ಬಾಗಲಕೋಟೆ: ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ಹಾನಿಗೊಳಗಾದ ಶಾಲಾ, ಅಂಗನವಾಡಿ ಕೊಠಡಿ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇತರೆ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ನೆರೆ ಪರಿಹಾರ ಕಾಮಗಾರಿ, ಫಲಾನುಭವಿಗಳಿಗೆ ವಿತರಿಸುವ ಪರಿಹಾರ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ವಿಭಾಗದಲ್ಲಿ 65 ಕೋಟಿ ರೂ.ಗಳ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಕಾಮಗಾರಿಗಳ ಪ್ರಗತಿಯ ಮೇಲ್ವಿಚಾರಣೆ ಕೈಗೊಳ್ಳುವಂತೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಅವರಿಗೆ ಸೂಚಿಸಿದರು. ಬಾದಾಮಿ, ಮುಧೋಳ ಹಾಗೂ ಬಾಗಲಕೋಟೆ ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿಗಳನ್ನು ತಕ್ಷಣೇ ಅನುಮೋದನೆ ನೀಡುವಂತೆ ಪ್ರಧಾನ ಕಾರ್ಯದಶರ್ಿಗಳಿಗೆ ಮೊಬೈಲ್ನಲ್ಲಿ ಮಾತನಾಡಿ ತಿಳಿಸಿದರು.
ನದಿ ಪಾತ್ರದ ಪ್ರದೇಶಗಳಲ್ಲಿ ನೀಡು ಕಡೆಯಾಗಿದ್ದು, ಹೆಸ್ಕಾಂದವರು ವಿದ್ಯುತ್ ಕಂಬಗಳನ್ನು ತಕ್ಷಣೆ ಹಾಕಿ ಕೃಷಿ ನೀರಾವರಿಗೆ ಅನುಕೂಲ ಮಾಡಿಕೊಡಬೇಕು. ಅಂಗನವಾಡಿ ಕಟ್ಟಡಗಳನ್ನು ತಕ್ಷಣವೇ ರಿಪೇರಿ ಮಾಡಲು ತಿಳಿಸಿದರು. ಪ್ರವಾಹ ಪರಿಸ್ಥಿತಿ ಪರಿಹಾಋ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬ ಮಾಡುತ್ತಿರುವ ಹಿನ್ನಲೆಯಲ್ಲಿ ಬೇರೆ ಇಂಜಿನೀಯರ್ ಅಧಿಕಾರ ಹಸ್ತಾಂತರಿಸುವಂತೆ ಪಂಚಾಯತ ರಾಜ್ ಕಾರ್ಯನಿವರ್ಾಹಕ ಅಭಿಯಂತರ ಧನವಾಡಕರ್ಗೆ ಕಾರಜೋಳ ಸೂಚಿಸಿದರು. ಬಹುಗ್ರಾಮ ಕುಡಿಯುವ ನೀರಿನ 662 ಕಾಮಗಾರಿಗಳ ಪೈಕಿ 559 ಪೂರ್ಣಗೊಂಡಿರುವುದಾಗಿ ಪಂಚಾಯತ್ ರಾಜ್ ಕಾರ್ಯನಿವರ್ಾಹಕ ಇಂಜಿನಿಯರ್ ಸಭೆಗೆ ತಿಳಿಸಿದರು.
ಪ್ರವಾಹದಲ್ಲಿ ಮನೆ ಬೀಳದೆ ಇರುವವರಿಗೆ ಪರಿಹಾರ ನೀಡಿದ ಪ್ರಕರಣಗಳು ಕಂಡುಬಂದಿದ್ದು, ಅಂಥಹ ಪ್ರಕರಗಳ ಮೇಲೆ ಉಪವಿಭಾಗಾಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ತರ ವಿರುದ್ದ ಶಿಸ್ತುಕ್ರಮ ಕೈಗೊಂಡು ಪರಿಹಾರಧನವನ್ನು ವಸೂಲಿ ಮಾಡಿ ಸಕರ್ಾರಕ್ಕೆ ಜಮಾ ಮಾಡಬೇಕೆಂದು ಉಪ ಮುಖ್ಯಮಂತ್ರಿಗಳು ಸೂಚಿಸಿದರು. ಇದೇ ಸಂದರ್ಭದಲ್ಲಿ ಐಹೊಳೆ, ಬೇನಾಳ ಹಾಗೂ ಹಿರೇಮಾಗಿಯಲ್ಲಿ ಕೆಲವು ಅರ್ಹ ಫಲಾನುಭವಿಗಳಿಗೆ ಇನ್ನು ಪರಿಹಾರ ದೊರೆತಿರುವುದಿಲ್ಲವೆಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರೆ ಮುತ್ತೂರು ಹಾಗೂ ತಮದಡ್ಡಿ ಗ್ರಾಮದ ಸಂತ್ರಸ್ತರಿಗೂ ಕೂಡಾ ಪರಿಹಾರ ದೊರೆತಿರುವುದಿಲ್ಲ. ಅವುಗಳನ್ನು ಪರಿಗಣಿಸಿ ಪರಿಹಾರ ನೀಡಲು ತಿಳಿಸಿದರು.
