ಶಿಗ್ಗಾವಿ 05: ನಮ್ಮ ದಿನನಿತ್ಯದ ಬದುಕು ಶುರುವಾಗುವುದು, ಮುಗಿಯುವುದು ಅಂಕಿಗಳಿಂದಲೇ ಹಾಗಾಗಿ ನಮಗೆ ಗಣಿತ, ಮಾನಸಿಕ ಸಾಮಥ್ರ್ಯ ಕಠಿಣ ಅಲ್ಲ, ನಾವು ಹಾಗೇ ಮಾಡಿಕೊಂಡಿದ್ದೇವೆ ಅಷ್ಟೇ ಎಂದು ಡಾ. ಗುರುರಾಜ್ ಬುಲಬುಲೆ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಕನರ್ಾಟಕ ಸಕರ್ಾರ ಕಾಲೇಜು ಶಿಕ್ಷಣ ಇಲಾಖೆ, ನ್ಯಾಕ್ 'ಬಿ' ಗ್ರೇಡ್ ಹಾಗೂ ಜ್ಞಾನ ಸಂಗಮ ಸಂಯುಕ್ತಾಶ್ರಯದಲ್ಲಿ ನಡೆದ `ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ಮಾನಸಿಕ ಸಾಮಥ್ರ್ಯದ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನುದ್ಧೇಸಿಸಿ ಮಾತನಾಡಿದ ಅವರು, ಕಲಿಕೆ ಎಂಬುದು ನಿರಂತರ ಪಯಣ ಇದ್ದಂತೆ, ಬದುಕೆ ಒಂದು ಸಿಇಟಿ, ಕಳೆಯುವ ದಿನಗಳೇ ಪ್ರಶ್ನೆಗಳು ಹಾಗಾಗಿ ಪ್ರಾಧ್ಯಾಪಕರು ಹೇಳುವುದನ್ನು ಪರಿ ಪಾಲಿಸುವ ಮೂಲಕ ನಿಮ್ಮ ಮುಂದಿನ ಭವ್ಯವಾದ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳುವಂತೆ ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ಜಗತ್ತಿನಲ್ಲಿ ಜಾಣರು ದಡ್ಡರು ಎಂಬ ಬೇದಭಾವವಿಲ್ಲ ಯಾರು ಸಮಯಪ್ರಜ್ಙೆ, ಯೋಜನೆ, ಕಠಿಣ ಪರಿಶ್ರಮ ಮತ್ತು ಕಷ್ಟಗಳನ್ನು ಲೆಕ್ಕಿಸದೇ ತನ್ನ ಗುರಿಯತ್ತ ಸಾಗುತ್ತಾರೊ ಅಂತವರಿಗೆ ಸಾಧನೆ ಕಾಯುತ್ತಾ ಇರುತ್ತದೆ. ಸಾಧನೆ ಎಂಬುದು ಸಾಧಕನ ಸೊತ್ತೇ ವಿನ: ಸೋಮಾರಿಗಳ ಸೊತ್ತಲ್ಲ ಎಂಬುದನ್ನು ವಿದ್ಯಾಥರ್ಿಗಳು ಮೊದಲು ಅರಿಯಬೇಕಿದೆ ಎಂದು ಹೇಳಿದರು.
ಪ್ರೊ ಮಂಜುನಾಥ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲೆ ಯಮನಾ ಕೊಣೇಸರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಡಾ. ಸಂತೋಷಕುಮಾರ ಕಟಕೆ, ಪ್ರೊ ಸುಜಾತಾ ಕಡ್ಲಿ, ಲುಬ್ನಾನಾಜ್, ನಾಜ್ನೀನ, ಶರಣು ಪಾಟೀಲ, ಚನ್ನಬಸನಗೌಡ ದೊಡ್ಡಗೌಡ್ರ, ನಾರಾಯಣ, ಉಮೇಶ ಕರ್ಜಗಿ ಸೇರಿದಂತೆ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಪ್ರೊ ಆನಂದ ಇಂದೂರ ಸ್ವಾಗತಿಸಿದರು. ಪ್ರೊ ನಿಂಗಪ್ಪ ಕಲಕೋಟಿ ವಂದಿಸಿದರು.
ಫೋಟೋ : ತಾಲೂಕಿನ ಬಂಕಾಪುರ ಪಟ್ಟಣದ ಸರಕಾರಿ ಪ್ರಥಮ ದಜರ್ೆ ಮಹಾ ವಿದ್ಯಾಲಯದಲ್ಲಿ ನಡೆದ `ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ಮಾನಸಿಕ ಸಾಮಥ್ರ್ಯದ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಾ. ಗುರುರಾಜ್ ಬುಲಬುಲೆ ಉದ್ಘಾಟಿಸಿದರು.