ಕೊಪ್ಪಳ: ಮಂಡಳಿಯಿಂದ ಅನುಮೋದನೆ ಪಡೆದ ಯಾವುದೇ ಕಾಮಗಾರಿ ಆರಂಭಿಸಲು ಯಾವುದೇ ರೀತಿಯ ಸಮಸ್ಯೆ ಎದುರಾದಲ್ಲಿ ಅನಗತ್ಯ ವಿಳಂಬ ಮಾಡದೇ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಆರಂಭಿಕ ಹಂತದಲ್ಲಿಯೇ ಪರಿಹಾರ ಕಂಡುಕೊಳ್ಳಿ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಸುಬೋದ್ ಯಾದವ ಅಧಿಕಾರಿಗಳಿಗೆ ಹೇಳಿದರು.
ಗುರುವಾರ (ಸೆ. 26)ದಂದು ಜಿಲ್ಲಾ ಪಂಚಾಯತನ ಜೆ. ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅನುಷ್ಟಾನ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯ ಕಾಮಗಾರಿಗಳ ಅನುಷ್ಟಾನ/ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎರಡು ವರ್ಷಗಳ ಹಿಂದೆ ಮಂಡಳಿ ಅನುಮೋದಿತ ಕಾಮಗಾರಿಗಳನ್ನು ಈವರೆಗೂ ಆರಂಭಿಸಿಲ್ಲ. ಅವುಗಳಿಗೆ ತಾಂತ್ರಿಕ ತೊಂದರೆ ಇರುವ ಕುರಿತು ಈಗ ಹೇಳುತ್ತಿದ್ದೀರಿ. ಅನುಮೋದನೆಗೊಂಡು ಕ್ರಿಯಾ ಯೋಜನೆ ರೂಪಿಸುವಾಗ ಕಾಮಗಾರಿ ಪೂರ್ಣಗೊಳಿಸುವ ಸಾಧ್ಯತೆಗಳ ಕುರಿತು ತಿಳಿಯುತ್ತಿದ್ದಂತೆ, ಕಾಮಗಾರಿ ಬದಲಾವಣೆ ಕುರಿತು ಸಂಬಂಧಿಸಿದ ಶಾಸಕರಿಗೆ ವಾಸ್ತವಾಂಶದ ಮಾಹಿತಿ ನೀಡಿ ಬೇರೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಳಸಿಕೊಳ್ಳಿ ಇದಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಅವರು ಹೇಳಿದರು.
ಕೆಲವು ಇಲಾಖೆಗಳ ಕಾಮಗಾರಿಗಳಿಗೆ ಇಲಾಖೆಯ ಶಿಫಾರಸ್ಸಿನಂತೆ ಅನುಷ್ಟಾನ ಏಜೆನ್ಸಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಆದರೂ ಈಗ ಕಾಮಗಾರಿಯ ವಿಳಂಬಕ್ಕೆ ಏಜೆನ್ಸಿಗಳ ಮೇಲೆ ಆರೋಪ ಮಾಡುತ್ತಿದ್ದೀರಿ. ಇದು ಸರಿಯಾದ ಕ್ರಮವಲ್ಲ. ಪರಸ್ಪರ ಸಮನ್ವಯದಿದಂದ ಕಾರ್ಯ ನಿರ್ವಹಿಸಿ. ಸರ್ಕಾರದ ಶಿಸ್ತು ಮತ್ತು ನಿಯಮಗಳಿಗೆ ಯಾರೂ ಹೊರತಾಗಿಲ್ಲ. ಇದೇ ಪ್ರಕ್ರಿಯೆ ಮುಂದುವರೆದರೆ ಸಂಬಂಧಿಸಿದ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೆಚ್ಚುವರಿ ಕೊಠಡಿಗಳ ನಿಮರ್ಾಣ ಕಾಮಗಾರಿಗೆ ಅನುಮೋದನೆ ನೀಡಿ ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ. ಆದರೆ ಲೋಕೋಪಯೋಗಿ ಇಲಾಖೆಯಿಂದ ಡಿಪಿಆರ್ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳುತ್ತಿದ್ದೀರಿ, ಸಣ್ಣ ಪ್ರಮಾಣದ ಕಾಮಗಾರಿಗಳಿಗೆ ಡಿಪಿಆರ್ ನಿಂದ ಅನುಮೋದನೆ ಬೇಕಾಗಿಲ್ಲ. ವಿಶೇಷ ಹಾಗೂ ಬೃಹತ್ ಕಾಮಗಾರಿಗಳಿಗೆ ಮಾತ್ರ ಡಿಪಿಆರ್ ಅನುಮತಿ ಅಗತ್ಯವಿರುತ್ತದೆ. ಅಲ್ಲದೇ ನಿದರ್ಿಷ್ಟ ಕಾಮಗಾರಿಗೆ ಈಗಾಗಲೇ ವರ್ಷಗಳ ಹಿಂದೆಯೇ ಅನುದಾನ ಬಿಡುಗಡೆ ಮಾಡಲಾಗಿದೆ. ಈಗ ಮತ್ತೆ ಮಂಡಳಿಯಿಂದ ಅದೇ ಕಾಮಗಾರಿಗೆ ಹೆಚ್ಚುವರಿ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮಂಡಳಿಯಿಂದ ಅನುಮೋದನೆಗೊಂಡ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳು 2016-17 ನೇ ಸಾಲಿನಿಂದ ವಿಳಂಬವಾಗಿವೆ. ಕೆಲವೆಡೆ ಕಾಮಗಾರಿಗಳು ಈವರೆಗೂ ಆರಂಭವಾಗಿಲ್ಲ. ಆದ್ದರಿಂದ ಮಂಡಳಿಯ ಆದೇಶದಂತೆ 2016-17 ನೇ ಸಾಲಿನ ಕಾಮಗಾರಿಗಳನ್ನು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. 2017-18 ನೇ ಸಾಲಿನ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. 2018-19 ನೇ ಸಾಲಿನ ಕಾಮಗಾರಿಗಳನ್ನು ಸೆಪ್ಟೆಂಬರ್ 30 ರೊಳಗೆ ಹಾಗೂ ಅಕ್ಟೋಬರ್ 15 ರೊಳಗೆ ಕಾರ್ಯಾರಂಭ ಮಾಡಬೇಕು. 2019-20 ನೇ ಸಾಲಿನ ಕಾಮಗಾರಿಗಳಲ್ಲಿ ಟೆಂಡರ್ ಹೊರತಾದ ಕಾಮಗಾರಿಗಳನ್ನು ಸೆಪ್ಟೆಂಬರ್ 30ರೊಳಗೆ ಹಾಗೂ ಟೆಂಡರ್ ಸಹಿತ ಕಾಮಗಾರಿಗಳನ್ನು ಅಕ್ಟೋಬರ್ ಅಂತ್ಯದೊಳಗೆ ಕಡ್ಡಾಯವಾಗಿ ಆರಂಭಿಸಬೇಕು ಎಂದು ಅವರು ಹೇಳಿದರು.
