ಲೋಕದರ್ಶನ ವರದಿ
ಕಂಪ್ಲಿ 15: ಶಾಲಾ ಕಾಲೇಜು ಸಮಯಕ್ಕೆ ಸರಿಯಾಗಿ ಬಸ್ ಸಂಚಾರವಿಲ್ಲದ ಕಾರಣ ತಾಲ್ಲೂಕಿನ ಮೆಟ್ರಿ, ಚಿನ್ನಾಪುರ, ಜವುಕು ಹಾಗೂ ಸುತ್ತಲಿನ ಹಳ್ಳಿಗಳ ವಿದ್ಯಾಥರ್ಿಗಳು ಮೆಟ್ರಿ ಗ್ರಾಮದ ಬಸ್ ನಿಲ್ದಾಣದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.
'ನೂರಾರು ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಿಗೆ ತೆರಳುತ್ತಿದ್ದು, ಸಾರಿಗೆ ಸಂಸ್ಥೆ ಬಸ್ಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ. ಅದರಿಂದ ತರಗತಿಗಳಿಗೆ ತೆರಳುವುದು ವಿಳಂಬವಾಗುತ್ತಿದೆ' ಎಂದು ಕಾಲೇಜು ವಿದ್ಯಾಥರ್ಿ ಸಿ.ಡಿ. ಉದಯಕುಮಾರ ಆರೋಪಿಸಿದರು'ಬೆಳಗಿನ ವೇಳೆಯಲ್ಲಿ ಗಂಗಾವತಿ, ಕಂಪ್ಲಿಯಿಂದ ಬಸ್ಗಳಿದ್ದರೂ ಚಾಲಕರು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಸಾರಿಗೆ ಘಟಕ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ' ವಿದ್ಯಾರ್ಥಿ ಎಂ.ಮಹೇಶ್, ಬಿ.ಮಂಜುನಾಥ ಒತ್ತಾಯಿಸಿದರು. 'ಬೆಳಿಗ್ಗೆ ಈ ಮಾರ್ಗದಲ್ಲಿ ಸಂಚರಿಸುವ ಅನಂತಪುರ, ಮಂತ್ರಾಲಯ ಅಂತರರಾಜ್ಯ ಬಸ್ಗಳಲ್ಲಿ ವಿದ್ಯಾರ್ಥಿ ರಿಯಾಯ್ತಿ ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಸಂಚರಿಸಲು ಅನುಮತಿ ನೀಡುವಂತೆ' ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು. 'ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ' ಎಚ್ಚರಿಸಿದರು.
ಬೆಳಿಗ್ಗೆ ಯಿಂದ ಪ್ರತಿಭಟನೆ ನಡೆಸಿದ್ದರಿಂದ ಸಂಚಾರದಲ್ಲಿ ವ್ಯತ್ಯಯವಾಗಿ ನೂರಾರು ಪ್ರಯಾಣಿಕರಿಗೆ ತೊಂದರೆ ಅನುಭವಿಸಿದರು.
ನಂತರ ಸಾರಿಗೆ ಸಂಸ್ಥೆ ಅಧಿಕಾರಿಗಳು, ಪೊಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಸಮಸ್ಯೆ ಕುರಿತು ಚಚರ್ಿಸಿ ಶೀಘ್ರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ನಂತರ ಬಸ್ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು.