ಅಗಷ್ಟ 3 ರವಿವಾರದಂದು ಸಾವಿರ ತತ್ವಪದಗಳ ಸಂತ ಯಮನೂರೇಶ ಶರಣರ ಪುಣ್ಯಸ್ಮರಣೆ
Commemoration of the saint of a thousand principles, Yamanuresha Sharan, on Sunday, August 3
ಅಗಷ್ಟ 3 ರವಿವಾರದಂದು ಸಾವಿರ ತತ್ವಪದಗಳ ಸಂತ ಯಮನೂರೇಶ ಶರಣರ ಪುಣ್ಯಸ್ಮರಣೆ
ತಾಳಿಕೋಟಿ 02: ನಾಡಿನಲ್ಲಿ ಎಲೆಮರೆ ಕಾಯಿಯಂತಿರುವ ಬೋರಗಿ ಪುರದಾಳ ಗುರು ಶಿಷ್ಯ ತತ್ವಪದ ಪರಂಪರೆ ನಾಡಿಗೆ ವಿಶಿಷ್ಠವಾದ ಕೊಡುಗೆ ನೀಡಿದೆ. ತತ್ವಪದ ಕ್ಷೇತ್ರದಲ್ಲಿ ಸಾವಿರಾರು ತತ್ವಪದಗಳನ್ನು ಸಾಹಿತ್ಯವಲಯಕ್ಕೆ ನೀಡಿದ ತಿಳಗೂಳದ ಶರಣಶ್ರೀ ಯಮನೂರೇಶ ಶರಣರ ಪುಣ್ಯಸ್ಮರಣೆಯ ನಿಮಿತ್ತವಾಗಿ ಅಗಷ್ಟ 3ನೇ ತಾರೀಖು ರವಿವಾರದಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಖಾಸ್ಗತೇಶ್ವರ ಸಭಾ ಭವನ "ತಾಳಿಕೋಟಿಯಲ್ಲಿ ತತ್ವಪದ ಸಂಭ್ರಮ " ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಾಡಿಗೆ ಅದ್ವೈತ ಸಂಸ್ಕೃತಿಯ ಸಿದ್ದಿಪುರುಷ ಅಬ್ಬೆತುಮಕೂರಿನ ವಿಶ್ವಾರಾಧ್ಯರು. ಅವರ ಪರಮ ಶಿಷ್ಯರು ಬೋರಗಿ ಪುರದಾಳದ ಯತಿರಾಜರು,ತತ್ವಪದಕಾರರು ಭೀಮಾಶಂಕರ ಮಹಾರಾಜರು.ಇವರ ಶಿಷ್ಯರು ತಿಳಗೂಳದ ಯಮನೂರೇಶ ಶರಣರು.45ಕ್ಕೂ ಹೆಚ್ಚು ಶರಣ ಸಾಹಿತ್ಯದ ಕೃತಿಗಳನ್ನು ಹಾಗೂ 1000ಕ್ಕೂ ಹೆಚ್ಚು ತತ್ವಪದಗಳನ್ನು ರಚಿಸಿದ್ದಾರೆ. ಸಮಗ್ರ ತತ್ವಪದಗಳನ್ನು " ಹುಟ್ಟು ಸಾವಿನ ಕಟ್ಟು ಹರಿದು" ಎಂಬ ಶಿರ್ಷಿಕೆ ಅಡಿಯಲ್ಲಿ ಬೆರಗು ಪ್ರಕಾಶನ ಕಡಣಿ ಆಲಮೇಲ ಅವರು ಸಾಹೇಬಗೌಡ ಯ ಬಿರಾದಾರ ಅವರ ಸಂಪಾದನೆಯಲ್ಲಿ ಪ್ರಕಟಿಸಿದ್ದಾರೆ. ಸಮಗ್ರ ತತ್ವಪದಗಳ ಗ್ರಂಥದಲ್ಲಿನ ಅಯ್ದ ತತ್ವಪದಗಳನ್ನು ನಾಡಿನ ಖ್ಯಾತ ಸಂಗೀತ ಕಲಾವಿದರಾದ ದೇವಿಂದ್ರಕುಮಾರ ಪತ್ತಾರ ಮುಧೋಳ ಅವರು ರಾಗ ಸಂಯೋಜಿಸಿದ್ದಾರೆ. ಖ್ಯಾತ ಸಂಗೀತ ವಿದೂಷಿ ಬಿಅರ್ ಛಾಯಾ, ಸಂಗೀತಾ ಕಟ್ಟಿ, ಶ್ರೀರಕ್ಷಾ ಅರವಿಂದ ಹಾಗೂ ರವೀಂದ್ರ ಸೋರಗಾವಿ ಮುಂತಾದವರು ತುಂಬಾ ಅಮೋಘವಾಗಿ ಹಾಡಿದ್ದಾರೆ. ಯಾವುದೇ ವಯಸ್ಸಿನ ಜನರಿಗೆ ಇಷ್ಟವಾಗುವ ರೀತಿಯಲ್ಲಿ ಧ್ವನಿಸುರಳಿ ಮೂಡಿಬಂದಿದೆ.