ನಿದರ್ಿಷ್ಟ ಅನುಷ್ಟಾನ ಏಜೆನ್ಸಿಗೆ ಹೆಚ್ಚುವರಿ ಕಾಮಗಾರಿಗಳನ್ನು ಹಂಚಿಕೆ ಮಾಡುವುದರಿಂದ ಹೆಚ್ಚಿನ ಒತ್ತಡದ ಕಾರಣ ಕಾಮಗಾರಿ ಆರಂಭ ವಿಳಂಬಗೊಳ್ಳುತ್ತದೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಜಿಲ್ಲಾಡಳಿತದ ಅನುಮತಿ ಮೇರೆಗೆ ಅನುಷ್ಟಾನ ಏಜೆನ್ಸಿಯನ್ನು ಬದಲಾಯಿಸಲು ಅವಕಾಶವಿದ್ದು, ಅಧಿಕಾರಿಗಳು ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚಚರ್ಿಸಿ ಶೀಘ್ರ ಕಾಮಗಾರಿ ಆರಂಭಿಸಿ. ನಿಮರ್ಿತಿ ಕೇಂದ್ರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕೆಐಆರ್ಡಿಬಿ ಏಜೆನ್ಸಿಗಳು ತಮ್ಮ ಸಾಮಥ್ರ್ಯಕ್ಕೆ ಮೀರಿ ಹೆಚ್ಚಿನ ಕಾಮಗಾರಿಗಳನ್ನು ಪಡೆಯದೆ ಕಾಮಗಾರಿ ಪೂರ್ಣಗೊಳಿಸುವ ಅವಧಿಯನುಸಾರ ಸಾಧ್ಯವಿರುವ ಕಾಮಗಾರಿಗಳನ್ನು ಮಾತ್ರ ವಹಿಸಿಕೊಳ್ಳಬೇಕು. ಹೆಚ್ಚುವರಿ ಕಾಮಗಾರಿಗಳನ್ನು ವಹಿಸಿಕೊಂಡು ಅನವಶ್ಯಕ ವಿಳಂಬ ಮಾಡಕೂಡದು ಎಂದು ಅವರು ಹೇಳಿದರು.
ಕುಷ್ಟಗಿ ತಾಲ್ಲೂಕಿನಲ್ಲಿ 2015-16 ನೇ ಸಾಲಿನಲ್ಲಿ 19 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಮಂಡಳಿ ಅನುಮೋದನೆ ನೀಡಿತ್ತು. ಆದರೆ ಈವರೆಗೆ ಒಂದು ಘಟಕವೂ ಕಾಯರ್ಾರಂಭಗೊಂಡಿಲ್ಲ. ಸೆಪ್ಟೆಂಬರ್ ಅಂತ್ಯದೊಳಗೆ ನಿಗದಿ ಪಡಿಸಿದ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹಾಗೂ ಕಾಯರ್ಾರಂಭಗೊಳ್ಳಬೇಕು. ಅಕ್ಟೋಬರ್ 5 ರೊಳಗೆ 2018-19 ನೇ ಸಾಲಿನ ಬಾಕಿ ಇರುವ ಕಾಮಗಾರಿಗಳು ಪೂರ್ಣಗೊಂಡ ಕುರಿತು ವರದಿಯನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು.
ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ವೈದ್ಯಕೀಯ ಸಲಕರಣೆಗಳ ಖರೀದಿ ಹಾಗೂ ಇತರ ಕಾಮಗಾರಿಗಳಿಗೆ ಮಂಡಳಿಯಿಂದ ಅಂದಾಜು ರೂ. 1 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ವರ್ಷ ಕಳೆದರೂ ವೈದ್ಯಕೀಯ ಸಲಕರಣೆಗಳ ಅನುಷ್ಟಾನ ಹಾಗೂ ಕಾಯರ್ಾರಂಭಗೊಳ್ಳದ ಕುರಿತು ಅಸಮಾಧಾನಗೊಂಡ ಆಯುಕ್ತರು ಸಕರ್ಾರದ ವೇಳಾ ಪಟ್ಟಿಯಂತೆ ನಿಗದಿತ ಸಮಯಕ್ಕೆ ಕಾಮಾಗಾರಿಗಳನ್ನು ಪೂರ್ಣಗೊಳಿಸಿ. ಸಕರ್ಾರಿ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಅವರು ಹೇಳಿದರು.
ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಕೆರೆ ಅಭಿವೃದ್ಧಿ ಯೋಜನೆ ಕಾರ್ಯ ಆರಂಭವಾಗಿದ್ದು, ವೆಚ್ಚದ ಅಂದಾಜು ಸಮಯದಲ್ಲಿ ವಿವಿಧ ರೀತಿಯ ಹೊಸ ಯೋಜನೆಗಳನ್ನು ಅಳವಡಿಸಲು ಪ್ರಯತ್ನಿಸಿ. ವ್ಯವಸ್ಥಿತ ಕ್ರಿಯಾ ಯೋಜನೆ ರೂಪಿಸಿ ಎಂದು ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಿದರು.
