ಬೆಂಗಳೂರು 07: ವಿಧಾನ ಪರಿಷತ್ ಸಭಾಪತಿ ಆಯ್ಕೆ ವಿಚಾರದಲ್ಲಿ ದೋಸ್ತಿ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಬಿಕ್ಕಟ್ಟು ಮೂಡಿದ್ದು, ಈ ಬಿಕ್ಕಟ್ಟು ಬಗೆಹರಿಸುವ ಚೆಂಡು ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ ತಲುಪಿದೆ.
ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿಯಾಗಿರುವ ಬಸವರಾಜಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡುವಂತೆ ಜೆಡಿಎಸ್ ಪಟ್ಟು ಹಿಡಿದಿದೆ. ಆದರೆ ಕಾಂಗ್ರೆಸ್ ನಾಯಕರು ಸಭಾಪತಿ ಸ್ಥಾನವನ್ನು ತಮಗೆ ಬೇಕೆಂದು ಹಠಹಿಡಿದಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ.
ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಸದಸ್ಯರನ್ನು ಹೊಂದಿದ್ದು, ಕಾಂಗ್ರೆಸ್ಗೆ ಸಭಾಪತಿ ಸ್ಥಾನವನ್ನು ಬಿಟ್ಟು ಕೊಡಿ, ಉಪಸಭಾಪತಿ ಹಾಗೂ ಸಕರ್ಾರಿ ಮುಖ್ಯಸಚೇತಕ ಸ್ಥಾನವನ್ನು ಬೇಕಾದರೆ ನೀವೇ ಇಟ್ಟುಕೊಳ್ಳಿ. ಈ ಹುದ್ದೆಗಳನ್ನು ಜೆಡಿಎಸ್ಗೆ ನೀಡಲು ಸಿದ್ದ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಆದರೆ ಜೆಡಿಎಸ್ ಸಭಾಪತಿ ಸ್ಥಾನವೇ ಬೇಕು ಎಂದು ಹಠ ಹಿಡಿದಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ.
ಸಭಾಪತಿ ಸ್ಥಾನಕ್ಕೆ ದೋಸ್ತಿ ಪಕ್ಷಗಳಲ್ಲಿ ಮೂಡಿರುವ ಬಿಕ್ಕಟ್ಟು ಪರಿಹಾರಕ್ಕೆ ಜೆಡಿಎಸ್ ನಾಯಕರು ನೇರವಾಗಿ ಕಾಂಗ್ರೆಸ್ ಹೈಕಮಾಂಡ್ನ ಬಾಗಿಲನ್ನು ತಟ್ಟಿದ್ದು, ಹೈಕಮಾಂಡ್ ನಾಯಕರ ಜತೆಯೇ ಚಚರ್ಿಸಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಜೆಡಿಎಸ್ ನಡೆಸಿದೆ.
ಸಚಿವ ಸ್ಥಾನ ಸಿಗದೆ ಅಸಮಾಧಾನ ಗೊಂಡಿರುವ ಬಸವರಾಜ ಹೊರಟ್ಟಿಯವರನ್ನು ಸಮಾಧಾನಪಡಿಸಲು ಜೆಡಿಎಸ್ ನಾಯಕರು ಸಭಾಪತಿ ಹುದ್ದೆ ಕೊಡಿಸುವ ತವಕದಲ್ಲಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ಗೆ ಸಭಾಪತಿ ಸ್ಥಾನ ಬಿಟ್ಟುಕೊಡಲು ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ಬಾದಾಮಿ ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ಕಾರಣರಾದ ಮಾಜಿ ಸಚಿವ ಎಸ್.ಆರ್. ಪಾಟೀಲ್ರವರನ್ನು ಸಭಾಪತಿ ಹುದ್ದೆಗೆ ಕೂರಿಸಲು ಶತಪ್ರಯತ್ನ ನಡೆಸಿದ್ದಾರೆ. ಈ ಅಧಿವೇಶನ ಮುಗಿಯುವುದರೊಳಗೆ ನೂತನ ಸಭಾಪತಿ ನೇಮಕವಾಗಲಿದ್ದು, ಜು. 13 ರೊಳಗೆ ನೂತನ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹಾಗಾಗಿಯೇ ಎರಡೂ ಪಕ್ಷಗಳಲ್ಲೂ ಸಭಾಪತಿ ಹುದ್ದೆಗಾಗಿ ಪೈಪೋಟಿಯೇ ನಡೆದಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಟೀಲ್ ಅವರಿಗೆ ಸಭಾಪತಿ ಪಟ್ಟ ಕಟ್ಟಲು ಪಟ್ಟು ಹಿಡಿದಿದ್ದಾರೆ ಇದರಿಂದ ವಿಚಲಿತರಾಗಿರುವ ಜೆಡಿಎಸ್ನ ವರಿಷ್ಠ ನಾಯಕ ದೇವೇಗೌಡರು ಖುದ್ಧು ಅಖಾಡಕ್ಕೆ ಇಳಿದಿದ್ದು, ಬಿಕ್ಕಟ್ಟು ಪರಿಹಾರ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿಯವರೊಂದಿಗೆ ಚಚರ್ಿಸಿ ಜೆಡಿಎಸ್ಗೆ ಸಭಾಪತಿ ಸ್ಥಾನ ಬಿಟ್ಟುಕೊಡುವ ಸಂಬಂಧ ಚಚರ್ೆ ನಡೆಸಿ ಎಂದು ದೆಹಲಿಯಲ್ಲಿರುವ ಜೆಡಿಎಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದಶರ್ಿ ದ್ಯಾನೀಶ್ ಆಲಿಯವರಿಗೆ ಸೂಚನೆ ನೀಡಿದ್ದಾರೆ. ಅದರಂತೆ ದ್ಯಾನೀಶ್ ಆಲಿ ಇನ್ನೆರಡು ದಿನಗಳಲ್ಲಿ ರಾಹುಲ್ಗಾಂಧಿಯವರೊಂದಿಗೆ ಚಚರ್ಿಸುವ ಸಾಧ್ಯತೆ ಇದೆ.
ಏನೇ ಆದರೂ ರಾಜ್ಯ ಕಾಂಗ್ರೆಸ್ ನಾಯಕರು ಮಾತ್ರ ಸಭಾಪತಿ ಸ್ಥಾನವನ್ನು ಕಾಂಗ್ರೆಸ್ಗೆ ದಕ್ಕಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ.