- ಅಡಿವೇಶ ಮುಧೋಳ
ಬೆಟಗೇರಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಇದೇ ಡಿ.27 ರಿಂದ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಪ್ರಾರಂಭದ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಲು ಆರಂಭದ ದಿನ (ಡಿ.28) ಇನ್ನೂ ನಾಲ್ಕು ದಿನ ಬಾಕಿ ಇರುವಾಗಲೇ ತೆರೆಮರೆಯಲ್ಲಿ ತುರುಸಿನ ಚುನಾವಣೆಯ ಅಖಾಡ ಸಜ್ಜಾಗುತ್ತಿದೆ.
ಸನ್ 1917 ಜೂನ್ 5 ರಂದು ಗ್ರಾಮ ಸೇವಾ ಸಹಕಾರಿ ಸಂಘ ಅಂತಾ ಸ್ಥಾಪನೆಗೊಂಡು, ವ್ಯವಸಾಯ ಸೇವಾ ಸಹಕಾರಿ ಸಂಘ ಹೀಗೆ ಕೆಲವು ನಾಮಾಂಕಿತಗಳಿಂದ ಬದಲಾವಣೆ ಹೊಂದುತ್ತಾ ಈಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಾಮಾಂಕಿತದಿಂದ ಶತಮಾನ ಪೂರೈಸಿದ ಈ ಸಂಘ ತನ್ನ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಕೇವಲ ಮೂರು ಸಲ 1985, 1999, 2014 ರಲ್ಲಿ ಮಾತ್ರ ತುರುಸಿನ ಚುನಾವಣೆ ನಡೆದಿದೆ. ಇನ್ನೂಳಿದ ಪ್ರತಿ 5 ವರ್ಷದ ಅವಧಿಗೆ ಆಡಳಿತ ಮಂಡಳಿ ಸದಸ್ಯರು ಅವಿರೋಧ ಆಯ್ಕೆ ಮೂಲಕ ಆಯ್ಕೆಗೊಂಡಿದ್ದು ಇತಿಹಾಸವೇ ಸರಿ!
ಆಡಳಿತ ಮಂಡಳಿ ಸದಸ್ಯರ ಒಟ್ಟು 12 ಸ್ಥಾನಗಳು: ಗ್ರಾಮದ ಪಿಕೆಪಿಎಸ್ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಸಾಮಾನ್ಯ ಸಾಲಗಾರರ ಮತದಾರ ಮತಕ್ಷೇತ್ರದಿಂದ 5, ಮಹಿಳಾ ಸಾಲಗಾರರ ಮತಕ್ಷೇತ್ರದಿಂದ 2, ಹಿಂದುಳಿದ ಅ ವರ್ಗ ಸಾಲಗಾರರ ಮತಕ್ಷೇತ್ರದಿಂದ 2, ಪರಿಶಿಷ್ಟ ಪಂಗಡ ಸಾಲಗಾರರ ಕಾಯ್ದಿಟ್ಟ ಮತಕ್ಷೇತ್ರದಿಂದ 1, ಪರಿಶಿಷ್ಟ ಜಾತಿ ಸಾಲಗಾರರ ಕಾಯ್ದಿಟ್ಟ ಮತಕ್ಷೇತ್ರದಿಂದ 1, ಬಿನ್ ಸಾಲಗಾರರ ಮತಕ್ಷೇತ್ರದಿಂದ 1, ಹೀಗೆ ಒಟ್ಟು 12 ಸ್ಥಾನಗಳಿಗಾಗಿ ಚುನಾವಣೆ ಜರುಗಲಿದೆ. ಸಂಘದ ಕಾಯರ್ಾಲಯದ ನೋಟಿಸ್ ಫಲಕದ ಮೇಲೆ ಚುನಾವಣೆಯಲ್ಲಿ ಸ್ಪಧರ್ಿಸುವ ಅಭ್ಯಥರ್ಿಗಳಿಗೆ ಹಲವಾರು ಸೂಚನೆ, ನಿಯಮ ಹಾಗೂ ಚುನಾವಣೆ ಮಾಹಿತಿಯನ್ನು ಅಂಟಿಸಲಾಗಿದೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಸುತ್ತಿರುವ ಸಹಕಾರ ಇಲಾಖೆಯ ಎಸ್.ಬಿ.ಬಿರಾದಾರ ಪಾಟೀಲ, ಸಂಘದ ಮುಖ್ಯ ಕಾರ್ಯನಿವರ್ಾಹಕ ಅಡಿವೆಪ್ಪ ಮುರಗೋಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಸಲ ಅವಿರೂಧ ಆಯ್ಕೆ ನಡೆಯುವುದೇ?: ಗ್ರಾಮದ ಪಿಕೆಪಿಎಸ್ ಸಂಘದ 5 ವರ್ಷದ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಚುನಾವಣೆ ಘೋಷಣೆಯಾದ ಪ್ರಯುಕ್ತ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿತ ಸ್ಥಳೀಯ ಎರಡು ರಾಜಕೀಯ ಗುಂಪುಗಳ ಮಧ್ಯ ತೀವ್ರ ಪೈಪೊಟಿ ಏರ್ಪಡುವ ಚುನಾವಣೆಯ ಅಖಾಡ ಸಜ್ಜಾಗುತ್ತಿದೆ. ಇನ್ನೂಂದಡೆ ಯುವಕರ ಗುಂಪೂಂದೂ ಈ ಸಲ ಚುನಾವಣಾ ಸ್ಪಧರ್ೆಗಿಳಿಯಲು ತೆರೆಮರೆಯಲ್ಲಿ ತವಕಿಸುತ್ತಿದೆ. ಹೀಗಾಗಿ ಈ ಭಾರಿ ಆಡಳಿತ ಮಂಡಳಿ ಸದಸ್ಯರು ಅವಿರೂಧವಾಗಿ ಆಯ್ಕೆಗೊಳ್ಳುತ್ತಾರೆ? ಇಲ್ಲವೇ ಚುನಾವಣಾಕಣಕ್ಕಿಳಿದು ಅಭ್ಯಥರ್ಿಗಳು ಆಯ್ಕೆಗೊಳ್ಳುತ್ತಾರೆಯೇ! ಅಂಬುವದು ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ.