ಕೊಪ್ಪಳ ಮತ್ತು ಕುಷ್ಟಗಿಯಲ್ಲಿ ಸಕರ್ಾರಿ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಎಂದು ಹೇಳಿದರು.
ಕಳೆದ ಸಭೆಯಲ್ಲಿ ಎಲ್ಲಾ ಅನುಷ್ಟಾನ ಅಧಿಕಾರಿಗಳಿಗೂ ಹಣ ಬಳಕೆ ಪ್ರಮಾಣ ಪತ್ರ ನೀಡುವಂತೆ ಸೂಚನೆ ನೀಡಲಾಗಿತ್ತು. 2015-16 ಹಾಗೂ 2016-17 ನೇ ಸಾಲಿನ ಹಣ ಬಳಕೆ ಪ್ರಮಾಣ ಪತ್ರ ನೀಡಿದ್ದು, ಬಾಕಿ ಇರುವ 2017-18 ಮತ್ತು 2018-19 ನೇ ಸಾಲಿನ ಹಣ ಬಳಕೆ ಪ್ರಮಾಣ ಪತ್ರವನ್ನು ಸೆಪ್ಟೆಂಬರ್ 30 ರೊಳಗೆ ಸಲ್ಲಿಸಬೇಕು. 2018-19 ನೇ ಸಾಲಿನ ಮೈಕ್ರೋ ಮತ್ತು ಮ್ಯಾಕ್ರೋ ಕಾಮಗಾರಿಗಳ ಕ್ರಿಯಾ ಯೋಜನೆಯ ಘೋಷ್ವಾರೆಯಂತೆ 2019-20 ನೇ ಸಾಲಿನ ಘೋಷ್ವಾರೆಯನ್ನು ಸಿದ್ದಪಡಿಸಲಾಗಿದೆ. ಈ ಘೋಷ್ವಾರೆಯಂತೆ ಕಳೆದ ವರ್ಷ ಉಳಿದ ಅನುದಾನವನ್ನು ಪ್ರಸಕ್ತ ವರ್ಷದ ಕ್ರಿಯಾ ಯೋಜನೆಗೆ ಸೇರ್ಪಡೆಗೊಳಿಸಿ. 2013-14 ರಿಂದ 2017-18 ರವರೆಗೆ ಮಂಡಳಿಯಿಂದ ಮಂಜೂರಾದ ಕಾಮಗಾರಿಗಳ ಪ್ರಗತಿ ಹಾಗೂ ಪೂರ್ಣಗೊಂಡ ಮಾಹಿತಿ ಮಂಡಳಿಯಲ್ಲಿ ಲಭ್ಯವಿದೆ. ಅದರಂತೆ ಮಂಡಳಿಯ ವೆಬ್ಸೈಟ್ನಲ್ಲಿ ಈ ಹಿಂದೆ ತಿಳಿಸಲಾದ ನಮೂನೆಯಲ್ಲಿ ಪ್ರತಿ ನಿತ್ಯದ ಪ್ರಗತಿ ವರದಿಯನ್ನು ಸಾಯಂಕಾಲ 4 ಗಂಟೆಯೊಳಗೆ ತಪ್ಪದೇ ಅಪ್ಲೋಡ್ ಮಾಡಿ. ಥಡರ್್ ಪಾಟರ್ಿ ಏಜೆನ್ಸಿಯವರು ಅನುಷ್ಟಾನ ಅಧಿಕಾರಿ ಅಥವಾ ಅನುಷ್ಟಾನ ಏಜೆನ್ಸಿಯವರೊಂದಿಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ನಮಗೆ ತಿಳಿಸಿ ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ್ ಮೂರ್ತಿ, ಉಪ ಕಾರ್ಯದರ್ಶಿ ಎನ್.ಕೆ.ತೊರವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.