ಬಾಗಲಕೋಟೆ೨೩: ಜಿಲ್ಲೆಯಲ್ಲಿರುವ ಟ್ರಾನ್ಸ್ಜೆಂಡರ್ಸ್ಗಳ ಶ್ರೇಯೋಭಿವೃದ್ದಿಗಾಗಿ, ಸಮಾಜದಲ್ಲಿ ಗೌರಯುತವಾದ ಅಸ್ತತ್ವ ಹಾಗೂ ಜನಸಮುದಾಯದಲ್ಲಿ ಒಗ್ಗೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ದಮನಿತ ಮಹಿಳೆಯರ ಮತ್ತು ಟ್ರಾನ್ಸ್ಜೆಂಡರ್ಸ್ಗಳ ಜೀವನ ಮಟ್ಟ ಸುಧಾರಣೆ, ಸಬಲೀಕರಣ ಮತ್ತು ಪುನರ್ವಸತಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದ ಸಮಿತಿ ರಚಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಟ್ರಾನ್ಸ್ಜೆಂಡರ್ಸ್ಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಸಮಿತಿಯನ್ನು ರಚಿಸಲಾಗಿದ್ದು, ಟ್ರಾನ್ಸ್ಜೆಂಡರ್ಸ್ಗಳಿಗೆ ಗುರುತಿನ ಚೀಟಿ, ಎಸ್ಎಚ್ಜಿ ಗುಂಪು ರಚನೆ, ಸ್ಯಾನಿಟರಿ ನ್ಯಾಪಕಿನ್ಸ್ ಯುನಿಟ್, ಎಚ್.ಐ.ವಿ ಪೀಡಿತರಿಗೆ ಸರಿಯಾದ ಚಿಕಿತ್ಸೆ ನೀಡುವ ಕುರಿತು ಸಭೆಯಲ್ಲಿ ಚಚರ್ಿಸಿದರು.
ಜಿಲ್ಲೆಯಲ್ಲಿ 884 ಟ್ರಾನ್ಸ್ಜೆಂಡರ್ಸ್ಗಳಿದ್ದು, ಅವರಿಗೆ ಮೊದಲು ಗುರುತಿನ ಚೀಟಿ ನೀಡಲು ಅಗತ್ಯ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ತಾಲೂಕಾ ಹಂತದಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ ಅರ್ಹ ಟ್ರಾನ್ಸ್ಜೆಂಡರ್ಸ್ಗಳಿಂದ ಅರ್ಜಿ ಸ್ವೀಕಾರ, ದಾಖಲಾತಿ ಪರಿಶೀಲನೆಗಳೊಂದಿಗೆ ಮಿಲನ ಸಂಸ್ಥೆಯಿಂದಿಗೆ ಸಭೆ ನಡೆಸಿ ಜಿಲ್ಲಾ ಮಟ್ಟದಲ್ಲಿ ಅನುಮೋದನೆ ಪಡೆದು ಗುರುತಿನ ಚೀಟಿ ನೀಡಲು ಕ್ರಮಕೈಗೊಳ್ಳಬೇಕು. ತೃತೀಯ ಲಿಂಗಗಳನ್ನು ಗೌರವದಿಂದ ಕಾಣುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಟ್ರಾನ್ಸ್ಜೆಂಡರ್ಸ್ಗಳ ಬಗ್ಗೆ ಶಾಲೆಗಳ ಮತ್ತು ಮಕ್ಕಳ ಹಕ್ಕುಗಳ ಸಂಸ್ಥೆಗಳ ಮತ್ತು ನೆಟ್ವರ್ಕಗಳ ಸಹಭಾಗಿತ್ವದಲ್ಲಿ ಶಿಕ್ಷಕರಿಗೆ ಹಾಗೂ ಕುಟುಂಬದವರಿಗೆ ಅರಿವು ಮೂಡಿಸುವ ಕೆಲಸವಾಗಬೇಕು.
ಟ್ರಾನ್ಸ್ಜೆಂಡರ್ಸ್ಗಳ ಮಕ್ಕಳಿಗೆ ಸಕರ್ಾರದ ವಿವಿಧ ವಸತಿ ನಿಲಯಗಳಡಿ ಉಚಿತ ಪ್ರವೇಶ ಒದಗಿಸಬೇಕು. ಟ್ರಾನ್ಸ್ಜೆಂಡರ್ಸ್ಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಮಟ್ಟದ ವಿವಿಧ ಇಲಾಖಾ ಸೌಲಭ್ಯಗಳನ್ನು ಟ್ರಾನ್ಸ್ಜೆಂಡರ್ಸ್ಗಳಿಗೆ ಒದಗಿಸಲು ನಿಟ್ಟಿನಲ್ಲಿ ಸೌಲಭ್ಯ ನೀಡಲು ಬೆಂಬಲ ಘಟಕದಿಂದ ಪ್ರತ್ಯೇಕ ಕ್ರೀಯಾ ಯೋಜನೆಯನ್ನು ಸಿದ್ದಪಡಿಸಿ ರಾಜ್ಯದ ಮಟ್ಟದ ಕೋಶಕ್ಕೆ ತಕ್ಷಣವೇ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಇಲಾಖೆಗಳು ಒದಗಿಸಿದ ಸೌಲಭ್ಯಗಳ ಬಗ್ಗೆ ಪ್ರತಿ ಮೂರು ತಿಂಗಳಿಗೊಮ್ಮೆ ಪರಾಮಶರ್ಿಸುವ ಕೆಲಸವಾಗಬೇಕೆಂದು ತಿಳಿಸಿದರು.
