ಕಂಪ್ಲಿ: ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ನೀಡಿ: ಎಂ.ಸುಧೀರ

ಲೋಕದರ್ಶನ ವರದಿ

ಕಂಪ್ಲಿ 10: ತಾಯಂದಿರು ಮಕ್ಕಳಿಗೆ  ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ ನೀಡಿದಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿಬೆಳೆಯಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷ ಎಂ.ಸುಧೀರ್ ಹೇಳಿದರು. 

ಇಲ್ಲಿನ ಕಲ್ಗುಡಿ ಸಂಕೀರ್ಣದಲ್ಲಿನ ಅಕ್ಷರ ಪ್ರಿ ಸ್ಕೂಲ್ ಶಿಕ್ಷಣ ಸಂಸ್ಥೆಗೆ ಚಾಲನೆ ನೀಡಿ, ಮಕ್ಕಳನ್ನು ಯಾವುದೇ ಮಾಧ್ಯಮಕ್ಕೆ ಸೇರಿಸಿದರೂ ಕನ್ನಡ ಮಾತೃಭಾಷೆಯನ್ನಾಗಿ ಬಳಸುವಲ್ಲಿ ಮುಂದಾಗಬೇಕು. ಮಕ್ಕಳ ಮನಸ್ಸನ್ನರಿತು ಶಿಕ್ಷಣ ನೀಡುವಲ್ಲಿ ಶಿಕ್ಷಕರು ಮುಂದಾಗಬೇಕು ಎಂದು ಹೇಳಿದರು. 

      ಅಕ್ಷರ ಎಜ್ಯುಕೇಷನ್ ಟ್ರಸ್ಟ್ನ ಅಧ್ಯಕ್ಷೆ ಹಾಗೂ ಪ್ರಾಚಾರ್ಯ ಹಿಮಾಸತ್ತಿ ಮಾತನಾಡಿ, ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಶಿಕ್ಷಣ ನೀಡಬೇಕಾಗಿದೆ. ಮಕ್ಕಳ ಮೇಲೆ ಒತ್ತಡ ಹೇರದೆ, ಅವರಲ್ಲಿ ಶಿಕ್ಷಣ ಪ್ರೀತಿಯನ್ನು ಜಾಗೃತಿಗೊಳಿಸಬೇಕಾಗಿದೆ. ಪ್ರಸ್ತುತ ವಿದ್ಯಾಮಾನಕ್ಕೆ ತಕ್ಕಂತೆ ಮಕ್ಕಳನ್ನು ಶಿಕ್ಷಣವಂತರನ್ನಾಗಿ ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಗುರುತರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಅಲ್ಲದೆ, ರಿತಿಕಾ ವಾಲಿ, ಸಾಲ್ವರಾನ್ ಇಬ್ಬರು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು.ಬಡಮಕ್ಕಳಿಗೆ ಅದ್ಯತೆ ನೀಡಲಾಗುವುದು ಎಂದು ಹೇಳಿದರು.  

    ಈ ಸಂದರ್ಭದಲ್ಲಿ ಕಲ್ಗುಡಿ ಮಂಜುನಾಥ, ಕೆ.ವಿಜಯಕುಮಾರ್, ಅಕ್ಷರ ಎಜ್ಯುಕೇಷನ್ ಟ್ರಸ್ಟ್ನ ವಿನಯ್ ಸಂಕ್ರಾಂತಿ, ಸಮೀರ್, ಕೃಷ್ಣಾವೇಣಿ ಸೇರಿ ಅನೇಕರು ಉಪಸ್ಥಿತರಿದ್ದರು.