ಬೆಂಗಳೂರು, ಫೆ
02 - ಜನರ ಕಲ್ಯಾಣಕ್ಕಾಗಿ ಸ್ಥಳೀಯ ಆಡಳಿತ ಅವಿರತ ಶ್ರಮಿಸುತ್ತಿದ್ದು ಕೆಲವೇ ದಿನಗಳಲ್ಲಿ
ಮಹತ್ತರ ಬದಲಾವಣೆ ಗೋಚರಿಸಲಿದೆ ಎಂದು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್
ಗಿರೀಶ್ ಚಂದ್ರ ಮುರ್ಮು ಹೇಳಿದ್ದಾರೆ. ಜಮ್ಮುವಿನಲ್ಲಿ ಉದ್ಯಮಶೀಲತೆ ಮತ್ತು ರೇಷ್ಮೆ ಕೃಷಿ ಪ್ರೋತ್ಸಾಹಕ್ಕೆ
ಹೊಸದಾಗಿ ನಿರ್ಮಿಸಲಾದ ಸೌಲಭ್ಯ ಘಟಕ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರ ಮಾತ್ರವೇ ಏಕಾಂಗಿಯಾಗಿ
ಆರ್ಥಿಕತೆಯನ್ನು ತಹಬಂದಿಗೆ ತರಲು ಸಾಧ್ಯವಿಲ್ಲ, ಉದ್ಯಮಗಳು ಆರ್ಥಿಕತೆಯ ಚಾಲಕ ಶಕ್ತಿಯಾಗಿದ್ದು ಯುವಶಕ್ತಿಯ
ಸಾಮರ್ಥ್ಯವನ್ನು ಪೂರ್ಣವಾಗಿ ಬಳಕೆ ಮಾಡಿಕೊಂಡರೆ ಐದು ಲಕ್ಷ ಕೋಟಿ ಆರ್ಥಿಕತೆಯ ಗುರಿ ಸಾಕಾರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಮ್ಮು ಕಾಶ್ಮೀರದ ಸಾಮಾಜಿಕ ಆರ್ಥಿಕ ವಲಯದ ಬಲವರ್ಧನೆಗೆ ತಮ್ಮ ಸರ್ಕಾರ ಬದ್ಧವಾಗಿದ್ದು ಜನರ ಕಲ್ಯಾಣಕ್ಕಾಗಿ ಸತತವಾಗಿ ಶ್ರಮಿಸುತ್ತಿದೆ. ಕೆಲವೇ ತಿಂಗಳುಗಳಲ್ಲಿ ಬದಲಾವಣೆ ಗೋಚರಿಸಲಿದೆ ಎಂದು ಅವರು ಹೇಳಿದ್ದಾರೆ.