ಟ್ರಾನ್ಸ್ಜೆಂಡರ್ಸ್ಗಳ ಮಕ್ಕಳಿಗೆ ಸುರಕ್ಷಿತ ನಿವಾಸವನ್ನು ಅಲ್ಪಾವಧಿ ವಸತಿ ಗೃಹಗಳ, ಅನಾಥಾಶ್ರಮಮಗಳ, ದತ್ತು ಮತ್ತು ಪೋಷಣಾ ಸೇವೆಗಳ ಸೌಕರ್ಯಗಳನ್ನು ಒದಗಿಸಬೇಕು. ವಯಸ್ಸಾದವರಿಗೆ ವೃದ್ದಾಶ್ರಮಗಳ ವ್ಯವಸ್ಥೆ ಮತ್ತು ಪಿಂಚಣಿಯನ್ನು ಒದಗಿಸಿಕೊಡುವ ಬಗ್ಗೆ ಕ್ರಮವಹಿಸಬೇಕು.
ಟ್ರಾನ್ಸ್ಜೆಂಡರ್ಸ್ಗಳ ನೀತಿಯ ಬಗ್ಗೆ ಮೂಲ ಮಾಹಿತಿಯನ್ನು ರೇಡಿಯೋ, ಟಿವಿ ಮೂಲಕ ಬಿತ್ತರಿಸಿ ಅವರನ್ನು ಮುಖ್ಯವಾಹಿನಿಯಲ್ಲಿ ವಿಲೀನಗೊಳಿಸುವ ಬಗ್ಗೆ ಧನಾತ್ಮಕ ಚಿಂತನೆ ಮೂಡಿಸಬೇಕು. ವಿದ್ಯಾಥರ್ಿ ವೇತನ, ಆರೋಗ್ಯ ಸೇವೆ, ಸಾಮಾಜಿಕ ಭದ್ರತೆ ಒದಗಿಸಲು ಸೂಕ್ತ ಕ್ರಮವಹಿಸಬೇಕು ಎಂದರು.
ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಮಾತನಾಡಿ ತಂದೆ-ತಾಯಿ, ಅಣ್ಣ-ತಮ್ಮ ಅಕ್ಕ-ತಂಗಿ ಸಹಕಾರ ದೊರೆಯದೇ ಮನೆಬಿಟ್ಟು ಹೋದ ಅನೇಕ ಪ್ರಕರಣಗಳು ಕಂಡುಬಂದಿವೆ ಎಂದು ತಿಳಿಸಲಾಯಿತು.
ಬೇರೆ ಬೇರೆ ಇಲಾಖೆಗಳಡಿ ಬಾಹ್ಯ ಗುತ್ತಿಗೆಯಲ್ಲು ಗ್ರುಫ್ ಡಿ ಹುದ್ದೆಗಳಲ್ಲಿ ಆಯ್ಕೆಗೊಳಿಸಲು ಕ್ರಮಕೈಗೊಳ್ಳಲು ತಿಳಿಸಿದರು. ಬಾಲಕರ ಬಾಲಭವನದಲ್ಲಿ ಕಚೇರಿ ಸ್ಥಾಪಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪಂವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಬಿ.ಎಚ್.ಗೋನಾಳ, ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಗಂಗಾಧರ ದಿವಟರ, ನಗರಾಬಿವೃದ್ದಿ ಕೋಶದ ಯೋಜನಾ ನಿದರ್ೇಶಕ ವಿಜಯ ಮೆಕ್ಕಳಕಿ, ಕಾರ್ಯಕ್ರಮ ಅಧಿಕಾರಿ ದ್ರಾಕ್ಷಾಯಿಣಿ ಪಾಟೀಲ, ದೇವದಾಸಿ ಪುನರ್ವಸತಿಯ ಜಿಲ್ಲಾ ವ್ಯವಸ್ಥಾಪಕ ಕೆ.ಕೆ.ದೇಸಾಯಿ ಸೇರಿದಂತೆ ನಾಮನಿದರ್ೇಶಿತ ಸದಸ್ಯರು ಉಪಸ್ಥಿತರಿದ್ದರು.