ಆರ್ & ಆರ್ ಅನುದಾನ ಬಿಡುಗಡೆಗೆ ಕ್ರಮ :
ಆಲಮಟ್ಟಿ ಜಲಾಶಯದ ಎಫ್ಆರ್ಎಲ್ 524.26 ಮೀಟರ್ ಅಡಿಯಲ್ಲಿ 7 ಗ್ರಾಮಗಳ ಪೈಕಿ 728 ಎಕರೆ ಭೂಸ್ವಾಧೀನ ಆಗಿದೆ. 17 ಸಾವಿರ ಎಕರೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ.
ನಮ್ಮ ಪಾಲಿನ ಹಂಚಿಕೆಯಾದ 177 ಟಿಎಂಸಿ ನೀರು ಬಳಕೆಯಾಗಬೇಕು. ಇದಕ್ಕಾಗಿ ಬರುವ ಬಜೆಟ್ನಲ್ಲಿ ವಿಶೇಷ ಅನುದಾನ ನೀಡಲಾಗುವುದೆಂದು ಡಿಸಿಎಂ ಕಾರಜೋಳ ತಿಳಿಸಿದರು.
ಆರ್ & ಆರ್ ನಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಪ್ರಕ್ರಿಯೆ ಆರಂಭಿಸಲಾಗಿದ್ದು, 9 ಗ್ರಾಮಗಳಲ್ಲಿ ಪ್ರಾರಂಭಿಸಲಾಗಿದೆ. ಒಟ್ಟು 136 ಕೋಟಿ ರೂ.ಗಳ ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳಲಾಗುವುದು. ಆರ್ & ಆರ್ಗೆ ಶೀಘ್ರವೇ ರೆಗ್ಯೂಲರ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ಡಿಸಿಎಂ ಕಾರಜೋಳ ತಿಳಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಪ್ರವಾಹ ಪರಿಹಾರದ ಮಾಹಿತಿ ನೀಡುತ್ತಾ, 33499 ರೈತರಿಗೆ ಬೆಳೆಗಳಿಗೆ ಈಗಾಗಲೇ 78 ಕೋಟಿ ರೂ.ಗಳ ಬೆಳೆ ಪರಿಹಾರ ನೀಡಲಾಗಿದೆ. 73338 ಮನೆಗಳು ಹಾಳಾಗಿದ್ದು, 7308 ಮನೆಗಳಿಗೆ ಆರ್ಟಿಜಿಎಸ್ ಮೂಲಕ ಪರಿಹಾರ ನೀಡಲಾಗಿದೆ.
ಹೆಸ್ಕಾಂ 39 ಕೋಟಿ ರೂ.ಗಳ ಕಾಮಗಾರಿಗಳಲ್ಲಿ ಶೇ.90 ರಷ್ಟು ಪೂರ್ಣಗೊಳಿಸಲಾಗಿದೆ. 50352 ಸಂತ್ರಸ್ತ ಕುಟುಂಬಗಳಿಗೆ ತುತರ್ು ಪರಿಹಾರವಾಗಿ 10 ಸಾವಿರ ರೂ. ನೀಡಲಾಗಿದೆ. ಬಾದಿತರಾಗಿದ್ದ 240 ನೇಕಾರರಿಗೆ ತಪಾ 25 ಸಾವಿರದಂತೆ ಒಟ್ಟು 60 ಲಕ್ಷ ರೂ. ಪರಿಹಾರ ನೀಡಲಾಗಿದೆ. ಸರಕಾರ ಒಟ್ಟು 280 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಜಿಲ್ಲಾಡಳಿತವು 138 ಕೋಟಿ ರೂ. ಖಚರ್ು ಮಾಡಿದೆ ಎಂದು ತಿಳಿಸಿದರು.
ಸಭೆಯಲ್ಲಿ ತೇರದಾಳ ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.