ಮಹಾತ್ಮಾ ಗಾಂಧೀಜಿ ಪುಣ್ಯಸ್ಮರಣೆ: ಹುತಾತ್ಮರಾದವರ ಸ್ಮರಣಾರ್ಥ ಮೌನ ಆಚರಣೆ

ಗದಗ 30 : ಮಹಾತ್ಮಾ ಗಾಂಧೀಜಿ ಅವರ ಪುಣ್ಯಸ್ಮರಣೆ ಹಾಗೂ  ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ  ಜ್ಞಾಪಕಾರ್ಥವಾಗಿ   ಗದಗ  ಜಿಲ್ಲಾಡಳಿತ ಭವನದ ಮುಖ್ಯ  ಸಭಾಂಗಣದಲ್ಲಿಂದು  ಮೌನಾಚರಣೆ ಜರುಗಿತು.   ಗದಗ  ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಅಪರ ಜಿಲ್ಲಾಧಿಕಾರಿ  ಸತೀಶಕುಮಾರ್,  ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಡಾ. ಆನಂದ್ ಕೆ,  ಉಪಕಾರ್ಯದರ್ಶಿ  ಬಿ. ಕಲ್ಲೇಶ ,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಿಡದ, ಜಿಲ್ಲಾ ಕುಷ್ಟ ರೋಗ ನಿಯಂತ್ರಣಾಧಿಕಾರಿ   ವೈ.ಕೆ. ಭಜಂತ್ರಿ ,    ಡಾ. ಅರುಂಧತಿ ಕೆ ಸೇರಿದಂತೆ   ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕತರ್ೆಯರು,   ಕಾಲೇಜು ವಿದ್ಯಾಥರ್ಿಗಳು   ಇದ್ದರು.