ಧಾರವಾಡ 27: ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಧಾರವಾಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಶಿವಕೃಪಾ ಕಲಾ ಸಂಘ-ಹುಬ್ಬಳಿ ಇವರು ಅರ್ಪಿಸುವ ಸಂಪೂರ್ಣ ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನವನ್ನು ಮಾರ್ಚ 2 2025 ರ ರವಿವಾರ ಸಂಜೆ 5-30ಕ್ಕೆ ಕೆ.ಸಿ.ಡಿ.ಆವರಣದ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನಕಾರ್ಯದರ್ಶಿ ಮಾತಾಂರ್ಡಪ್ಪ ಕತ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಿ.ಆರ್ ಯಾವಗಲ, ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಎಸ್ ವ್ಹಿ ಸಂಕನೂರ ಅವರು ಗೌರವ ಉಪಸ್ಥಿತರಿರುವರು. ಉದ್ಘಾಟನೆಯನ್ನು ನವಲಗುಂದ ವಿಧಾನಸಭಾ ಶಾಸಕರಾದ ಎನ್ ಎಚ್. ಕೋನರೆಡ್ಡಿ ಮಾಡುವರು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಎಮ್ ಎಸ್. ಫರಾಸ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್.ಕೆ.ವಂಟಗೋಡಿ, ರೆಡ್ಡಿ ಬ್ಯಾಂಕ್‌ನ ಅಧ್ಯಕ್ಷರಾದ ಕೆ.ಎಲ್.ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರಾದ ಕೆ.ಎಚ್. ಚೆನ್ನೂರು ಐಪಿಎಫ್ ವ್ಯವಸ್ಥಾಪಕ ನಿರ್ದೇಶಕರಾದ ಆರ್ ಎಮ್ ದರಗದ, ಅಖಿಲ್ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್, ರಾಷ್ಟ್ರೀಯ ಅಧ್ಯಕ್ಷರಾದ ಬಸವರಾಜ ಗುರಿಕಾರ, ಕರ್ನಾಟಕ ಥಿಂಕರ್ಸ ಫೋರಂನ ಅಧ್ಯಕ್ಷರಾದ ಪಿ.ಎಚ್.ನೀರಲಕೇರಿ ಆಗಮಿಸುವರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮ ವಿಕಾಶ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶಶೇಖರ ನಾಯಕ, ನಾರಾಯಣ ಎಮ್, ಎಸ್. ಟಿ ಪಾಟೀಲ, ವಿ ಎಲ್ ಪಾಟೀಲ, ಎನ್ .ಬಿ ಅರಳಿಕಟ್ಟಿ, ಎನ್. ಬಿ ಭಜಂತ್ರಿ, ಎಚ್. ಎಚ್ ಕೋನರೆಡಿ,್ಡ ಅಶೋಕ ಕೆ ಗಂಗಲ, ಎಸ್ ಎಸ್ ರೋಣದ, ಎಚ್ ಆರ್ ಸಂಕಪ್ಪನವರ, ಸುಭಾಸ ಸಾಸ್ವಿಹಳ್ಳಿ, ಬಿ.ಎಮ್ ಎಲಿಗಾರ, ಬಿ.ಟಿ ಪಾಟೀಲ, ದೇವರಡ್ಡಿ ಸಾಸ್ವಿಹಳ್ಳಿ, ಬಿ.ಟಿ.ರೆಡ್ಡಿ, ಎಮ್. ಎನ್ ಶಿರಕೊಳ, ಡಾ. ಕಿರಣಕುಮಾರ, ಪಿ.ವಿ ವಾಸನದ, ಜಿ.ಟಿ ದೊಡಮನಿ, ಎಸ್.ಟಿ ಮಂಗನ್ನವರ, ಸಿದ್ದನಗೌಡ ಪಾಟೀಲ ಇವರನ್ನು ಸನ್ಮಾನಿಸಲಾಗುವುದು. ಹಾಗೂ ಆದರ್ಶ ದಂಪತಿಗಳಾದ ಶ್ರೀಮತಿ ಗೀತಾ ಮತ್ತು ಮಲ್ಲಿಕಾರ್ಜುನ ಹೊನಕೇರಿ, ಶ್ರೀಮತಿ ಗೀತಾ ಮತ್ತು ಜಿ.ಬಿ ನ್ಯಾಮಗೌಡರ, ಶ್ರೀಮತಿ ಕವಿತಾ ಮತ್ತು ಶಶಿಕಾಂತ ರಾಠೋಡ, ಶ್ರೀಮತಿ ಶೈಲಾ ಮತ್ತು ವಿ.ಡಿ ಕಾಮರಡ್ಡಿ, ಇವರನ್ನು ಸನ್ಮಾನಿಸಲಾಗುವುದು ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮಾತಾಂರ್ಡಪ್ಪ ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.