ಅಗಷ್ಟ 03 ನೇಯ ತಾರೀಖು ರವಿವಾರದಂದು ಬೆಳಿಗ್ಗೆ 10ಗಂಟೆಗೆ ಉದ್ಘಾಟನಾ ಸಮಾರಂಭ, ಕಾರ್ಯಕ್ರಮದ ದಿವ್ಯ ಸಾನಿಧ್ಯ ಬೋರಗಿ ಪುರದಾಳದ ಮಹಾಲಿಂಗೇಶ್ವರ ಮಹಾಸ್ವಾಮಿಗಳು, ಸಾನ್ನಿಧ್ಯ ತಾಳಿಕೋಟಿಯ ಸಿದ್ದಲಿಂಗ ದೇವರು ಹಾಗೂ ನೆತೃತ್ವ ತಿಳಗುಳದ ಶ್ರೀ ಜಕ್ರಭಗಳಾಂಭ ಶಕ್ತಿಪೀಠದ ಮಹೇಶ್ವರಾನಂದತೀರ್ಥ ಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕರಾದ ಎನ್ ಎಮ್ ಬಿರಾದಾರ ಅವರು ಅಧ್ಯಕ್ಷತೆವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜನಪದ ವಿದ್ವಾಂಸರಾದ ಎಂ.ಎಂ.ಪಡಶೆಟ್ಟಿ ಯವರು ನಿರ್ವಹಿಸಲಿದ್ದಾರೆ. ನಾಡಿನ ಖ್ಯಾತ ಸಾಹಿತಿಗಳು, ವಿಮರ್ಶಕರು, ಚಲನಚಿತ್ರ ನಿರ್ದೇಶಕರಾದ ರಾಜಶೇಖರ ಮಠಪತಿ(ರಾಗಂ) ಅವರು "ಹುಟ್ಟು ಸಾವಿನ ಕಟ್ಟು ಹರಿದು" ಎಂಬ ಯಮನೂರೇಶ ಶರಣರ ಸಮಗ್ರ ತತ್ವಪದಗಳ ಗ್ರಂಥ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ. ಧ್ವನಿಸುರಳಿಯನ್ನು ಕರ್ನಾಕಟ ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಸಾಹಿತಿಗಳು ಆಗಿರುವ ಮಹಾದೇವ ಬಸರಕೋಡ ಬಿಡುಗಡೆಗೊಳಿಸಲಿದ್ದಾರೆ. ಖ್ಯಾತ ವಾಗ್ಮಿಗಳು,ಚಿಂತಕರಾಗಿರುವ ಅಶೋಕ ಹಂಚಲಿ ಅವರು ಕೃತಿ ಪರಿಚಯ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪರುಶುರಾಮ ಚೌಡಕೇರ , ಅನುಭಾವಿಗಳು ಮುದ್ದೆಬಿಹಾಳ, ಡಾ.ವಿಜಯಕುಮಾರ ಕಾರ್ಚಿ ಖ್ಯಾತ ವೈದ್ಯರು ತಾಳಿಕೋಟಿ, ಡಾ.