ಪ್ರಬಲ ಅಭ್ಯಥರ್ಿ ಸೆಳೆಯಲು ಕಸರತ್ತು: ಇಲ್ಲಿಯ ಪ್ರಬಲ ಅಭ್ಯಥರ್ಿ, ಯುವಕರನ್ನು ತಮ್ಮ ಗುಂಪುಗಳತ್ತ ಸೆಳೆಯಲು ತೆರೆಮರೆಯಲ್ಲಿ ಸ್ಥಳೀಯ ಎರಡು ರಾಜಕೀಯ ಗುಂಪುಗಳ ಮುಖಂಡರು ಭಾರಿ ಕಸರತ್ತು ಒಂದಡೆ ನಡೆದಿದ್ದರೆ, ಇನ್ನೂಂದಡೆ ಯುವಕರ ಗುಂಪಿನ ಸ್ಥಳೀಯ ಹಲವಾರು ಯುವ ಅಭ್ಯಥರ್ಿಗಳು ಚುನಾವಣಾ ಅಖಾಡಕ್ಕಿಳಿಯಲು ತುದಿಗಾಲಲ್ಲಿ ನಿಂತಿರುವ ಲಕ್ಷಣಗಳು ಗೊಚರಿಸುತ್ತಿವೆ. ಹೀಗಾಗಿ ಈ ಭಾರಿ ಪಕ್ಕಾ ಅವಿರೂಧ ಆಯ್ಕೆ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ, ತುರುಸಿನ ತ್ರಿಕೋನ ಸ್ಪಧರ್ೆಯ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಸ್ಥಳೀಯರಿಂದ ಕೇಳಿಬರುತ್ತಿವೆ.
ಶತಮಾನ ಪೂರೈಸಿದ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಮಗ್ರ ಅಭಿವೃದ್ಧಿ ಹಿತದೃಷ್ಠಿಯಿಂದ ಇಲ್ಲಿಯ ರಾಜಕೀಯ ಮುಖಂಡರು, ಯುವಕರು ಎಲ್ಲ ಸಮುದಾಯದ ಹಿರಿಯ ನಾಗರಿಕರ ಜೋತೆ ಚುನಾವಣೆ ಸಾಧಕ-ಭಾದಕಗಳ ಕುರಿತು ಚಚರ್ಿಸಿ ಎಲ್ಲರ ಒಮ್ಮತದಂತೆ ಈ ಸಲ ಸಂಘದ ಆಡಳಿತ ಮಂಡಳಿ ಸದಸ್ಯರ ಮತ್ತು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಸಹ ಅವಿರೂಧವಾಗಿ ಮಾಡಬೇಕೆಂಬುವುದು ಸ್ಥಳೀಯ ಪ್ರಜ್ಞಾವಂತ ನಾಗರಿಕರ ಅನಿಸಿಕೆಯಾಗಿದೆ. ಸಂಘದ ಆಡಳಿತ ಮಂಡಳಿ ಸದಸ್ಯರು ಈ ಸಲ ಅವಿರೂಧವಾಗಿ ಆಯ್ಕೆಗೊಳ್ಳುತ್ತಾರೇ? ಇಲ್ಲವೇ ಚುನಾವಣೆ ಸ್ಪಧರ್ೆಗಿಳಿದು ಆಯ್ಕೆಗೊಳ್ಳುತ್ತಾರೂ ಅಂಬುದನ್ನು ಕಾದುನೋಡಬೇಕಷ್ಟೇ.!!