ಸಾಧನೆಗೆ ಏಕಾಗ್ರತೆ ಅತ್ಯವಶ್ಯಕ: ಡಾ ತೇಜಸ್ವಿನಿ ನಾರಾಯಣಕರ
Concentration is essential for success: Dr Tejaswini Narayanakar
ಹುಬ್ಬಳ್ಳಿ 06: ವಿದ್ಯಾರ್ಥಿಗಳಿಗೆ ಏಕಾಗ್ರತೆ ಮುಖ್ಯ, ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಮುಂದೆ ಭವಿಷ್ಯದಲ್ಲಿ ಸಾಧನೆ ಮಾಡಲು ಸದ್ಯ ಎಂದು ಪದವಿ ಪೂರ್ವ ಶಿಕ್ಷಣ ಶಾಲಾ ಇಲಾಖೆ ಉಪನಿರ್ದೇಶಕರು ಆದ ಡಾ ತೇಜಸ್ವಿನಿ ನಾರಾಯಣಕರ ಹೇಳಿದರು. ನಗರದ ಡಾ ಬಿ ಎಫ್ ದಂಡಿನ ಸಭಾಂಗಣದಲ್ಲಿ ಶುಕ್ರವಾರ ವಿಜಯನಗರ ಪಿಯುಸಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಯಾವಾಗಲೂ ದ್ರೋಣಾಚಾರ್ಯರ ಶಿಷ್ಯ ಅರ್ಜುನನಂತೆ ಏಕಾಗ್ರತೆಯುಳ್ಳವರು ಆದರೆ ಮಾತ್ರ ಯಶಸ್ವಿಯಾಗುತ್ತೀರಿ. ತಂದೆ ತಾಯಿಗೆ ಮತ್ತು ನಿಮ್ಮ ಕಾಲೇಜು ಮತ್ತು ಉಪನ್ಯಾಸಕರಿಗೆ ಕೀರ್ತಿ ತರುವಂತಹ ಕಾರ್ಯವಾಗಬೇಕಾದರೆ ನೀವು ಯಾವಾಗಲೂ ಅಧ್ಯಯನಶೀಲರಾಗಬೇಕು ಎಂದು ಹೇಳಿದರು.
ರವೀಂದ್ರನಾಥ ದಂಡಿನ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ವಿದ್ಯಾರ್ಥಿಗಳ ಮನಸ್ಸು ಚಂಚಲ ಮನಸ್ಥಿತಿ ಉಳ್ಳದ್ದಾಗಬಾರದು, ದ್ವಿತೀಯ ಪಿಯುಸಿ ಫಲಿತಾಂಶದಿಂದ ನೀವೇನು ಎಂದು ಗುರುತಿಸಿಕೊಳ್ಳುವಂತೆ ಮಾಡುವ ಮೌಲ್ಯಗಳ ಅಳವಡಿಕೆ ಅವಶ್ಯಕ. ಸಮಯ ಪಾಲನೆ ವಿದ್ಯಾರ್ಥಿ ಜೀವನದಲ್ಲಿ ಬಹುಮುಖ್ಯವಾಗಿದೆ ಮತ್ತು ವಿದ್ಯಾರ್ಥಿಗಳು ಆನ್ಲೈನ್ ಗೇಮ್ ಗಳಲ್ಲಿ ತೊಡಗಿಕೊಳ್ಳಬಾರದು. ಭಾರತೀಯ ಸಂಸ್ಕೃತಿ ವಿಶ್ವಗುರುವಾಗುವತ್ತ ಮತ್ತು ಕಟ್ಟಾ ಕಡೆಯ ವ್ಯಕ್ತಿಗೂ ಗೌರವ ಕೊಡುವ ಪ್ರವೃತ್ತಿಯುಳ್ಳವರಾಗಿದ್ದೇವೆ ಹಾಗಾಗಿ ಮೌಲ್ಯಗಳ ಅಳವಡಿಕೆ ವಿದ್ಯಾರ್ಥಿಜೀವನದಿಂದಲೇ ಇರಬೇಕು ಎಂದು ಹೇಳಿದರು.
