ಕಾಮ್ರೇಡ್ ಲೆನಿನ್, ಸ್ಟಾಲಿನ್ಗೆ ಎಸ್ಯುಸಿಐ ಗೌರವ


 ಧಾರವಾಡ/ಹುಬ್ಬಳ್ಳಿ 18: ನವೆಂಬರ್ ಮಹಾಕ್ರಾಂತಿ ಜಗತ್ತಿನ ದುಡಿಯುವ ಜನಗಳಿಗೆ ವಿಮೋಚನೆಯ ದಾರಿ ತೋರಿಸಿದ ದಿನ. ಸಮಾಜವಾದವು ಕೇವಲ ಕಾಲ್ಪನಿಕವಾಗಿದ್ದು ಎಂದಿಗೂ ಅದು ಸಮಾಜದಲ್ಲಿ ಆಚರಣೆಗೆ ಬರುವುದಿಲ್ಲ ಎಂಬ ನಂಬಿಕೆಯಿಂದ ಅದನ್ನು ಕಡೆಗಣಿಸಲಾಗಿತ್ತು. ಕಾಲರ್್ಮಾಕ್ಸ್ರವರು ಸಮಾಜವಾದವನ್ನು ಸ್ಥಾಪಿಸಬಹುದೆಂದು ಪ್ರತಿಪಾದಿಸಿದ್ದನ್ನು ಲೆನಿನ್ರವರು ರಷ್ಯಾದಲ್ಲಿ ನೈಜ ಕ್ರಾಂತಿಕಾರಿ ಪಕ್ಷದಡಿಯಲ್ಲಿ ಅಶಿಕ್ಷಿತರು, ಸಮಾಜದಲ್ಲಿ ಕಡೆಗಣಿಸಲ್ಪಟ್ಟ, ತುಳಿತಕ್ಕೊಳಗಾದ ಜನಗಳನ್ನು ಒಗ್ಗೂಡಿಸಿ, ಸಂಘಟನೆ ಮಾಡಿ ಚೈತನ್ಯ ತುಂಬಿ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಿ ಇದು ಸಾದ್ಯ ಎಂದು ಪ್ರಪಂಚಕ್ಕೆ ತೋರಿಸಿಕೊಟ್ಟರು. ನೈಜ ಕಮ್ಯೂನಿಸ್ಟ್ ಪಕ್ಷದಿಂದ ಮಾತ್ರ ವೈಜ್ಞಾನಿಕ ಸಮಾಜವಾದವನ್ನು ಸ್ಥಾಪಿಸಲು ಸಾದ್ಯ ಎಂಬುದನ್ನು ಇದು ಸಾಬೀತು ಪಡಿಸಿತು. ಎಸ್ಯುಸಿಐ(ಸಿ) ಪಕ್ಷವು ಕಾಮರ್ಿಕವರ್ಗದ ಮಹಾನ್ ನಾಯಕ ಶಿವದಾಸ್ ಘೋಷ್ರವರ ಚಿಂತನೆಯ ಆಧಾರದ ಮೇಲೆ ಮೂಲಭೂತ ಬದಲಾವಣೆಯಲ್ಲಿ ನಂಬಿಕೆಯಿಟ್ಟು ನಿಜವಾದ ಕಮ್ಯೂನಿಸ್ಟ್ ಪಕ್ಷವಾಗಿ ಹುಟ್ಟಿ, ಬೆಳೆದು ಇಂದು ದೇಶವ್ಯಾಪಿ ವಿಸ್ತರಿಸಿದೆ. ಕಾಮರ್ಿಕವರ್ಗದ ಹೋರಾಟದಲ್ಲಿ ಗಂಭೀರವಾಗಿ ತನ್ನನ್ನು ತೊಡಗಿಸಿಕೊಂಡಿದೆ. ನವೆಂಬರ್ ಕ್ರಾಂತಿಯನ್ನು ನೆನಪಿಸಿಕೊಳ್ಳುವುದರ ಮೂಲಕ, ಭಾರತದಲ್ಲಿ ಕ್ರಾಂತಿಯನ್ನು ನೆರವೇರಿಸಲು ಎಸ್ಯುಸಿಐ(ಸಿ) ಪಕ್ಷವನ್ನು ಬಲಪಡಿಸಬೇಕು ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್), ಎಸ್ಯುಸಿಐ(ಸಿ) ಪಕ್ಷದ ಧಾರವಾಡ ಜಿಲ್ಲಾ ಸಮಿತಿಯು ಇಂದು ಪಕ್ಷದ ಕಚೇರಿಯಲ್ಲಿ 1917, ನವೆಂಬರ್ 17ರ ರಷ್ಯಾದ ಮಹಾಕ್ರಾಂತಿಯ ನೆನಪಿನಲ್ಲಿ  ಏರ್ಪಡಿಸಿದ್ದ ಕಾರ್ಯಕ್ರಮವನ್ನು ಮಾತನಾಡಿದರು. 

ಪಕ್ಷದ ರಾಜ್ಯ ಸಮಿತಿ ಸದಸ್ಯರು ಹಾಗೂ ಜಿಲ್ಲಾ ಕಾರ್ಯದಶರ್ಿ ರಾಮಾಂಜನಪ್ಪ ಆಲ್ದಳ್ಳಿಯವರು ನವೆಂಬರ್ ಮಹಾಕ್ರಾಂತಿಯ ಶಿಲ್ಪಿಗಳು ಹಾಗೂ ಕಾಮರ್ಿಕ ವರ್ಗದ ಮಹಾನ್ ನಾಯಕರುಗಳಾದ ಕಾಮ್ರೇಡ್ ಲೆನಿನ್ ಹಾಗೂ ಕಾಮ್ರೆಡ್ ಸ್ಟಾಲಿನ್ ರವರ ಭಾವಚಿತ್ರಕ್ಕೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು. 

ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಗಂಗಾಧರ ಬಡಿಗೇರ, ಭುವನಾ, ದೀಪಾ, ಶರಣು ಗೋನವಾರ, ರಮೇಶ ಹೊಸಮನಿ, ಮಧುಲತಾ, ಭವಾನಿಶಂಕರ್ ಸೇರಿದಂತೆ ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.