ಎಸ್.ಎಸ್.ಪಾಟೀಲ,ಖ್ಯಾತ ವೈದ್ಯರು ವಿಜಯಪುರ,ಹಾಗೂ ಹುಬ್ಬಳ್ಳಿ ಧಾರವಾಡದ ಜಿಎಸ್ ಟಿ ಉಪ ಆಯುಕ್ತರಾದ ಶಂಕರ ಬೆಳ್ಳುಬ್ಬಿ ಅವರು ,ಖ್ಯಾತ ಚಿಂತಕ ಅಬ್ದುಲ್ ರಹಮಾನ್ ಬಿದರಕುಂದಿ,ಕಡಣಿಯ ಬೆರಗು ಪ್ರಕಾಶನದ ರಮೇಶ ಕತ್ತಿ,ಚಿಂತಕರು ವಾಗ್ಮಿಗಳಾಗಿರುವ ಶ್ರೀಕಾಂತ ಪತ್ತಾರ ಅವರು ವಹಿಸಿಕೊಳ್ಳಲಿದ್ದಾರೆ.
ಗೋಷ್ಟಿ -1) ತತ್ವಪದ ದರ್ಶನ - ಮಧ್ಯಾಹ್ನ 12:30 ರಿಂದ ನಡೆಯಲಿದ್ದು, ಅಧ್ಯಕ್ಷತೆ ಮಕ್ಕಳ ಸಾಹಿತಿಗಳಾದ ಪ್ರೋ.ಚಂದ್ರಗೌಡ ಕುಲಕರ್ಣಿ, ಮುಖ್ಯ ಅತಿಥಿಗಳಾಗಿ ಚಡಚಣದ ಎಸ್ ಎಸ್. ಕಾಲೇಜಿನ ಡಾ.ಎಮ್.ಎಸ್ ಮಾಗಣಗೇರಿ ಅವರು ಹಾಗೂ ಜೇವರ್ಗಿ ಕಾಲೇಜಿನ ಉಪನ್ಯಾಸಕರಾದ ಡಾ.ಗೋವಿಂದರಾಜ ಆಲ್ದಾಳ ಅವರು ವಹಿಸಲಿದ್ದಾರೆ.ಖ್ಯಾತ ಉದ್ದಿಮೆದಾರರಾದಪ್ರಭುಗೌಡ ಮದರಕಲ್ಲ,ಕಸಾಪ ತಾಳಿಕೋಟಿಯ ತಾಲ್ಲೂಕಿನ ಅಧ್ಯಕ್ಷರಾದಅರ್ ಎಲ್ ಕೊಪ್ಪದ ,ಹುಣಸಗಿ ತಾಲ್ಲೂಕ ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಯಂಕನಗೌಡ ಅರಕೇರಿ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಬೊರಗಿ ಪುರದಾಳ ಪರಂಪರೆಯ ಅನುಭಾವಿಗಳಾದ ಬಸವರಾಜ ವಸ್ತಾರಿ ಅವರು ನಾ ಕಂಡ ಶರಣ ಯಮನುರೇಶ ಎಂಬ ವಿಷಯವಾಗಿ ಹಾಗೂ ಸಾಹಿತಿಗಳು ಚಿಂತಕರು ಆಗಿರುವ ಮನು ಪತ್ತಾರ ಕಲಕೇರಿ ಅವರು ಶ್ರೀ ಯಮನೂರೇಶರ ತತ್ವದರ್ಶನ ಎಂಬ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ.
