ಹೂವು ಬೆಳೆ ನಷ್ಟ ಅನುಭವಿಸಿದ ಅಧಿಕೃತ ರೈತರಿಗೆ ಪರಿಹಾರ ದೊರಕಿಸಿ: ಜಿಲ್ಲಾಧಿಕಾರಿ

ವಿಜಯಪುರ ಮೇ.13: ಕೋವಿಡ್-19 ಹಿನ್ನೆಲೆಯಲ್ಲಿ ಅಲ್ಪಾವಧಿಯ ಚೆಂಡು ಹೂವು, ಸೇವಂತಿಗೆ, ಆಸ್ಟರ್ ಇತ್ಯಾದಿ ಹಾಗೂ ಬಹುವಾಷರ್ಿಕ ಕನಕಾಂಬರ, ಗುಲಾಬಿ, ಮಲ್ಲಿಗೆ, ಕಾಕಡ, ಬಡರ್್ ಆಫ್ ಪ್ಯಾರಡೈಸ್ ಇತ್ಯಾದಿ ಹೂವು ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ರಾಜ್ಯ ಸಕರ್ಾರವು ಪ್ರತಿ ಹೆಕ್ಟೇರ್ಗೆ 25 ಸಾವಿರ ರೂ.ಗಳಂತೆ ಪರಿಹಾರವನ್ನು ಘೋಷಿಸಿದ್ದು, ಅದರನ್ವಯ ಅರ್ಹ ಫಲಾನುಭವಿಗಳಿಗೆ ಈ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

        ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಲಾಕ್ಡೌನ್ ಜಾರಿ ಮತ್ತು ಕೋವಿಡ್-19 ಕಾರಣದಿಂದಾಗಿ ಹೂವಿನ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ ಹಿನ್ನೆಲೆ ಪರಿಹಾರ ನೀಡುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಕೋವಿಡ್-19 ಮತ್ತು ಲಾಕ್ಡೌನ್ದಿಂದ ಹೂವಿನ ಬೆಳೆಗಾರರು ಅನುಭವಿಸಿದ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ ಸಕರ್ಾರವು ಪ್ರತಿ ಹೆಕ್ಟೇರ್ಗೆ ಗರಿಷ್ಠ 25 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದು, ಅರ್ಹ ರೈತ ಫಲಾನುಭವಿಗಳಿಗೆ ಈ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲು ಅವರು ಸೂಚನೆ ನೀಡಿದ್ದಾರೆ.

  ಹೂವು ಬೆಳೆಗಾರರ ಹೂವು ಬೆಳೆ ನಷ್ಟದ ಕುರಿತಂತೆ ಬೆಳೆ ಸವರ್ೇ ಪ್ರಕಾರ ಜಿಲ್ಲೆಯ ಸುಮಾರು 249 ಹೂವು ಬೆಳೆಗಾರರು ತೀವ್ರ ನಷ್ಟವನ್ನು ಅನುಭವಿಸಿದ್ದು ಇಂತಹ ಬೆಳೆಗಾರರಿಗೆ ಸಂಬಂಧಪಟ್ಟಂತೆ ರೈತರ ಪಟ್ಟಿಯನ್ನು ಆಯಾ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯತ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಪ್ರಕಟಿತ ಈ ಪಟ್ಟಿಯಿಂದ ನಷ್ಟಕ್ಕೆ ಒಳಗಾದ ಹೂವು ಬೆಳೆಗಾರರು ಕೈಬಿಟ್ಟು ಹೋಗಿದ್ದಲ್ಲಿ ಅಂತಹವರು ಆಯಾ ತಾಲೂಕಾ ತೋಟಗಾರಿಕಾ ಕಚೇರಿಗೆ ಮಾಹಿತಿ ನೀಡಬಹುದಾಗಿದ್ದು, ಅಧಿಕಾರಿಗಳು ಕೂಡ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಲಾಕ್ಡೌನ್ ಜಾರಿಗೊಳಿಸಿದ ಮುಂಚಿತವಾಗಿ ಕಳೆದ ಮಾರ್ಚ 13 ರಿಂದ ಜಿಲ್ಲೆಯಾದ್ಯಂತ ಲಾಕ್ಡೌನ್ನ್ನು ಕೊರೋನಾ ಭಯದ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿತ್ತು. ಕಾರಣ ಮಾರ್ಚ 13 ರಿಂದ ಮೇ 8 ಅಥವಾ 17 ರ ಅವಧಿಯನ್ನು ಪರಿಗಣಿಸಿ ನಷ್ಟ ಅನುಭವಿಸಿದ ರೈತರಿಗೆ ಬೆಳೆ ಪರಿಹಾರ ನಷ್ಟ ದೊರೆಯುವಂತೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಹೋಬಳಿ ಮಟ್ಟ, ತಾಲೂಕಾ ಮಟ್ಟ, ಜಿಲ್ಲಾ ಮಟ್ಟದ ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಕುಂದುಕೊರತೆಗಳ ಬಗ್ಗೆ ಅಜರ್ಿಗಳ ಬಗ್ಗೆ ವಿಲೇವಾರಿ, ಸೂಕ್ತ ಜಾಗೃತಿ, ಅಧಿಕೃತ ಬೆಳೆ ಸಮೀಕ್ಷೆ ಆಧಾರದ ಮೇಲೆ ಪಟ್ಟಿ ತಯಾರಿಕೆ, ರೈತರ ಜಮೀನು ಮತ್ತು ಅವರ ದಾಖಲೆಗಳ ಸಮಗ್ರ ಪರಿಶೀಲನೆ ಸೇರಿದಂತೆ ಇನ್ನಿತರ ಅವಶ್ಯಕ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೂಲಕ ಕೈಗೊಳ್ಳುವಂತೆ ಅವರು ಕಟ್ಟುನಿಟ್ಟಾಗಿ ಸೂಚನೆ ನೀಡಿದರು. ಸಭೆಯಲ್ಲಿ ಜಿ.ಪಂ ಸಿಇಒ ಗೋವಿಂದ ರೆಡ್ಡಿ, ತೋಟಗಾರಿಕೆ ಇಲಾಖೆ ಉಪನಿದರ್ೇಶಕ ಶ್ರೀ ಸಂತೋಷ ಕುಮಾರ್ ಉಪಸ್ಥಿತರಿದ್ದರು