ಕುಡಿವ ನೀರು ಪೂರೈಕೆಗೆ ಕಾಳಜಿ ವಹಿಸಿ: ತಹಶೀಲ್ದಾರ್ ಗೋಣೆಣ್ಣವರ

ಲೋಕದರ್ಶನ ವರದಿ

ಶಿರಹಟ್ಟಿ 11: ತಾಲೂಕಿನ ಎಲ್ಲ ಇಲಾಖೆಗಳ ಸೂಚನಾ ಫಲಕಗಳ ಮೇಲೆ ಆಯಾ ಇಲಾಖೆಗಳ ವಿವಿಧ ಯೋಜನೆಗಳ ಮಾಹಿತಿಯನ್ನು ಕಡ್ಡಾಯವಾಗಿ ಹಾಕತಕ್ಕದ್ದು ಇಲ್ಲವಾದರೆ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಓಲೇಕಾರ ಅವರು ಖಡಕ್ ಎಚ್ಚರಿಕೆ ನೀಡಿದರು.

ಅವರು ತಾಲೂಕ ಪಂಚಾಯ್ತಿ ಸಾಮಥ್ರ್ಯ ಸೌಧದಲ್ಲಿ ನಡೆದ ತಾಲೂಕು ಮಟ್ಟದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಕಳೆದ ತಾಪಂ ಸಾಮಾನ್ಯ ಸಭೆಯಲ್ಲಿ ಹಾಗೂ ಕೆಡಿಪಿ ಸಭೆಯಲ್ಲಿ ಈ ಕುರಿತಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೂ ಸಾರ್ವಜನಿಕರಿಂದ ದೂರು ಅಥವಾ ನಾವು ಖುದ್ದಾಗಿ ಭೇಟಿ ನೀಡಿದಾಗ ಸೂಚನಾ ಫಲಕಗಳ ಮೇಲೆ ಮಾಹಿತಿ ಇಲ್ಲದಿದ್ದಲ್ಲಿ ಸಂಭಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವದಕ್ಕಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದಕ್ಕೂ ಮೊದಲು ಸಭೆ ಆರಂಭವಾಗುತ್ತಿದ್ದಂತೆ ತಾಪಂ ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ ಸಾಕಷ್ಟು ಇಲಾಖೆಯ ಅಧಿಕಾರಿಗಲು ಗೈರು ಇರುವದನ್ನು ಪ್ರಶ್ನಿಸಿ ಸಭೆಯನ್ನು ಮುಂದೂಡುವಂತೆ ಆಗ್ರಹಿಸಿದರು ಆದರೂ ಅಧಿಕಾರಿಗಳ ಗೈರಹಾಜರಾತಿಯ ಮಧ್ಯಯೇ ಸಭೆ ಮುಂದುವರೆಸಲಾಯಿತು. 

ಕುಡಿಯುವ ನೀರಿಗಾಗಿ ವಿಶೇಷ ಕಾಳಜಿ ವಹಿಸಿ:  ತಾಲೂಕಿನಲ್ಲಿ ಸ್ಥಾಪಿತವಾಗಿರುವ 108 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೇವಲ 35-40 ನೀರಿನ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ಕುರಿತು ಕಳೆದ ಕೆಡಿಪಿ ಸಭೆಯಲ್ಲಿ ತಮಗೆ ತಿಳಿಸಲಾಗಿತ್ತಾದರೂ ನೀವು ಈವರೆಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂದು ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿಗಳು ಸಂಭಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅಧಿಕಾರಿಗಳು ಈಗಾಗಲೇ ಅರ್ಧಕ್ಕಿಂತ ಹೆಚ್ಚು ದುರಸ್ತಿಯಲ್ಲಿ ಇರುವ ಘಟಕಗಳನ್ನು ಸರಿಪಡಿಸಲಾಗಿದೆ. ಇನ್ನುಳಿದವುಗಳನ್ನು ಶೀಘ್ರದಲ್ಲಿ ಸರಿಪಡಿಸಲಾಗುವದು ಎಂದು ಪ್ರತಿಕ್ರಿಯಿಸಿದರು.

