ಗದಗ 04: ನಗರದ ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ದಿ. 28 ಶುಕ್ರವಾರದಂದು ಗದಗ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ಎನ್. ಎಸ್. ಎಸ್. ಘಟಕದವತಿಯಿಂದ ವಾರ್ಷಿಕ ವಿಶೇಷ ಶಬಿರದ ಸಮಾರೋಪ ಸಮಾರಂಭ ಜರುಗಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಮಲ್ಲಿಕಾರ್ಜುನ ನಾಯಕ, ಸಹಾಯಕ ಪ್ರಾದ್ಯಾಪಕರು, ವಾಣಿಜ್ಯ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ, ಗದಗ ಅವರು ಮಾತನಾಡಿ ಯುವ ಜನತೆ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದೆ, ಯುವಕರು ತಮ್ಮ ಮಾನಸಿಕ ಗಟ್ಟಿತನ, ಆರೋಗ್ಯದ ಸ್ಥಿತಿ, ಭಾರತಕ್ಕೆ ಯುವಕರ ಕೊಡಿಗೆ, ಸಾಮಾಜದೊಂದಿಗೆ ವಿದ್ಯಾರ್ಥಿಗಳು ಹೇಗೆ ತೊಡಗಿಕೊಳ್ಳಬೇಕು, ಎನ್. ಎಸ್. ಎಸ್. ದೇಶ ಸೇವೆಗೆ ಇರುವುದು ಎಂದು ಹಲವಾರು ವಿಷಯಗಳನ್ನು ಸ್ವಯಂಸೇವಕರೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಾದ ಗ್ರಾಮದ ಹಿರಿಯರಲ್ಲಿ ಒಬ್ಬರಾದ ಶ್ರೀ. ಶಿವಾನಂದ ತಳವಾರ ಅವರು ಮಾತನಾಡಿ ಯುವಕರು ಸಮಾಜದ ಒಳಿತಿಗೆ ಕಾರ್ಯ ಮಾಡಬೆಕೆಂದು ಹೇಳಿದರು ಮತ್ತು ನಾಗಾವಿ ಗ್ರಾಮದ ಬಸನಗೌಡ್ರ ಚ. ಹನುಮಂತಗೌಡ್ರ, ಕೆ. ಎಮ್. ಎಫ್ ಹಾಲು ಉತ್ಪಾದನೆ ಸಂಘದ ಮಾಜಿ ಅಧ್ಯಕ್ಷರು, ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ಪ್ರಾದ್ಯಾಪಕರಾದ ಪ್ರೋ. ಗೌರಾ ಯಳಮಲಿ, ವಾಣಿಜ್ಯ ವಿಭಾಗದ ಪ್ರಾದ್ಯಾಪಕರಾದ ಶ್ವೇತಾ ರಾಚಯ್ಯನವರ, ಶಿವಪೂರ್ತಿಪ್ಪ ಇಳಗೇರ್ ಹಿರಿಯರು ನಾಗಾವಿ, ಶ್ರೀ. ಧರ್ಮಣ್ಣಾ ಮರಡ್ಡಿ, ಹಿರಿಯರು ನಾಗಾವಿ, ಜಿ. ಟಿ. ಬರಮಗೌಡ್ರ, ಎಸ್,ಡಿ,ಎಮ್,ಸಿ. ಸದಸ್ಯರು ನಾಗಾವಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಮಹಾವಿದ್ಯಾಲಯದ ಉಪಪ್ರಾಚಾರ್ಯರಾದ ಡಾ. ವೀಣಾ ಈ. ಅಧ್ಯಕ್ಷ ಸ್ಥಾನ ವಹಿಸಿದ್ದರು, ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ ಅವರು ವಿಶೇಷ ಶಬಿರದ ವರದಿ ಮಂಡನೆ ಮಾಡಿದರು ಹಾಗೂ ಕುಮಾರ ಮುತ್ತು ನೈನಾಪುರ್ ಹಾಗೂ ಕುಮಾರಿ. ನೀಲಮ್ಮ ಸಿತಾರಳ್ಳಿ ಅವರಿಗೆ ಶಿಬಿರದ ಉತ್ತಮ ಸ್ವಯಂಸೇವಕ ಮತ್ತು ಸ್ವಯಂಸೇವಕಿ ಎಂದು ಪ್ರೋತ್ಸಾಹಿಕ ಬಹುಮಾನವನ್ನು ನೀಡಲಾಯೊತು, ಎನ್. ಎಸ್. ಎಸ್. ಘಟಕದ ಕಾರ್ಯದರ್ಶಿಗಳಾದ ಕುಮಾರ. ಪವನಕುಮಾರ ಕುಲಕರ್ಣಿ ಮತ್ತು ಕುಮಾರಿ. ಸಾಕ್ಷಿ ಹೊಸಮಠ, ಎಲ್ಲ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಶಿಬಿರಾರ್ಥಿ ಕುಮಾರಿ. ಸಾಕ್ಷಿ ಹೊಸಮಠ ನಿರೂಪಿಸಿದರು, ಕುಮಾರ. ಮಂಜುನಾಥ ಗಾಣಿಗೇರ ಸ್ವಾಗತಿಸಿದರು, ಕುಮಾರಿ. ಮೇಘಾ ಮುದ್ದಿ ವಂದಿಸಿದರು.