ಭಾರತ್ ಬಂದ್ಗೆ ರಾಣೇಬೆನ್ನೂರಲ್ಲಿ ಸಂಪೂರ್ಣ ವಿಫಲ

ಲೋಕದರ್ಶನವರದಿ ರಾಣಿಬೆನ್ನೂರ: ಕೇಂದ್ರ ಸಕರ್ಾರದ ಕಾಮರ್ಿಕರ ವಿರೋಧಿ ನೀತಿ ಖಂಡಿಸಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಭಾರತ್ ಬಂದ್ ರಾಣೇಬೆನ್ನೂರಿನಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಕೆಲ ಸಂಘಟನೆಗಳು ನೆಪ ಮಾತ್ರಕ್ಕೆ ತಹಶೀಲ್ದಾರರಿಗೆ ಮನವಿ ಪತ್ರ ಅಪರ್ಿಸಿದ್ದನ್ನು ಹೊರತು ಪಡಿಸಿದರೆ ಬಂದ್ಗೆ ಬೆಂಬಲ ದೊರೆಯಲಿಲ್ಲ. ಸಾರಿಗೆ ಬಸ್ಗಳು ಸೇರಿದಂತೆ ಆಟೋ ಮತ್ತು ಲಾರಿ, ಖಾಸಗಿ ವಾಹನಗಳು ಮತ್ತಿತರ ವಾಹನಗಳು ಎಂದಿನಂತೆ ಸಂಚರಿಸಿದವು. ಶಾಲಾ-ಕಾಲೇಜುಗಳು ಎಂದಿನಂತೆ ತರಗತಿ ಆರಂಭಿಸಿದವು. ಚಲಚಿತ್ರ ಮಂದಿರಗಳು, ಕೆಲವು ಬ್ಯಾಂಕ್ಗಳು ಬಂದ್ನಿಂದ ದೂರ ಉಳಿದಿದ್ದು ಕಂಡು ಬಂದಿತು. ಜನನಿಬೀಡ ಪ್ರದೇಶಗಳಾದ ಪಿಬಿ ರಸ್ತೆ ಎಂಜಿ ರಸ್ತೆ, ಬಿಎಸ್ ರೋಡ್, ಹಲಗೇರಿ ರಸ್ತೆ, ಮೇಡ್ಲೇರಿ ರಸ್ತೆ, ದೇವರಗುಡ್ಡ ರೋಡ್ ಸೇರಿದಂತೆ ಮತ್ತಿತರ ರಸ್ತೆಗಳಲ್ಲಿ ಎಂದಿನಂತೆ ಇಂದು ಸಹ ಹೆಚ್ಚಾಗಿ ಜನರು ಮತ್ತು ವಾಹನಗಳು ಸಂಚರಿಸಿದ್ದು ಕಂಡು ಬಂದಿತು. ಹೊಟೇಲ್ಗಳು, ಕಿರಾಣಿ ಅಂಗಡಿಗಳು, ಜನರಲ್ ಸ್ಟೋರ್, ಆಸ್ಪತ್ರೆ, ಔಷಧಿ ಅಂಗಡಿಗಳು, ಮದ್ಯದ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಬಸ್ ನಿಲ್ದಾಣದಲ್ಲಿ ಜನ ಜಂಗುಳಿ ಅಧಿಕವಾಗಿತ್ತು. ಒಟ್ಟಾರೆ ಭಾರತ್ ಬಂದ್ಗೆ ರಾಣೇಬೆನ್ನೂರಿನಲ್ಲಿ ಯಾವುದೇ ಪರಿಣಾಮ ಬೀರದಿರುವುದು ಕಂಡು ಬಂದಿತು. ಜಿಲ್ಲೆಯಾದ್ಯಂತ ಗಣತಿ ಕಾರ್ಯ ಸಂಪೂರ್ಣವಾಗಿ ಯಶಸ್ವಿಗೊಳಿಸಿ