ಕಂಪ್ಲಿ: 69ನೇ ವಾಷರ್ಿಕ ಮಹಾಜನ ಸಭೆ

ಕಂಪ್ಲಿ:ಸೆ.26. ತಾಲೂಕಿನ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 69ನೇ ವಾಷರ್ಿಕ ಮಹಾಜನ ಸಭೆ ಇತ್ತೀಚೆಗೆ ಜರುಗಿತು. 

    ಸಂಘದ ಅಧ್ಯಕ್ಷ ಜಿ.ಮಲ್ಲಿಗೌಡ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, 6300 ಸದಸ್ಯರನ್ನು ಹೊಂದಿದೆ. 6.97 ಕೋಟಿ ರೂ.ಗಳ ರಸಗೊಬ್ಬರ, 9.60 ಲಕ್ಷ ರೂ.ಗಳ ಕೀಟನಾಶಕ ಮಾರಾಟ, 11.83 ಲಕ್ಷ ರೂ.ಗಳ ಪಡಿತರ ಆಹಾರ ಧಾನ್ಯಗಳ ಮಾರಾಟ, 16.73 ಲಕ್ಷ ರೂ.ಗಳ ವೇರ್ಹ್ ಹೌಸ್ ಶುಲ್ಕ ಸಂಗ್ರಹಿಸಲಾಗಿದೆ. ಮಾರುಕಟ್ಟೆ ಧರಕ್ಕಿಂತ ಕಡಿಮೇ ಬೆಲೆಯಲ್ಲಿ ರಸಗೊಬ್ಬರ ಕೀಟನಾಶಕ ಮಾರಾಟ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಸಂಘವು 7.35 ಕೋಟಿ ವ್ಯವಹಾರ ನಡೆಸಿ, 4.74 ಲಕ್ಷ  ರೂ. ನಿವ್ವಳ ಲಾಭಗಳಿಸಿದೆ. ಈ ಸಂಘದ ಅಭಿವೃದ್ಧಿಗೆ ರೈತರ ಹಾಗೂ ಮುಖಂಡರ ಸಹಕಾರಯಿದೆ. ರೈತರಿಗೆ ಸಕಾಲದಲ್ಲಿ ಸೂಕ್ತ ಪ್ರಮಾಣದ ಸಾಲ, ರಸಗೊಬ್ಬರ ಸೇರಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು. 

ನಂತರ ವ್ಯವಸ್ಥಾಪಕ ಪಿ.ಸಂಜೀವರಾಯುಡು 2017-18ನೇ ಸಾಲಿನ ಲೆಕ್ಕ ಪತ್ರಗಳನ್ನು ಮಂಡಿಸಿದರು. ನಂತರ ವಿವಿಧ ವಿಷಯಗಳ ಬಗ್ಗೆ ಚಚರ್ಿಸಲಾಯಿತು. 

   ಈ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಪುಲ್ಸೆ ನಾಗೇಶ್, ನಿದರ್ೇಶಕರಾದ ಕರೇಕಲ್ ಮನೋಹರ, ಕನಕಗಿರಿ ರೇಣುಕನಗೌಡ, ಮುದುಗಲ್ ಶಬ್ಬೀರ್, ವಿ.ನೀಲಕಂಠೇಶ, ಎನ್.ಮಲ್ಲಿಕಾಜರ್ುನ, ಗೌಡ್ರು ಅಮರನಾಥ, ಎಸ್.ವೆಂಕೋಬಣ್ಣ, ಸಿ.ಜಿ.ನೀರಜ, ಎಸ್.ಸವಿತ ಹಾಗೂ ರೈತರು, ಮುಖಂಡರು ಸೇರಿದಂತೆ ಸಹಕಾರ ಸಂಘದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.