ಆಗ ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ ಸುಮಾರು 80 ರಷ್ಟು ರೋಗ ರುಜಿನಗಳು ಕುಡಿಯುವ ನೀರಿನಿಂದಲೇ ಉಲ್ಬವಿಣುಸುತ್ತಿದ್ದು ಸರಕಾರ ಶುದ್ಧ ನೀರಿಗಾಗಿ ಸಾಕಷ್ಟು ಹಣ ವ್ಯಯ ಮಾಡುತ್ತಿದ್ದು ತ್ವರಿತವಾಗಿ ಕ್ರಮ ಕೈಗೊಳ್ಳಿ, ಅಲ್ಲದೆ ತಾಲೂಕಿನ ಎಲ್ಲ ವಸತಿ ನಿಲಯಗಳಿಗೆ ಡಿ.ಬಿ.ಒ.ಟಿ ಯಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಿ ಎಂದು ಆದೇಶಿಸಿದರು. 

ಶಿರಹಟ್ಟಿಯಲ್ಲೂ ಕಾರ್ಯ ನಿರ್ವಹಿಸಿ: ಅಂಬೇಡ್ಕರ ಅಭಿವೃದ್ಧಿ ನಿಗಮದ ಅಧಿಕಾರಿಗಳು ಇಲಾಖೆಯ ಪ್ರಗತಿ ಕುರಿತಾಗಿ ಮಾಹಿತಿ ನೀಡುತ್ತಿದ್ದಂತೆ, ತಹಶಿಲ್ದಾರ ಯಲ್ಲಪ್ಪ ಗೋಣೆಣ್ಣವರ ಮಾತನಾಡುತ್ತಾ, ನೀವು ಶಿರಹಟ್ಟಿ ಹಾಗೂ ಗದಗ ತಾಲೂಕಿಗೆ ಸಂಭಂದಪಟ್ಟ ಅಧಿಕಾರಿಗಳಾಗಿದ್ದು, ಬರುವ ವಾರದಲ್ಲಿ ಮೂರು ದಿನ ಶಿರಹಟ್ಟಿಯಲ್ಲೂ ಕಾರ್ಯನಿರ್ವಹಿಸಿ ಎಂದು ಹೇಳಿದರು. ಈಗಾಗಲೇ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಪ್ಪಣೆ ಮೇರೆಗೆ ಠರಾವು ಕೂಡಾ ಪಾಸ್ ಮಾಡಿದ್ದು ನೀವು ಶಿರಹಟ್ಟಿಯಲ್ಲಿ ಕಾರ್ಯ ನಿರ್ವಹಿಸುವದರಿಂದ ಇಲ್ಲಿಯ ಜನರಿಗೂ ನಿಮ್ಮ ಇಲಾಖೆಯ ಯೋಜನೆಗಳ ಮಾಹಿತಿ ದೊರೆಯುವುದು ಎಂದು ತಹಶೀಲ್ದಾರ ಅವರ ಜೊತೆಗೆ ಈಓ ಅವರೂ ಕೂಡಾ ಧ್ವನಿ ಗೂಡಿಸಿದರು.

ರೇಷ್ಮೆ ಇಲಾಖೆ, ವಲಯ ಅರಣ್ಯ ಇಲಾಖೆ ಹಾಗೂ ಜಿಪಂ ಇಂಜನೀಯರ ಇಲಾಖೆ ಇನ್ನುಳಿದ ಇಲಾಖೆಯ ಗೈರಹಾಜರಿ ಇರುವ ಅಧಿಕಾರಿಗಳಿಗೆ ಕಡ್ಡಾಯವಾಗಿ ನೋಟಿಸ್ ನೀಡಿ ಕ್ರಮ ಜರುಗಿಸಿ ಎಂದು ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಆದೇಶಿಸಿದರು. ತಾಪಂ ಅಧ್ಯಕ್ಷೆ ಸುಶಿಲಾಬಾಯಿ ಲಮಾಣಿ, ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ, ಸಮಾಜ ಕಲ್ಯಾಣ ಇಲಾಖೆಯ ಉಪನಿದರ್ೆಶಕ ಎಸ್.ಬಿ.ಹತರ್ಿ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.