ಗೋಷ್ಟಿ -2) ಮಧ್ಯಾಹ್ನ 2:30 ಕ್ಕೆ ತತ್ವಪದ ಸಂಭ್ರಮ ನಡೆಯಲಿದ್ದು ಹಿರಿಯ ಜಾನಪದ ವಿದ್ವಾಂಸರಾದ ಪ್ರೋ.ಬಿ ಅರ್ ಪೋಲಿಸ್ ಪಾಟೀಲರು ಅಧ್ಯಕ್ಷತೆವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಪ್ರೋ ಶೇಷಾಚಲ ಹವಾಲ್ದಾರರು ತಾಳಿಕೋಟಿ, ಶರಣೆ ಕಾಶಿಬಾಯಿ ಭಂಟನೂರ ಅನುಭಾವಿಗಳು ತಾಲಿಕೋಟಿ, ಜಿಲ್ಲಾ ಜಾಗತಿಕ ಲಿಂಗಾಯತ ಮಹಾ ಸಭಾ ವಿಜಯಪುರದ ಗೌರವ ಅಧ್ಯಕ್ಷರಾದ ಶರಣೆ ಚಂದ್ರಕಲಾ ಅವರು, ರಾಜಕೀಯ ಮುಖಂಡರಾದ ಅರ್.ಎಸ್.ಪಾಟೀಳ ಕೂಚಬಾಳ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ದಾಕ್ಷಾಯಣಿ ಹುಡೇದ ಬೆಂಗಳೂರ ಅವರು, ಸುರಪುರದ ಜನಪದ ಕವಿ, ಸಾಹಿತಿ ಕನಕಪ್ಪ ವಾಗಣಗೇರಿ ಅವರು, ತಾಳಿಕೋಟಿಯ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷರಾದ ಜಗದೀಶ ಬಿಳೇಭಾವಿ ಅವರು ಹಾಗೂ ದೇವರ ಹಿಪ್ಪರಗಿ ತಾಲ್ಲೂಕಿನ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಾಂತಗೌಡ ಯಾಳವಾರ ತಿಳಗೂಳ ಅವರು ಭಾಗವಹಿಸಲಿದ್ದಾರೆ. ನಾಡಿನ ಖ್ಯಾತ ತತ್ವಪದ ಗಾಯಕರುಗಳು ಭಾಗವಹಿಸಲಿದ್ದು,ಬೊರಗಿ ಪುರದಾಳ, ತಿಳಗೂಳ, ಹಂಚಲಿ ಹಾಗೂಹಳ್ಳದ ಗೆಣ್ಣೂರ ಭಜನಾ ಮಂಡಳಿಯವರು ಭಾಗವಹಿಸಲಿದ್ದಾರೆ.
ನಾಡಿನ ಖ್ಯಾತ ಹಾಸ್ಯ ಕಲಾವಿದರಾದ ಭಾಗೇಶ ಮುರಡಿ, ಅಜಿತ್ ಯಾಳಗಿ, ಎಸ್,ಎಸ್,ಮಾರನಾಳ, ಸಿದ್ದು ಕರಡಿ, ಅಪ್ಪಾಸಾಹೇಬ ಮೂಲಿಮನಿ,ಬಸವರಾಜ ಕುಂಬಾರ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಶಿವಲೀಲಾ ಮುರಾಳ ಅವರು ಪ್ರಾರ್ಥಿಸಲಿದ್ದಾರೆ. ಬಸವರಾಜ ಗೊರಜಿ, ಅಶೋಕ ಚಿನಗುಡಿ, ಕಾಶಿನಾಥ ಸಜ್ಜನ, ಭೀಮಣ್ಣ ಸೂಳಿಭಾವಿ, ಮುತ್ತು ಬಿರಾದಾರ, ಮಲ್ಲನಗೌಡ ಪಾಟೀಲ, ಶಿವಪುತ್ರ ನೆಲ್ಲಗಿ, ಮುತ್ತುಗೌಡ ಪೋಲಿಸ್ ಪಾಟೀಲ್, ಮಹಾಂತೇಶ ಮುರಾಳ ಹಾಗೂ ಸಮಸ್ತ ತತ್ವಪದ ಸಂಭ್ರಮ ಬಳಗ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 