳಗಳಲ್ಲಿ
ಚಪ್ಪಲಿ, ಕಿರಾಣಿ, ಹಣ್ಣಿನ ಅಂಗಡಿ, ಹೋಟೆಲ್, ಖಾನಾವಳಿ ನಿಮರ್ಾಣಗೊಂಡಿವೆ ಕಾರಣ ಇವುಗಳನ್ನು ತೆರವುಗೊಳಿಸಿ
ಉದ್ದೇಶಿತ ವ್ಯವಹಾರಕ್ಕೆ ಉಪಯೋಗಿಸಬೇಕು ಎಂದು ಹೇಳಿದ್ದಕ್ಕೆ ಸರ್ವ
ಸದಸ್ಯರು ಸಮ್ಮತಿ ಸೂಚಿಸಿದರು.
2018-19ನೇ ಸಾಲಿಗಾಗಿ ಭದ್ರತಾ ಸಿಬ್ಬಂದಿ, ಕುಡಿಯುವ ನೀರಿನ ಸೌಕರ್ಯ ಮತ್ತು ಬೀದಿ ದೀಪಗಳ ಅಳವಡಿಕೆ ಕುರಿತು ಟೆಂಡರ್ ಕರೆಯುವಂತೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು. ತಾಲೂಕು ಕೃಷಿಕ ಸಮಾಜವರಿಗೆ ತಮ್ಮ ಕಾಯರ್ಾಲಯ ನಿಮರ್ಿಸಿಕೊಳ್ಳಲು ಎಪಿಎಂಸಿ ಆವರಣದಲ್ಲಿ 60*100 ನಿವೇಶನ ನೀಡಲು ನಿದರ್ೇಶಕರು ಒಪ್ಪಿಗೆ ಸೂಚಿಸಿದರು. ಎಪಿಎಂಸಿ ಉಪಾಧ್ಯಕ್ಷೆ ಸುಶೀಲಮ್ಮ ಮಲ್ಲಿಕಾಜರ್ುನಗೌಡ, ನಿದರ್ೇಶಕರಾದ ರಾರಾವಿ ಶರಣೇಗೌಡ, ದುಗರ್ಾರಾವ್, ದುರುಗೇಶ, ಚಂದ್ರು, ದೇವಪ್ಪ ತೋಳದ ಸಭೆಯಲ್ಲಿ ಪಾಲ್ಗೊಂಡಿದ್ದರು.