ಮಗುವಿಗೆ, ಗಭರ್ಿಣಿಯರಿಗೆ ಸಂಪೂರ್ಣ ಲಸಿಕೆ ಹಾಕಿಸಿ ರೋಗದಿಂದ ರಕ್ಷಿಸಿ: ಹಂದ್ರಾಳ್


ಲೋಕದರ್ಶನ ವರದಿ 

ಬಳ್ಳಾರಿ14: ನಗರದ ಬಂಡಿಹಟ್ಟಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇಂದ್ರಧನುಷ್ ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್.ಬಿ. ಹಂದ್ರಾಳ್ ಅವರು ಮಗುವಿಗೆ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಿದರು. 

     ಈ ಸಂದರ್ಭದಲ್ಲಿ ಮಾತನಾಡಿ ಮಗುವನ್ನು ಹಾಗೂ ಗಭರ್ಿಣಿಯರನ್ನು ರೋಗಗಳಿಂದ ರಕ್ಷಿಸಬೇಕಾದರೆ ಸಂಪೂರ್ಣ ಲಸಿಕೆ ನೀಡುವುದು ಅವಶ್ಯಕ. ಹುಟ್ಟಿನಿಂದ 5 ವರ್ಷದೊಳಗಿನವರೆಗೆ ಹಾಕುವ ಎಲ್ಲಾ ಲಸಿಕೆಗಳನ್ನು ಸಕಾಲದಲ್ಲಿ ಹಾಕಿಸಿ ಮಗುವಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಾಯಂದಿಯರಿಗೆ ಹೇಳಿದರು. 

   ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಟಿ.ರಾಜಶೇಖರ ರೆಡ್ಡಿ ಅವರು ಮಾತನಾಡಿ, ಕಳೆದ ಮೇ ತಿಂಗಳಿನಿಂದ ವಿವಿಧ ಹಂತಗಳಲ್ಲಿ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಪ್ರಸ್ತುತ ಸಂಪೂರ್ಣ ಜಿಲ್ಲೆಯಲ್ಲಿ ಲಸಿಕೆ ವಂಚಿತ ಮಕ್ಕಳಿಗೆ ಮತ್ತು ಗಭರ್ಿಣಿಯರಿಗೆ ಲಸಿಕೆಯನ್ನು ಆಗಷ್ಟ್, ಸೆಪ್ಟಂಬರ್, ಅಕ್ಟೋಬರ್ ಮೂರು ತಿಂಗಳ ಕಾಲ ತಿಂಗಳಿಗೆ 4 ದಿನಗಳಂತೆ ಲಸಿಕೆ ಹಾಕುವ ಗುರಿ ಇಟ್ಟುಕೊಳ್ಳಲಾಗಿದೆ. ಆಗಸ್ಟ್ ಮಾಹೆಯಲ್ಲಿ ಆ.13ರಿಂದ 18ರವರೆಗೆ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ ಎಂದರು.

 ಇದಕ್ಕಾಗಿ 7 ತಾಲ್ಲೂಕಗಳಲ್ಲಿ 337 ಆರೋಗ್ಯ ಸಿಬ್ಬಂದಿ ವರ್ಗದವರ ಮೂಲಕ 909 ಲಸಿಕಾ ಅಧಿವೇಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ 62 ಸಂಚಾರಿ ತಂಡಗಳು ಕಾರ್ಯನಿರ್ವಹಿಸಲಿವೆ. ಹುಟ್ಟಿನಿಂದ 2 ವರ್ಷದೊಳಗಿನ 14031 ಮಕ್ಕಳು, 5 ರಿಂದ 6 ವರ್ಷದೊಳಗಿನ 2111 ಮಕ್ಕಳು, ಹಾಗೂ 3522 ಗಭರ್ಿಣಿ ಸ್ತ್ರೀಯರಿಗೆ ಲಸಿಕೆ ನೀಡಲು ಗುರಿ ಹೊಂದಲಾಗಿದೆ. ಈ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ ಎಲ್ಲಾ ತಾಲ್ಲೂಕಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

 ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ರವೀಂದ್ರನಾಥ್.ಎಂ.ಹೆಚ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ  ಮುಖ್ಯವಾಗಿ 2 ವರ್ಷದೊಳಗಿನ ಮಕ್ಕಳಿಗೆ ಬಿ.ಸಿ.ಜಿ, ಪೋಲಿಯೋ, ದಡಾರ- ರುಬೆಲ್ಲಾ, ಜೆ.ಇ ಲಸಿಕೆ ಹಾಗೂ ಡಿ.ಪಿ.ಟಿ, ಹೈಪಿಟೈಟಸ್-ಬಿ, ಇನ್ ಪ್ಲುಯೆಂಜಾ-ಬಿ ಸೇರಿರುವ ಪೆಂಟಾವಲೆಂಟ್ 5 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಬಿ.ಪಿ.ಟಿ ಬೂಸ್ಟರ್ ಹಾಗೂ ಗಭರ್ಿಣಿಯರಿಗೆ- ಟಿ.ಟಿ ಲಸಿಕೆ(ಧನುವರ್ಾಯು)ಯನ್ನು ನೀಡಲಾಗುತ್ತದೆ ಎಂದರು. 

 ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ನಾಗರಾಜ್, ಎಸ್.ಎಮ್.ಒ ಅಧಿಕಾರಿ ಡಾ.ಆರ್.ಎಸ್.ಶ್ರೀಧರ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಜಯಲಕ್ಷ್ಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಅಬ್ದುಲ್ಲಾ, ವೈದ್ಯಾಧಿಕಾರಿ ಡಾ.ಪೂಣರ್ಿಮಾ ಕಟ್ಟಿಮನಿ, ನಗರ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ಫಾರೂಕ್ ಅಹ್ಮದ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯ್ಕ, ಡಿಎನ್ಒ ಸರೋಜಾ,  ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ  ಶಾಂತವ್ವ ಉಪ್ಪಾರ ಸೇರಿದಂತೆ ಹಿರಿಯ ಆರೋಗ್ಯ ಸಹಾಯಕರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕತರ್ೆಯರು ಹಾಗೂ ತಾಯಂದಿರು ಮತ್ತು ಇತರರು ಹಾಜರಿದ್ದರು.  

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಅವರು ಸ್ವಾಗತಿಸಿದರು.  ಶೋಭಾ ವಂದಿಸಿದರು.