ಶಿರಗುಪ್ಪಿಯ ಜಿನ್ನಪ್ಪಣ್ಣಾ ಚೌಗುಲೆ ಪುಣ್ಯಸ್ಮರಣೆ..! ಮಾ. 17 ರಂದು ಬೃಹತ್ ರಕ್ತದಾನ ಶಿಬಿರ ಆಯೋಜನೆ..!!

ಶಿರಗುಪ್ಪಿಯ ಜಿನ್ನಪ್ಪಣ್ಣಾ ಚೌಗುಲೆ ಪುಣ್ಯಸ್ಮರಣೆ..! ಮಾ. 17 ರಂದು ಬೃಹತ್ ರಕ್ತದಾನ ಶಿಬಿರ ಆಯೋಜನೆ..!! Commemoration of Shiraguppi's Jinnappanna Chowgule..! Ma. Big blood donation camp organized on 17th.

ಲೋಕದರ್ಶನ ವರದಿ 

ಕಾಗವಾಡ 15 :  ತಾಲೂಕಿನ ಶಿರಗುಪ್ಪಿ ಗ್ರಾಮದ ಸಹಕಾರಿ ರಂಗದ ಧುರೀಣ, ಸಹಕಾರರತ್ನ ದಿ. ಜಿನ್ನಪ್ಪಣ್ಣಾ ಪಾರೀಸಾ ಚೌಗುಲೆ ಅವರ 10 ನೇ ಪುಣ್ಯಸ್ಮರಣೆಯ ನಿಮಿತ್ತ ಮಂಗಳವಾರ ಮಾ.17 ರಂದು ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿನ್ನಪ್ಪಣ್ಣಾ ಚೌಗುಲೆ ಲಾಲಬಹಾದ್ದೂರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಭಮ್ಮಣ್ಣಾ ಚೌಗುಲೆ ತಿಳಿಸಿದ್ದಾರೆ. ಅವರು ರವಿವಾರ ದಿ. 15 ರಂದು ಸಂಸ್ಥೆಯ ಕಚೇರಿಯಲ್ಲಿ ಮಾತನಾಡುತ್ತಿದ್ದರು. ನಮ್ಮ ಸಂಸ್ಥೆಯ ಸಂಸ್ಥಾಪಕರಾದ ದಿ. ಜಿನ್ನಪ್ಪಣ್ಣಾ ಚೌಗುಲೆ ಅವರ ಪುಣ್ಯಸ್ಮರಣೆಯ ನಿಮಿತ್ಯ ಪ್ರತಿ ವರ್ಷ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತ ಬರುತ್ತಿದ್ದೇವೆ. ಈ ವರ್ಷ ಚಿಕ್ಕೋಡಿ ಆದರ್ಶ ಬ್ಲಡ್ ಬ್ಯಾಂಕ್ ಇವರ ಸಹಯೋಗದೊಂದಿಗೆ ಮಾ. 17 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ರಕ್ತ ಸಂಗ್ರಹಿಸಲಾಗುತ್ತದೆ. 

ರಕ್ತದಾನ ಒಂದು ಪವಿತ್ರ ಸೇವೆಯಾಗಿದ್ದು, ಇದರಿಂದ ಮತ್ತೊಬ್ಬರ ಜೀವ ಉಳಿಸುವ ಸಂತೃಪ್ತಿ ದೊರೆಯುತ್ತದೆ. ರಕ್ತದಾನದಿಂದ ದೇಹದಲ್ಲಿ ಹೊಸ ಕೆಂಪು ರಕ್ತಕಣಗಳು ಉತ್ಪತ್ತಿಯಾಗಿ ಆರೋಗ್ಯಕ್ಕೂ ಸಹಕಾರಿ ಆಗುತ್ತದೆ. ರಕ್ತದಾನ ಮಾಡುವವರಿಗೆ ಆರೋಗ್ಯ ತಪಾಸಣೆ, ಎಚ್‌ಬಿ ಹಾಗೂ ಬ್ಲಡ್ ಗ್ರುಪ್ ಪರೀಕ್ಷೆ ನಡೆಸಲಾಗುವುದು. ಅಲ್ಲದೇ ಪ್ರಮಾಣಪತ್ರ ಕೂಡ ನೀಡಲಾಗುವುದು. 18 ರಿಂದ 60 ವರ್ಷದೊಳಗಿನ ಹಾಗೂ 45 ಕೆ.ಜಿ.ಗಿಂತ ಹೆಚ್ಚು ತೂಕ ಹೊಂದಿರುವ ಆರೋಗ್ಯವಂತರು ರಕ್ತದಾನ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9916164810 ಮತ್ತು 9731777328 ಗೆ ಸಂಪರ್ಕಿಸಲು ಅವರು ಕೋರಿದ್ದಾರೆ.