ಪ್ರತಿಯೊಂದು ಜೀವ ಕಂತುಗಳಲ್ಲಿ ದೇವರು ಮತ್ತು ಚರಚರವಸ್ತುಗಳಲ್ಲಿ ದೈವತ್ವಕಾಣುವ ನಾಡಿನಲ್ಲಿರುವ ನಾವು ಹೆಚ್ಚು ಯಾರು ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳುತ್ತೇವೆ ಅವರು ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಕಿವಿ ಮಾತು ಹೇಳಿದ ಅವರು ವಿದ್ಯಾರ್ಥಿ ಆಸಕ್ತಿಯಿಂದ ಅಧ್ಯಯನದಲ್ಲಿ ತೊಡಗಿಕೊಂಡಾಗ ಮತ್ತು ನಡೆನುಡಿಯಲ್ಲಿ ಆಚಾರ ವಿಚಾರಗಳನ್ನ ಹೊಂದಿದಾಗ ಮಾತ್ರ ದೊಡ್ಡ ವ್ಯಕ್ತಿತ್ವವುಳ್ಳವರಾಗುತ್ತಿರಿ ಮತ್ತು ಉತ್ತಮ ಅಂಕಗಳನ್ನು ಪಡೆದು ಭವಿಷ್ಯದಲ್ಲಿ ಬದುಕು ಕಟ್ಟಿಕೊಳ್ಳಲು ಸಲಹೆ ನೀಡಿದರು.
ಯಶವಂತ ಸ್ವಾಮೀಜಿ ಆಶೀರ್ವಚನ ಮಾಡುತ್ತ, ನಾನು ಯಾರು ನನ್ನ ಕರ್ತವ್ಯ ಮತ್ತು ನನ್ನನ್ನು ನಾನು ತಿಳಿದುಕೊಳ್ಳುವ ನಮ್ಮ ಸಂಸ್ಕೃತಿ ಪರಂಪರೆ ತಿಳಿಯಬೇಕು ಏನು ಎಂಬುದರ ಅರಿವು ಇರಲಿ ಎಂದು ಎಚ್ಚರಿಕೆ ಮಾತು ಹೇಳಿದರು. ನಿನ್ನೆ ಕಳೆದು ಹೋದ ದಿನ ಬಿಟ್ಟು ನಾಳೆ ದಿನದ ಬಗ್ಗೆ ಯೋಚನೆ ಮಾಡಿ ಬದುಕಿನ ಬಗ್ಗೆ ಅಂದರೆ ತಂದೆ ತಾಯಿ ಏನು ಮಾಡುತ್ತಿದ್ದಾರೆ ಅವರು ನಿಮಗಾಗಿ ತಮ್ಮ ನೆಮ್ಮದಿ ತ್ಯಾಗ ಮಾಡಿ ಇಂದು ದುಡಿಯುತ್ತಿದ್ದಾರೆ ಅದರ ಅರಿವು ಮಕ್ಕಳಲ್ಲಿ ಇರಬೇಕು ಎಂದು ಹೇಳಿದರು.
ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ದ್ಯಾಮಣ್ಣ ಹುಗ್ಗಿ ಸರ್, ವಿದ್ಯಾರ್ಥಿ ಪ್ರತಿನಿಧಿಗಳಾದ ಕೃಷ್ಣ ಮತ್ತು ಶ್ರಾವಣಿ ಸೇರಿದಂತೆ ಪಿಯು ವಿಭಾಗದ ಉಪನ್ಯಾಸಕ, ಬಸವರಾಜ್ ದಳವಾಯಿ, ಅಶೋಕ್ ಚಂಚಿ, ಸುಭಾಷ್ ಮಸ್ಗೂನಿ, ಎನ್ ಡಿ ಹಾದಿಮನಿ, ಸುಮಂಗಲ ನಾಯ್ಕರ್, ಯಶೋಧ ತಾಂಬೆ, ಯೋಗಿತಾ ಹೆಗಡೆ, ದಿವ್ಯ ಶಿವಪುರ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ತಿತರಿದ್ದರು.
ಪಂಚಾಕ್ಷರಿ ಮತ್ತು ಭೂಮಿಕಾ ಪ್ರಾರ್ಥಿಸಿದರು, ಪ್ರಾಚಾರ್ಯ ಸಂದೀಪ್ ಬೂದಿಹಾಳ ಸ್ವಾಗತಿಸಿ ಪ್ರಸ್ತಾವಿಕ ನುಡಿ ನುಡಿದರು. ಡಾ. ಅಶೋಕ ಗಡದ ಮತ್ತು ಶ್ರೀಮತಿ ಕೆ ಎಸ್ ಬೇಲೇರಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿ ಕೊಟ್ಟರು. ಕನ್ನಡ ಉಪನ್ಯಾಸಕ ಮಹಾದೇವಯ್ಯ ಎನ್ ಎಂ. ನಿರೂಪಿಸಿದರು. ಪಾರ್ವತಿ ಕಲ್ಲೊಳ್ಳಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 