ಶೀಘ್ರದಲ್ಲೇ ಬರಲಿದ್ದಾರೆ ಹೋಂ ಮಿನಿಸ್ಟರ್

ಬೆಂಗಳೂರು, ಜೂನ್ 12, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಹೋಂ ಮಿನಿಸ್ಟರ್’ ತೆರೆಗೆ ಬರಲು ಸಿದ್ಧವಾಗಿದೆ. ಶ್ರೇಯಸ್ ಚಿತ್ರ ಹಾಗೂ ವಾಟರ್ ಕಲರ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್ ವಿ ಅವರು ನಿರ್ಮಿಸಿರುವ, ' ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ.ಸರ್ಕಾರ ಚಿತ್ರಮಂದಿರ ತೆರೆಯಲು ಒಪ್ಪಿಗೆ ನೀಡಿದ ಕೂಡಲೆ, ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆದಿದೆ... ಶ್ರೀಹರಿ ನಿರ್ದೇಶನದ ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ.. 

'ಹೋಂ ಮಿನಿಸ್ಟರ್' ಅಂದರೆ ರಾಜಕೀಯ ಚಿತ್ರ ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ಅದರ ಹೊರತಾಗಿ ಈ ಚಿತ್ರದಲ್ಲಿ ಈ‌‌ ಪದ ಯಾವ ರೀತಿ ಬಳಕೆಯಾಗಿದೆ ಎಂಬ ಕುತೂಹಲ ಚಿತ್ರ ಬಿಡುಗಡೆ ನಂತರವಷ್ಟೇ ತಿಳಿಯಲಿದೆ.ಅದ್ದೂರಿ ತಾರಾಬಳಗ ಹಾಗೂ ಅಪಾರ ವೆಚ್ಚದ ಈ‌ ಚಿತ್ರದ ಚಿತ್ರೀಕರಣ ‌ಬೆಂಗಳೂರು, ಮಲೇಷಿಯಾ ಮುಂತಾದ ಕಡೆ ನಡೆದಿದೆ.ಜಿಬ್ರಾನ್ ಸಂಗೀತ ನಿರ್ದೇಶನ, ಕುಂಜಮಣಿ ಛಾಯಾಗ್ರಹಣ, ಆಂತೋಣಿ ಸಂಕಲನ, ಚಂಪಕಧಾಮ ಬಾಬು ನಿರ್ಮಾಣ ನಿರ್ವಹಣೆ, ಸುರೇಶ್ ಕೊಡೂರು ಸಹ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿದೆ.ಉಪೇಂದ್ರ, ವೇದಿಕಾ, ತಾನ್ಯ ಹೋಪ್, ಶ್ರೀನಿವಾಸಮೂರ್ತಿ, ಅವಿನಾಶ್, ಮಾಳವಿಕ ಅವಿನಾಶ್, ಸುಮನ್ ರಂಗನಾಥ್,  ಸಾಧುಕೋಕಿಲ,‌ ತಿಲಕ್, ಅಭಿಮನ್ಯು ಸಿಂಗ್, ವಿಜಯ್ ಚೆಂಡೂರ್, ಚಿದಾನಂದ್, ಬೇಬಿ ಆದ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.