ಚೂರಿಯನ್, ಡಿ 28 ಪ್ಯಾಟ್
ಕಮಿನ್ಸ್ (28 ಕ್ಕೆ 5) ಅವರ ಮಾರಕ ದಾಳಿಗೆ ನಲುಗಿದ ನ್ಯೂಜಿಲೆಂಡ್ ತಂಡ ಎರಡನೇ ಹಾಗೂ ಬಾಕ್ಸಿಂಗ್
ಡೇ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರಿ ಹಿನ್ನಡೆ ಅನುಭವಿಸಿದೆ. ಇಲ್ಲಿನ, ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡು
ವಿಕೆಟ್ ಕಳೆದುಕೊಂಡು 44 ರನ್ ಗಳಿಂದ ಪ್ರಥಮ ಇನಿಂಗ್ಸ್ ಶುರು ಮಾಡಿದ ನ್ಯೂಜಿಲೆಂಡ್ ತಂಡ ಆಸೀಸ್ ಮಾರಕ
ದಾಳಿಗೆ ಸಿಲುಕಿ 54.5 ಓವರ್ ಗಳಿಗೆ 148 ರನ್ ಗಳಿಗೆ ಕುಸಿಯಿತು. ಆ ಮೂಲಕ ಪ್ರಥಮ ಇನಿಂಗ್ಸ್ ನಲ್ಲಿ
319 ರನ್ ಹಿನ್ನಡೆ ಅನುಭವಿಸಿತು. ಇಂದು ಬೆಳಗ್ಗೆ
ಕ್ರೀಸ್ ಗೆ ಇಳಿದ ಟಾಮ್ ಲಥಾಮ್ ಹಾಗೂ ರಾಸ್ ಟೇಲರ್ ಜೋಡಿಯನ್ನು ಪ್ಯಾಟ್ ಕಮಿನ್ಸ್ ಬಹುಬೇಗ ಬೇರ್ಪಡಿಸಿದರು. ರಾಸ್ ಟೇಲರ್ (4), ಹೆನ್ರಿ ನಿಕೋಲ್ಸ್
(0) ಅವರನ್ನು ಕಮಿನ್ಸ್ ಪೆವಿಲಿಯನ್ ಗೆ ಅಟ್ಟಿದರು. ಬಿ.ಜೆ. ವ್ಯಾಟ್ಲಿಂಗ್ (7) ಕೂಡ ನಿರಾಸೆ ಮೂಡಿಸಿದರು.
ಶನಿವಾರ ಬೆಳಗ್ಗೆ ಚೆಂಡು ಹೆಚ್ಚು ಸ್ವಿಂಗ್ ಹೊಂದಿದ್ದರಿಂದ ಕಿವೀಸ್ ಬ್ಯಾಟ್ಸ್ ಮನ್ ಗಳು ಆಸೀಸ್
ವೇಗಿಗಳನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದರು.
ಮಾರಕ ದಾಲಿ ನಡೆಸಿದ ಪ್ಯಾಟ್ ಕಮಿನ್ಸ್ 28 ರನ್ ನೀಡಿ ಐದು ವಿಕೆಟ್ ಗೊಂಚಲು ಪಡೆದರು. ಇವರಿಗೆ
ಸಾಥ್ ನೀಡಿದ ಜೇಮ್ಸ್ ಪ್ಯಾಟಿನ್ಸನ್ 34 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಕೊನೆಯ ಹಂತದಲ್ಲಿ
ನೀಲ್ ವ್ಯಾಗ್ನರ್ 18 ರನ್ ಗಳಿಸಿ ಅಜೇಯರಾಗಿ ಉಳಿದರು.
ಆರಂಭಿಕನಾಗಿ ಕಣಕ್ಕೆ ಇಳಿದಿದ್ದ ಟಾಮ್ ಲಥಾಮ್ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂದು ಬ್ಯಾಟಿಂಗ್
ಮಾಡಿದರು. ಆಸೀಸ್ ವೇಗಿಗಳನ್ನು ಕೆಲಕಾಲ ಸಮರ್ಥವಾಗಿ ಎದುರಿಸಿದರು. 144 ಎಸೆತಗಳನ್ನು ಎದುರಿಸಿದ ಅವರು
ನಾಲ್ಕು ಬೌಂಡರಿಯೊಂದಿಗೆ 50 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ
ಎನಿಸಿಕೊಂಡರು. ಟ್ರಾವಿಸ್ ಹೆಡ್ (114 ರನ್), ಟಿಮ್
ಪೈನ್ (79 ರನ್), ಸ್ಟೀವನ್ ಸ್ಮಿತ್ (85 ರನ್) ಅವರ ಅಮೋಘ ಬ್ಯಾಟಿಂಗ್ ನಿಂದ ಆಸ್ಟ್ರೇಲಿಯಾ ತಂಡ ಪ್ರಥಮ
ಇನಿಂಗ್ಸ್ ನಲ್ಲಿ 467 ರನ್ ಗಳಿಸಿತ್ತು. ಇದೀಗ,
319 ರನ್ ಮುನ್ನಡೆ ಗಳಿಸಿರುವ ಆಸ್ಟ್ರೇಲಿಯಾ ಪಂದ್ಯದ ಸಂಪೂರ್ಣ ಹಿಡಿತ ಸಾಧಿಸಿದೆ. ಸಂಕ್ಷಿಪ್ತ ಸ್ಕೋರ್ ಆಸ್ಟ್ರೇಲಿಯಾ
ಪ್ರಥಮ ಇನಿಂಗ್ಸ್: 467 ನ್ಯೂಜಿಲೆಂಡ್
ಪ್ರಥಮ ಇನಿಂಗ್ಸ್: 54.5 ಓವರ್ ಗಳಿಗೆ 148/10 (ಟಾಮ್ ಲಥಾಮ್ 50, ನೀಲ್ ವ್ಯಾಗ್ನರ್ ಔಟಾಗದೆ
18; ಪ್ಯಾಟ್ ಕಮಿನ್ಸ್ 28 ಕ್ಕೆ 5, ಜೇಮ್ಸ್ ಪ್ಯಾಟಿನ್ಸನ್ 34 ಕ್ಕೆ 3, ಮಿಚೆಲ್ ಸ್ಟಾರ್ಕ್ 30 ಕ್ಕೆ
2)